ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಸ್ವರೂಪ

೨೯೧

ಉಂಟಾಗುತ್ತದೆ, ಕ್ಷಣಕಾಲ. ಅಂದರೆ ಸಭ್ಯ ರೀತಿಯಲ್ಲಿ, ಶಿಸ್ತಿನ ಬಾಳನ್ನು ದೃಢತೆಯಿಂದ ಸಾಧಿಸುವ, ಸಮಾಜದಲ್ಲಿ ಸೈ ಎಂದನಿಸಿಕೊಂಡ ಸಾಧುಗಳಲ್ಲಿ ಕೂಡ, ಸಮಾಜದ ಕಟ್ಟುಪಾಡುಗಳನ್ನು ಅಲ್ಲಗಳೆದ, ದುರಭ್ಯಾಸಿಗಳನ್ನು ಕಂಡು, ಮರುಕವೂ, ಜತೆಯಲ್ಲಿ ಮಾತ್ಸಲ್ಯದ ಅಂಚೂ, ಎರಡೂ ಕಾಣಬರುತ್ತವೆ. ಮಾತ್ಸಲ್ಯವನ್ನು ಅರಿ-ಷಡ್ವರ್ಗದ-ಒಂದನ್ನು ಬಲಿಹಾಕಲು, ಅಂತಹವರಿಗೆ ಸ್ಫೂರ್ತಿಯು ಹೆಡೆಯೆತ್ತಿ ಆಡತೊಡಗುತ್ತದೆ. ಆಗ ಮಾತ್ಸರವು ಮರುಕದ ಹಿನ್ನೆಲೆಯಲ್ಲಿ, ಅನುಕಂಪದ ಪರದೆಯ ಮುಂದೆ, 'ಯೆಂಡ್ಕುಡುಕ' ರತ್ನವಾಗುತ್ತದೆ. ಕುಡಿಯದೇ ಇದ್ದರೂ, ಕುಡಿದವರಿಗಿಂತ ಅತ್ಯಮೋಘವಾಗಿ ಸ್ಫೂರ್ತಿಯನ್ನು ಪಡೆದು ಅಮರರಾಗುತ್ತಾರೆ; ಚಿರಂಜೀವಿಗಳಾಗುತ್ತಾರೆ. ಸಹಸ್ರಮಂದಿ ಕುಡಿಯುವವರನ್ನು, ಕುಡಿದು ನರಳುವವರನ್ನು ಕಂಡು, ಮರುಕದಿಂದ ನುಡಿಯುವವನು, ಮಾತ್ಸಲ್ಯದಿಂದ ಕ್ಷಣಾಂಶ ಪ್ರಚೋದಿತನಾಗಿ, 'ಪುರುಷಾಯ ಶಾಶ್ವತ' ನಾಗುತ್ತಾನೆ. ಮರುಕದ ಮಹಾ ಪ್ರತೀಕನಾಗುತ್ತಾನೆ. 'ಮಹಾ ಕರುಣಿ' ಯಾಗುತ್ತಾನೆ.

ಮಾದಕ ದ್ರವ್ಯಗಳಿಂದ ಮನಸ್ಸು ಈ ವಿಪರೀತಗಳನ್ನು ಅನುಭವಿಸುತ್ತದೆ; ನಡವಳಿಕೆಯಲ್ಲಿ ತೋರಗೊಡುತ್ತದೆ ಆದರೆ ಸಾಮಾನ್ಯವಾಗಿ ಉಣ್ಣುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಮನಸ್ಸಿನ ಚುರುಕು, ಕಡಿಮೆಯಾಗುವುದೂ ಉಂಟು. ಅವರೆಕಾಯಿ ಉಪ್ಪಿಟ್ಟಿಗೆ ಆ್ಯಂಡಿ ಮೊಸರನ್ನು ಕಲಸಿ ಗಡದ್ದಾಗಿ ತಿಂದರೆ, ಅನಂತರ ಮನಸ್ಸು ಜಡವಾಗುತ್ತದೆ. ಓದಲು ಮಾದಕ ಪದಾರ್ಥಗಳನ್ನು ಸೇವಿಸಿದಂತೆ ಆಗುತ್ತದೆ. ಆದರೆ ಮೊದಮೊದಲ ಹಂತದಲ್ಲಿ ಮನಸ್ಸು ಚುರುಕೇನೂ ಆಗುವುದಿಲ್ಲ. ತೆಪ್ಪಗೆ ಬಿದ್ದುಕೊಳ್ಳೋಣ ಎನಿಸುತ್ತದೆ. ಸಾಮಾನ್ಯವಾಗಿ ಸಭ್ಯಸ್ಥರೂ ಸೇವಿಸುವ ಕಾಫಿ, ಟೀ, ಇತ್ಯಾದಿ ಪಾನೀಯಗಳು, ಮನಸ್ಸಿನ ಚುರುಕನ್ನು ಹೆಚ್ಚಿಸುತ್ತದೆ. ಪರೀಕ್ಷೆಗೆಂದು ಓದುವವರಿಗೆ ಇದು ಸ್ವಯಂ ವೇದ್ಯ.

ಜಲ, ಮಲ ವಿಸರ್ಜನೆಯಲ್ಲಿ ಕಸಿವಿಸಿಗೊಂಡಿರುವವನು, ತನ್ನ ಮನಸ್ಸನ್ನು ಸಹಜರೀತಿಯಲ್ಲಿ ನಡೆಸಲಾರ. ಅಂತಹವನ ಮನಸ್ಸು ಸ್ವಲ್ಪ ಮಟ್ಟಿಗೆ ವಕ್ರವಾಗಿಯೇ ನಡೆಯುತ್ತದೆ. ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ತಪ್ಪುಗಳನ್ನೇ ಗಮನಿಸುತ್ತಾನೆ. ಮುಖವನ್ನು ಸಿಂಡರಿಸಿಕೊಂಡು ವಿನಾಕಾರಣ ರೇಗುತ್ತಾನೆ. ವಿಸರ್ಜನಾ ಕ್ರಮಗಳು ಸುಸೂತ್ರವಾಗಿದ್ದಾಗ, ಅದೇ ಮನುಷ್ಯ ನಗುನಗುತಲಿದ್ದು, ಎಲ್ಲದರಲ್ಲಿಯೂ ಒಪ್ಪನ್ನೇ ಕಾಣುತ್ತಾನೆ. ಆಗ ಅವನ ಮನಸ್ಸು ಹಗುರ ; ಚುರುಕಾಗಿ ಕೆಲಸ ಮಾಡುತ್ತಾನೆ.