೨೯೫
ದೇಹ ಮತ್ತು ಮನಸ್ಸಿಗೂ ಇದೆ ಎಂದು ಸ್ಕೂಲವಾಗಿ ಹೇಳಬಹುದು. ಏಕೆಂದರೆ ಮನಸ್ಸಿನ ಸತ್-ಚೈತನ್ಯಾಂಶದಿಂದ ವಿಶಾಲವಾಗಿ ಹರಡಬಹುದು.
ಮನಸ್ಸಿನ ಒಂದು ಅವಸ್ಥೆಯು ಧ್ಯಾನ ಎಂಬುದು. ಧ್ಯಾನವು ದೇಹದ ಮೇಲೆ ಪವಾಡದಂತೆ ಪರಿಣಾಮವನ್ನುಂಟುಮಾಡುವುದಕ್ಕೆ ಸಾಕ್ಷ್ಯಗಳಿವೆ. ಲೂರ್ಡ್ಸ್ ಎಂಬ ಯಾತ್ರಾಸ್ಥಳದಲ್ಲಿ, ಕ್ಷಯರೋಗದಿಂದ ಉಗ್ರ ರೀತಿಯಲ್ಲಿ ನರಳುತ್ತಿದ್ದ ರೋಗಿಯನ್ನು ಕರೆದೊಯ್ದಾಗ, ರೋಗಿಗೆ ಕೆಲವೇ ತಾಸುಗಳಲ್ಲಿ ಪೂರ್ಣವಾಗಿ ಗುಣವಾಯಿತು. ಇನ್ನೇನು, ಕೆಲವು ದಿನಗಳಲ್ಲಿ ಸಾಯುತ್ತಾಳೆ, ಎಂದು ವೈದ್ಯರು ನಿರ್ಧರಿಸಿದ್ದ ರೋಗಿಯೂ, ಪವಾಡದಂತೆ ಕೆಲವೇ ತಾಸುಗಳಲ್ಲಿ ಗುಣವಾದುದು, ಧ್ಯಾನಮಂದಿರದ ಪ್ರಭಾವದಿಂದ ಎಂದು ಒಪ್ಪಿಕೊಳ್ಳಬೇಕು. ನೊಬೆಲ್ ವಿಜೇತ ಕೀರ್ತಿಶೇಷ ಅಲೆಕ್ಸಿಸ್ ಕ್ಯಾರಲ್, ಈ ಪವಾಡವನ್ನು ವಿವರಿಸಿದ್ದಾನೆ. ಧ್ಯಾನದಿಂದ, ತನ್ನ ದೇಹದ ಮೇಲೆ ಪರಿಣಾಮವಾಗುವುದನ್ನು ಒಪ್ಪಬಹುದು. ಆದರೆ ಧ್ಯಾನ ಮಂದಿರದಲ್ಲಿ ಇತರ ರೋಗಿಗಳ, ನಂಬಿಕೆಯೂ ಇರದ ರೋಗಿಗಳ ದೇಹದ ಮೇಲೆ ತೀವ್ರವಾಗಿ ಉತ್ತಮ ಫಲಿತಾಂಶವು ದೊರೆಯುತ್ತದೆ, ಎನ್ನುವುದನ್ನು ಒಪ್ಪಲು ಬಲು ಕಷ್ಟ. ಆದರೆ ಇಂತಹ ಪವಾಡಗಳು ಆಗಿಯೇ ಇವೆ ; ಆಗುತ್ತಲೂ ಇವೆ-ಹೇಗೆ ಎಂಬುದು ಇಂದಿನ ಮನೋವೈಜ್ಞಾನಿಕ ಹಂತದಲ್ಲಿ ತಿಳಿಯದೆ ಇದ್ದರೂ ಹೀಗೆ ಆಗುತ್ತದೆ ಎಂಬುದನ್ನು ನಂಬಲೇಬೇಕು. ಪ್ರತ್ಯಕ್ಷ ಪ್ರಮಾಣವು ಇಂತಹ ಪವಾಡವು ಆದರೆ ಇಂತಹ ಉತ್ತಮ ಪರಿಣಾಮವು ಧ್ಯಾನಮಂದಿರಕ್ಕೆ ಹೋದವರಿಗೆಲ್ಲಾ ಲಭಿಸುವುದಿಲ್ಲ. ಏಕೆ ಎಂಬುದು ಯಾರಿಗೂ ತಿಳಿದಿಲ್ಲ. ಹೇಗೆ ಎಂಬುದು ತಿಳಿದ ಮೇಲೆ ಏಕೆ ಎಂದು ಯೋಚಿಸಲು ಸಾಧ್ಯ.
ಧ್ಯಾನಾವಸ್ಥೆಯಲ್ಲಿ, ಮನಸ್ಸನ್ನು ಅವ್ಯಕ್ತವಾಗಿ ನಡೆಸುವ, ಮನಸ್ಸಿನ ಒಂದು ಅಂಶವಾದ ಸತ್ ಚೈತನ್ಯದಿಂದ, ಇಂತಹ ಪವಾಡಗಳು ನಡೆಯುತ್ತವೆ ಎಂದು, ಇಂದಿನ ವೈಜ್ಞಾನಿಕ ಹಂತದಲ್ಲಿ ವಿಚಾರಪರರು ಊಹಿಸಬಹುದು. ಇದರ ವಿವರಗಳನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಯೋಣ.
ಸ್ಥಾವರ ಮತ್ತು ಜಂಗಮ
ರೇಷನ್ ಅಂಗಡಿಯ ಬಳಿಯಲ್ಲಿ ಎರಡು ಗಂಟೆ ಕ್ಯೂ ನಿಂತು, ನಂತರ ಅಂಗಡಿಯವರ ಔದಾರದಿಂದ ಎರಡು ವಾರಗಳ ಕೋಟಾವನ್ನು ಒಟ್ಟಿಗೆ ಪಡೆದೆ. ಅಷ್ಟನ್ನೂ ಹೊತ್ತುಕೊಂಡು ಮನೆಯ ಕಡೆಗೆ ಹೊರಟೆ. ರೇಷನ್ ಅಂಗಡಿಯಿಂದ ನನ್ನ ಮನೆಗೆ ಮೂರು ಕಿಲೋಮೀಟರ್ ದೂರವಿದೆ. ಆದರೆ ಭಾರವನ್ನು