ಮನಮಂಥನ
ಅವಮಾನವಾದಂತಾಗುತ್ತದೆ. ಹೀನಾಯ ಮನೋಭಾವವು ರೋಗಿಯ ಮನಸ್ಸಿನಲ್ಲಿ ಉಂಟಾಗುತ್ತದೆ. ರೋಗಿಯ ಮನೆಯ ನೆಂಟರಿಗೂ, ಇದೊಂದು ಅಪಕೀರ್ತಿ ಎಂದನಿಸುತ್ತದೆ. ಪ್ರಾಯಶಃ ಈ ಕಾರಣದಿಂದ, ಮಾನಸಿಕ ಪಲ್ಲಟಗಳ ಒಂದು ಹಂತದಲ್ಲಿ, ಅವನ್ನು ದೆವ್ವ ಹಿಡಿದಿದೆ ಎಂದನ್ನುತ್ತಿದ್ದರೇನೋ ! ಆಗ ಅಪಕೀರ್ತಿಯ ಸೋಂಕು ಮನೆತನಕ್ಕೆ ಬಡಿಯುವುದಿಲ್ಲವಲ್ಲ ! ಒಂದು ಹಂತವನ್ನು ಮೀರಿದರೆ, ಮಾನಸಿಕ ಪಲ್ಲಟದಿಂದಾಗಿ ರೋಗಿಯು ಮನೆಯವರಿಗೆ ಮತ್ತು ಸುತ್ತಲಿನ ಸಮಾಜಕ್ಕೆ ಕಂಟಕವಾಗುತ್ತಾನೆಯೋ, ಆಗ ಹುಚ್ಚು ಬೆಪ್ಪು ಶಿವಲೀಲೆಯು ಹಿಡಿದಿದೆ ಎಂದನ್ನುತ್ತಿದ್ದರು.
ಪರೀಕ್ಷೆಯ ಆತಂಕವು ಹೆಚ್ಚಾಗಿರುತ್ತದೆ. ಮದುವೆಗೆ ನೆರೆದ ಹುಡುಗಿಯನ್ನು ಗಂಡಿನವರು ಬಂದು ನೋಡುತ್ತಾರೆ ಎಂದಾಗ ಹೆಣ್ಣಿನಲ್ಲಿ ಆತಂಕವು ಉಲ್ಬಣವಾಗುತ್ತದೆ. ಕೆಟ್ಟ ಕನಸು ಬಿದ್ದು ನಿದ್ರೆಯನ್ನು ಕೆಡಿಸಿ ಎಚ್ಚರಗೊಳಿಸಿದಾಗ, ಭಯವಾಗಿರುತ್ತದೆ. ಇಂತಹ ಮಾನಸಿಕ ಉದ್ವೇಗವಾದಾಗ, ಹೃದಯವು ನಗಾರಿಯಂತೆ ಡಬ ಡಬ ಹೊಡೆದುಕೊಳ್ಳುತ್ತದೆ. ಇಂತಹವರು ತಮಗೆ ಹೃದಯದ ಬೇನೆಯು ಆರಂಭವಾಗಿರಬಹುದು ಎಂದು ಶಂಕಿಸುತ್ತಾರೆ. ಸಂದೇಹವೇ ಹೃದಯದ ಡಬಡಬವನ್ನು ಇನ್ನೂ ಹೆಚ್ಚಿಸುತ್ತದೆ.
ಪರೀಕ್ಷೆಗೆಂದು ವ್ಯಾಸಂಗ ಮಾಡುತ್ತಿರುವವನಿಗೆ, ಆತಂಕದಿಂದ ಹೃದಯವು ಡಬಡಬ ಮಾಡಿದರೆ ಚಿಕಿತ್ಸೆಗೆಂದು ವೈದ್ಯನ ಬಳಿಗೆ ಹೋಗುತ್ತಾನೆ. ಪರೀಕ್ಷೆಯ ಸಮಯದಲ್ಲಿ ಕಾಯಿಲೆಯು ಬಂತು, ಚಿಕಿತ್ಸೆಯನ್ನು ಪಡೆದೆ. ವ್ಯಾಸಂಗವನ್ನು ಮಾಡಲಾಗಲಿಲ್ಲ, ಎಂಬ ಸಬೂಬನ್ನು ನಪಾಸಾದಾಗ ಹೇಳಿಕೊಂಡು, ಮನಸ್ಸಿಗೆ ಸ್ವಲ್ಪ ಸಮಾಧಾನವನ್ನು ಪಡೆಯಬಹುದು. ಮನೋದೈಹಿಕ ಬೇನೆಗಳು, ಮಾನಸಿಕ ತಳಮಳದ ಸಮಾಧಾನಕ್ಕೆ, ಪ್ರಕೃತಿಯು ಹೂಡುವ ಉಪಾಯ, ಪ್ರಕೃತಿಯ ಇಂತಹ ಉಪಾಯವೇ ಹಿಸ್ಟಿರಿಯಾ ಬೇನೆಗೆ ಮೂಲಭೂತ ಕಾರಣ.
ವಸ್ತುವಾದ ದೇಹಕ್ಕೂ, ಶಕ್ತಿಯಾದ ಮನಸ್ಸಿಗೂ ನಿಕಟ ಸಂಬಂಧವಿರುವುದನ್ನು ತಿಳಿದೆವು, ಹಚ್ಚಹಸಿರು ಬಳ್ಳಿಯನ್ನು ನೋಡಿದಾಗ, ಅದರಲ್ಲಿ ಕಂಗೊಳಿಸುವ ವರ್ಣವರ್ಣದ ಹೂವನ್ನು ನೋಡಿದಾಗ, ಒಂದು ಇನ್ನೊಂದನ್ನು ಹೇಗೆ ಹುಟ್ಟಿ ಬೆಳೆಸಿತು ಎಂದು ಆಶ್ಚರ್ಯವಾಗುತ್ತದೆ. ಹೂವು ಪಕ್ವವಾಗಿ, ನಂತರ ಕಾಯಾಗಿ, ಹಣ್ಣಾಗಿ, ಬೀಜಗಳನ್ನು ಉತ್ಪಾದಿಸಿ ಎಲ್ಲೆಲ್ಲೂ ಹರಡುತ್ತದೆ. ಅನುಕೂಲವಾದ ನೆಲದಲ್ಲಿ ಬೀಜವು ಬಿದ್ದು, ಮೊಳಕೆಯನ್ನು ಹೂಡಿ, ಬಳ್ಳಿಯು ಬೆಳೆಯಲಾರಂಭಿಸುತ್ತದೆ. ಬಳ್ಳಿ, ಹೂವು ಇವುಗಳ ಪರಸ್ಪರ ಸಂಬಂಧವೇ,