೨೯೯
ಚುರುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಹೆಚ್ಚಿಸಿಕೊಂಡಿದ್ದಾನೆ. ತಿಮಿಂಗಿಲಗಳಿಗಿಂತಲೂ ಬಹಳ ದೊಡ್ಡದಾದ ಹಡಗುಗಳನ್ನು ಕಟ್ಟಿ ವೇಗವಾಗಿ ಸಮುದ್ರದಮೇಲೆ ಸಂಚರಿಸ ತೊಡಗಿದ್ದಾನೆ. ಗುರುತ್ವಾಕರ್ಷಣ ಶಕ್ತಿಯಿಂದ ಜಿಗಿದು ತೂಕ ರಹಿತ ಸ್ಥಿತಿಯಲ್ಲಿರುವುದನ್ನು ಸಾಧಿಸಿದ್ದಾನೆ. Whatever goes up must come down ಎಂದು ಮೊದಲು ಗಾದೆಯನ್ನು ಕಟ್ಟಿದ್ದರು. ಈಗ whatever goes up may become a satellite ಎನ್ನಬಹುದು. ಮನಸ್ಸಿನ ವಿಚಾರಪರಭಾಗದ ಅದ್ಭುತ ಪ್ರಗತಿಯಿಂದಾಗಿ, ಇಂದಿನ ಮಾನವನು ಭೂಮಿಯ ಮೇಲಿನ ಇತರ ಜೀವಿಗಳ ಮೇಲೆ ಹಾಗೂ ಪ್ರಕೃತಿಯ ಮೇಲೆ ಕೂಡ ಸ್ವಲ್ಪಮಟ್ಟಿಗೆ ಹತೋಟಿಯನ್ನು ಪಡೆದುಕೊಂಡಿದ್ದಾನೆ.
ಮಾನವನು ಜಂಗಮ ಪ್ರಾಣಿ. ಇಂದಿನ ಅತ್ಯದ್ಭುತ ಸಾಧನೆಗಳನ್ನು ಕರಗತ ಮಾಡಿಕೊಟ್ಟ ಅವನ ವಿಚಾರಪರ ಮನಸೂ ಜಂಗಮವೇ, ಅದೂ ಪರದಾಡುತ್ತಿರುತ್ತದೆ, ಅವನ ಪ್ರಾಣಿಸ್ವಭಾವಕ್ಕನುಗುಣವಾಗಿ
ಮನುಷ್ಯನು ಸ್ಥಾವರ ಸ್ಥಿತಿಗೆ ಬರುವುದುಂಟೇ? ಉಂಟು. ಹಣ್ಣು ಹಣ್ಣು ಮುಪ್ಪು ಮೂಡಿದ ಮೇಲೆ ಮನೆಗೊಂದು ಮುದಿಕೊರಡಾಗುತ್ತಾನೆ. ಅವನ ದೇಹವು ಬಹುಮಟ್ಟಿಗೆ ಸ್ಥಾವರ ಸ್ಥಿತಿಗೆ ಬಂದರೂ, ಅವನ ಮನಸ್ಸು, ಅರಳುಮರುಳಾಗಿದ್ದರೂ ಪರದಾಡುತ್ತದೆ. ಚಿಂತಾಕ್ರಾಂತವಾಗಿ ಪರದಾಡುತ್ತದೆ. ಅಂದರೆ ದೇಹವು ಸ್ಥಾವರ ಸ್ಥಿತಿಗೆ ಕಾಲಗತಿಯಲ್ಲಿ ಬಂದರೂ, ಮನಸ್ಸು ಅದಕ್ಕನುಗುಣವಾಗಿ ತೆಪ್ಪಗಿರುವುದಿಲ್ಲ. ಮನಸ್ಸನ್ನು ಚಂಚಲತೆಯಿಂದ ಪಾರುಮಾಡಿ, ಜಂಗಮ ಸ್ಥಿತಿಯಿಂದ ಮುಂದೂಡಿ, ಶೂನ್ಯ ಸಂಪಾದನೆಯನ್ನು ಎಂದರೆ, ಸಮಾಧಿಸ್ಥಿತಿಯನ್ನು ಪಡೆಯಬೇಕಾದರೆ, ಧಾರಣ ಧ್ಯಾನಗಳನ್ನು ಮನಸ್ಸು ಅಭ್ಯಸಿಸಬೇಕು. ಆಗ ಮನಸ್ಸು ಸ್ಥಾವರವಾಗಲು ಸಾಧ್ಯ
ಧಾರಣಾ ಧ್ಯಾನಗಳು ತೋರ ಮನಸ್ಸಿನಿಂದ The conscious Mind ನಿಂದ ಅಭ್ಯಸಿಸಲ್ಪಡುತ್ತದೆ. ಆಳ ಮನಸ್ಸಿನ ಪದರಗಳು ಕಾಣುವುದಿಲ್ಲ. ಸಮಾಧಿ ಸ್ಥಿತಿಯಲ್ಲಾದರೋ, ಆಳಮನಸ್ಸಿನ ಪದರಗಳೆಲ್ಲವೂ ಸ್ಪಷ್ಟವಾಗಿ, ನಿಖರವಾಗಿ, ಸಾಕ್ಷಾತ್ ಆಗುತ್ತದೆ ಎಂದು ಅಂತಹ ಅನುಭವವನ್ನು ಸವಿದವರು ಹೇಳಿದ್ದಾರೆ. ನಂಬದಿರಲು ನಮಗೆ ಅಧಿಕಾರವಿಲ್ಲ. ಯೋಗ್ಯತೆಯೂ ಇಲ್ಲ.
ಸ್ಥಾವರ ಸ್ಥಿತಿಗೆ ಮನಸ್ಸನ್ನು ಬಿಗಿಹಿಡಿದು ತಂದು, ಅಲ್ಲಿ ಸುಭದ್ರವಾಗಿ ನಿಲ್ಲಿಸಬೇಕಾದರೆ, ಚಿತ್ರ ವಿಚಿತ್ರವಾದ ವಿಧವಿಧವಾದ ಕಾಮನೆಗಳು ಸೆಳೆಯದಂತೆ ಜಾಗರೂಕರಾಗಬೇಕು. ಸಂಸಾರದಲ್ಲಿದ್ದವರಿಗೆ ಆಸೆ ಆಕಾಂಕ್ಷೆಗಳಿಗೆ ಮಿತಿಯೇ