ಮನಮಂಥನ
ಹೀಗಾಗುತ್ತಿರಬಹುದೇ? ಇದನ್ನು ಬಲು ಎಚ್ಚರದಿಂದ ಪರಿಶೀಲಿಸಬೇಕು, ಎಂದುಕೊಂಡೆ. 'ನಾಳೆಯ ಬೆಳಗ್ಗೆ ಬಾಪ್ಪ, ಸದ್ಯಕ್ಕೆ ಈ ಔಷಧಿಯನ್ನು ಸೇವಿಸು, ಇದರಿಂದ ಎಷ್ಟು ಗುಣವಾಗುತ್ತದೆ ನೋಡಿಕೊಂಡು, ಚಿಕಿತ್ಸೆಯನ್ನು ಮುಂದುವರಿಸೋಣ. ನಿನ್ನ ಬೇನೆಯು ತುಂಬಾ ಅಲ್ಪವಾದುದು. ಬೇಗ ಗುಣವೂ ಆಗುತ್ತೆ. ಆದರೆ ನರಳುತ್ತಿರುವ ನಿನಗೆ ಘೋರವಾಗಿ ಕಾಣಿಸುತ್ತೆ' ಎಂದು ಧೈರವನ್ನು ಹೇಳಿ, ರೋಗಿಯನ್ನೂ ಅವನ ತಂದೆಯನ್ನೂ ಕಳಿಸಿಕೊಟ್ಟೆ. ಸಂಜೆ ಮನೆಯಲ್ಲಿ ಈ ಬೇನೆಯ ವಿಷಯದಲ್ಲಿ ವೈದ್ಯ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಇತ್ತೀಚಿನ ಲೇಖನಗಳನ್ನು ವ್ಯಾಸಂಗ ಮಾಡಿದರೆ, ನಾಳೆ ರೋಗಿಯನ್ನು ಪುನಃ ಪರೀಕ್ಷಿಸುವಾಗ ಹೆಚ್ಚು ಉಪಯೋಗವಾಗಬಹುದು ಎಂದು ಯೋಚಿಸಿದೆ.
ಮಾರನೆಯ ದಿನ ರೋಗಿಯು ಬಂದಾಗ, ಸೂಕ್ಷ್ಮವಾಗಿ ಪರೀಕ್ಷೆ ಮಾಡಲು, ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆ. ಯಾವ ಬೇನೆಯ ಚಿಕಿತ್ಸೆಗಾಗಲೀ ರೋಗಿಯು ವೈದ್ಯನ ಬಳಿಗೆ ಹೋದಾಗ, ಅತ್ಯಗತ್ಯವಾದುದು, ವೈದ್ಯನ ಸಹಾನುಭೂತಿ ಮತ್ತು ಅನುಕಂಪ. ಎಲ್ಲ ವೈದ್ಯರಲ್ಲಿಯೂ ಇವೆರಡೂ ಅಧಿಕ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಆದರೆ ಇದನ್ನು ರೋಗಿಗೆ ಮನತಟ್ಟುವಂತೆ ಪ್ರದರ್ಶಿಸುವುದೂ ಅತ್ಯವಶ್ಯಕ. ಹೀಗೆ ಮಾಡಬೇಕಾದರೆ ಸಾವಧಾನವಾಗಿ ವೈದ್ಯನು ಮಾತನಾಡಬೇಕು. ಅವಸರವಿಲ್ಲದೇ ಮಾತನಾಡಬೇಕು. ನಮ್ಮ ದೇಶದ ಇಂದಿನ ಸ್ಥಿತಿಯಲ್ಲಿ ಇಷ್ಟು ವ್ಯವಧಾನವು ಯಾವ ವೈದ್ಯನಿಗೂ ಇರುವುದಿಲ್ಲ. ಆದರೂ ಸಾಧ್ಯವಾದಷ್ಟು ಹಿತವಾಗಿ ಮಾತನಾಡಿದರೆ, ಸಾಕಷ್ಟು ಗುಣವಾಗುತ್ತದೆ; ಏಕೆಂದರೆ, ದೈಹಿಕ ಏರುಪೇರುಗಳನ್ನು ಔಷಧವು ಸರಿಪಡಿಸುವುದರಿಂದ,
ಆದರೆ ಮಾನಸಿಕ ಬೇನೆಗಳಿಂದ ನರಳುತ್ತಿರುವವನಿಗೆ, ವೈದ್ಯರ ಸಹಾನುಭೂತಿ ಮತ್ತು ಅನುಕಂಪದ ಪ್ರದರ್ಶನವೂ ಅತ್ಯಗತ್ಯ. ಸಹಾನುಭೂತಿಯಾಗಲೀ ಅನುಕಂಪವಾಗಲೀ ವೈದ್ಯನ ಮನಸ್ಸಿನಲ್ಲಿ ಇರಲಿ, ಇಲ್ಲದೇ ಬರೀ ಬೇಸರವೇ ತುಂಬಿರಲಿ, ಅದು ಮುಖ್ಯವಲ್ಲ, ಸಹಾನುಭೂತಿಯಿದೆ ಎಂದು ಲಕ್ಷಣವಾಗಿ ನಟಿಸಿದರೂ ಆಯಿತು. ಆಗ ರೋಗಿಯ ಮನಸ್ಸಿನಲ್ಲಿ 'ವೈದ್ಯನಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿದೆ, ನನಗಾಗಿ ಶ್ರಮವಹಿಸುತ್ತಿದ್ದಾರೆ' ಎಂಬ ನಂಬಿಕೆಯು ಉಂಟಾದರೆ ಸಾಕು, ಸ್ವಲ್ಪ ಪಲ್ಲಟವಾಗುತ್ತಿರುವ ರೋಗಿಯ ಮನಸ್ಸು, ಈ ನಂಬಿಕೆಯನ್ನು ದೃಢವಾದ ಊರೆಗೋಲನ್ನಾಗಿ ಮಾಡಿಕೊಂಡು ಸ್ತಿಮಿತಕ್ಕೆ ಬರಲು ಯತ್ನಿಸುತ್ತದೆ. ಬಹುತೇಕ ಈ ಯತ್ನವು ಜಯವನ್ನು ಗಳಿಸುತ್ತದೆ.
ಆದಕಾರಣ ನಾಟಕೀಯವಾಗಿ ರೋಗಿಯನ್ನು ಮಾತನಾಡಿಸಲಾರಂಭಿಸಿದೆ.