ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೯೮

ಮನಮಂಥನ

ಕಾಡುಪ್ರಾಣಿಗಳ ಸ್ಪರ್ಧಾಜೀವನದಲ್ಲಿ ಬದುಕಿ ಉಳಿಯಲು ಸಾಧ್ಯವಾಯಿತು. ಸಿಂಹ ಮತ್ತು ಹುಲಿಗಳು, ತಮ್ಮ ದೇಹಬಲದಿಂದ, ಹಾಗೂ ಚುರುಕು ವೇಗದಿಂದ, ತಮ್ಮ ಇರುವಿಕೆಯನ್ನು ಮುಂದುವರೆಸಿಕೊಂಡವು. ಹುಲ್ಲೇ, ಚಿಗರೆ, ಕುದುರೆ ಮುಂತಾದುವು ಅತಿವೇಗದ ಓಡುವಿಕೆಯನ್ನು ಸಾಧಿಸಿಕೊಂಡು, ತಮ್ಮ ವಂಶಗಳನ್ನು ಉಳಿಸಿಕೊಂಡವು. ಪಕ್ಷಿಗಳು ಎತ್ತರದಲ್ಲಿ ಹಾರಾಡುವುದರಿಂದ, ನೆಲದ ಮೇಲೆ ಜೀವಿಸುವ ಶತ್ರು ಪ್ರಾಣಿಗಳಿಂದ, ರಕ್ಷಣೆಯನ್ನು ಪಡೆದವು. ಆದರೆ ಆಹಾರಕ್ಕಾಗಿ ಭೂಮಿಗೆ ಇಳಿಯಬೇಕಾಯಿತು. ಸಂಸಾರವನ್ನು ನಡೆಸಿ, ವಂಶಾಭಿವೃದ್ಧಿಯನ್ನು ಮುಂದುವರೆಸಲು, ಮರಗಳಲ್ಲಿ ಗೂಡನ್ನು ಕಟ್ಟಿಕೊಳ್ಳಬೇಕಾಯಿತು. ಉರಗಗಳು ನೆಲದಮೇಲೆ ಹರಿದಾಡುತ್ತ, ಎಲೆಬಳ್ಳಿಗಳ, ಕಲ್ಲುಮಣ್ಣುಗಳ, ಮರೆಯಲ್ಲಿ ರಕ್ಷಣೆಯನ್ನು ಪಡೆಯುತ್ತ ಬಾಳಿ ಬದುಕುತ್ತಿದ್ದುವು. ಪಕ್ಷಿಗಳು ಅಂದರೆ ಖಗಗಳು ! ಉರಗಗಳು ಎಂದರೆ ಹರಿದಾಡುವುವು, ಇವೆರಡೂ ಜೀವದ ಒಂದೇ ಕಿರುರೆಂಬೆಯಿಂದ ಕವಲೊಡೆದು ಬಾಳತೊಡಗಿದುವು. ಹುಟ್ಟುವಾಗ ಅಣ್ಣತಮ್ಮಂದಿರು ಬೆಳೆದ ಮೇಲೆ ದಾಯಾದಿಗಳು ಎನ್ನುವ ಗಾದೆಗೆ, ಖಗ-ಉರಗಗಳು ಒಂದು ಪುರಾತನ ನಿದರ್ಶನ ಪಕ್ಷಿಗಳು ಹಾವುಗಳನ್ನು ಕಂಡಾಗ, ದಕ್ಕಿಸಿಕೊಳ್ಳುತ್ತವೆ, ನವಿಲು, ಗರುಡ ಇತ್ಯಾದಿಗಳು ಭಾರೀ ಹಾವುಗಳನ್ನೂ ಕುಕ್ಕಿ ಕೊಂದು ಉಣ್ಣುತ್ತವೆ. ಪಕ್ಷಿಗಳು ಮರಗಳಲ್ಲಿ ಗೂಡನ್ನು ಕಟ್ಟಿಕೊಂಡು, ಮೊಟ್ಟೆಯನ್ನಿಟ್ಟಾಗ, ಉರಗಗಳು ಮರವನ್ನೇರಿ, ಶತ್ರುಗಳಾದ ಪಕ್ಷಿಗಳ ಮೊಟ್ಟೆಗಳನ್ನು ಕಬಳಿಸುತ್ತವೆ.

ಕತ್ತೆಗಳಂತೆ, ಕುದುರೆಗಳಂತೆ ಮನುಷ್ಯನು ಹಿಂಗಾಲುಗಳಿಂದ ಒದ್ದು ಶತ್ರುವನ್ನು ಕುಂಟಿಸಲಾರ ; ಹುಲಿಗಳಂತೆ ಸಿಂಹಗಳಂತೆ ಕಳ್ಳತನದಲ್ಲಿ ಹಿಂಬಾಲಿಸಿ, ಛಂಗಿಸಿ ಒಂದೇ ಏಟಿಗೆ ದನವನ್ನು ಕೊಂದು ಆಹಾರವನ್ನು ಪಡೆಯಲಾರ ; ಹದ್ದುಗಳಂತೆ ತೀಕ್ಷ್ಯ ದೃಷ್ಟಿಯನ್ನು ಪಡೆದು, ನೆಲದ ಮೇಲೆ ನಡೆಯುವ ಪ್ರಾಣಿಯನ್ನು ಕಂಡು, ವಾಯುವೇಗದಿಂದ ಇಳಿದುಬಂದು, ಕಾಲುಗಳಲ್ಲಿ ಅದನ್ನು ಹಿಡಿದು, ಸಂತ ತಿರುಗಿ ಆಕಾಶದತ್ತ ಹಾರಿ ಹೋಗಲಾರ, ಇತ್ಯಾದಿ ಇತ್ಯಾದಿ.

ಆದರೆ ನಿಸ್ಸಹಾಯಕನಾಗಿದ್ದ ಆದಿಮಾನವನು ತನ್ನ ವಿಚಾರಪರ ಮನಸ್ಸನ್ನು ಅಮೋಘವಾಗಿ ಬೆಳೆಸಿಕೊಂಡು, ಯಂತ್ರವನ್ನು ರಚಿಸಿದ್ದಾನೆ. ಇಂದು ಅವನು ಗಿಡಗಳ ದೃಷ್ಟಿಗಿಂತ, ಲಕ್ಷಲಕ್ಷ ಪಾಲು ಹೆಚ್ಚು ಚುರುಕಾದ ದೃಷ್ಟಿಯನ್ನು ಮೈಕ್ರೋ ಸ್ಕೋಪ್, ಮತ್ತು ಟೆಲಿಸ್ಕೋಪುಗಳ ಮೂಲಕ ಸಾಧಿಸಿಕೊಂಡಿದ್ದಾನೆ. ವಿಮಾನಗಳನ್ನು ಸೃಷ್ಟಿಸಿ, ರಣಹದ್ದುಗಳಿಗಿಂತ ಸಾವಿರಾರು ಪಾಲು ವೇಗವಾಗಿ ಹಾರಬಲ್ಲವನಾಗಿದ್ದಾನೆ. ದೂರವಾಣಿ ಯಂತ್ರಗಳ ಸಹಾಯದಿಂದ ತನ್ನ ಕಿವಿಯ