ಮನಮಂಥನ
ಇರುವುದಿಲ್ಲ. ಸಂಸಾರದಲ್ಲಿ ಬೇರೂರಿ ಮರಗಳಂತೆ ಸ್ಥಾವರವಾಗಿರುತ್ತಾರೆ. ಆದರೆ ಮನಸ್ಸು ಪರದಾಡುತ್ತಿರುತ್ತದೆ ; ಸಂಸಾರದ ವಿಷಯಗಳನ್ನು ಕುರಿತು. ಯಾವ ವೈಯ್ಯಕ್ತಿಕ ಆಸೆ ಆಕಾಂಕ್ಷೆಗಳೂ ಇಲ್ಲದೆ, ಲೋಕಕಲ್ಯಾಣದ ನಿಸ್ವಾರ್ಥಿ ಆಸೆಯೊಂದನ್ನು ಮಾತ್ರ ಹೊಂದಿರುವ ಕೆಲವರನ್ನು ಮನಸ್ಸನ್ನು ನಡೆಸುವ ಸತ್-ಚೈತನ್ಯದ ಅಂಶವನ್ನು ಅರಿಯಲೆತ್ನಿಸುವವರನ್ನು ಸಂನ್ಯಾಸಿಗಳು, ಜಂಗಮರು, ಎಂದು ಸಮಾಜವು ಗೌರವಿಸುತ್ತದೆ. ಇದ್ದ ಊರಲ್ಲಿ ಹೆಚ್ಚುದಿನಗಳು ಇವರುಗಳು ಇರಬಾರದು ಎಂದು ನಿಯಮವನ್ನು ಮಾಡಿದರು. ಯಾವುದರೊಂದಿಗೂ ಅಂಟಿಕೊಳ್ಳಬಾರದೆಂದು.
ಸಸ್ಯ ವರ್ಗವು ಸ್ಥಾವರ ಎಂದೆವು. ಇದ್ದಲ್ಲೇ ಬೇರೂರಿ ಜೀವಮಾನವನ್ನೂ ಕಳೆಯುತ್ತದೆ ಎಂದೆವು. ಸಸ್ಯಗಳಿಗೆ ಮನಸ್ಸು ಇದೆಯೇ? ಇದ್ದರೆ ಪ್ರಾಣಿಗಳಲ್ಲಿರುವಂತೆ ವಿಚಾರಪರ ಮನಸ್ಸು ಇದೆಯೇ? ಇದ್ದರೆ ಸಸ್ಯಗಳ ಮನಸ ಜಂಗಮವಾಗಿರಬೇಕಲ್ಲವೇ? ಮರಗಿಡಗಳಿಗೂ ಮನುಷ್ಯಪ್ರಾಣಿಗೂ ಇರುವ ಹಿರಿಯ ವ್ಯತ್ಯಾಸವನ್ನು ಈ ಪ್ರಶ್ನೆಗಳ ಉತ್ತರಗಳಿಂದ ನಿರ್ಧರಿಸಬಹುದು.
ಸಸ್ಯಗಳಲ್ಲಿ, ಅವುಗಳ ಒಡಲಿನ ಕೆಲಸಕಾರ್ಯಗಳನ್ನು ಒಗ್ಗೂಡಿಸಲು, ಸಮನ್ವಯಿಸಲು, ಮನಸ್ಸಿನಂತಹ ಶಕ್ತಿಯೊಂದು ಇರಲೇಬೇಕು. ಹೊರವಲಯದಲ್ಲಿ ನಡೆಯುತ್ತಿರುವ ವ್ಯತ್ಯಾಸಗಳಿಗೆ ಸಸ್ಯವು ಪ್ರತಿಕ್ರಿಯೆಯನ್ನು ಹೂಡಬೇಕು. ಇಂದ್ರಿಯಗಳು ಪ್ರಾಣಿಗಳಲ್ಲಿರುವಂತೆ, ಹೊರವಲಯದ ವಿಷಯವನ್ನು ಮರಗಳಿಗೆ ತಿಳಿಸಲು, ಇಂದ್ರಿಯಗಳಂತೆ ಸುದ್ದಿಯನ್ನು ಕೊಡುವ ಅಂಗಗಳಿರಬೇಕು. ಇವುಗಳಿಂದ ಬಂದ ಸುದ್ದಿಯನ್ನು ಕ್ರೋಡೀಕರಿಸಿ ಜರಡಿ ಹಿಡಿದು ಯಾವ ಸುದ್ದಿಗೆ ಪ್ರತಿಕ್ರಿಯೆಯನ್ನು ಹೂಡಬೇಕು ಎಂದು ನಿರ್ಧರಿಸುವ ವ್ಯವಸ್ಥೆಯು ಇರಬೇಕು. ಈ ವ್ಯವಸ್ಥೆಯು ಮನಸ್ಸಿನಂತೆ.
ಆದರೆ ವಿಚಾರವನ್ನು, ಸ್ಮರಣೆಗಳ ನೆರವಿನಿಂದ ಮಾಡುವ Brain-Cortexನ ತರಹ ವ್ಯವಸ್ಥೆಯು ಸಸ್ಯವರ್ಗದಲ್ಲಿ ಇರುವಂತೆ ಕಂಡುಬರುವುದಿಲ್ಲ. ಪ್ರಾಯಶಃ ಸ್ಥಾವರ ಜೀವಿಗಳಲ್ಲಿ, Brain-Cortex ತರಹ ಬೆಳವಣಿಗೆಯು ಅಗತ್ಯವಿರುವುದಿಲ್ಲವೇನೋ? ಪ್ರಚೋದನೆ ಇದ್ದರೆ ವೃದ್ಧಿ ; ಅಭಿವೃದ್ಧಿ. ಇದ್ದಲ್ಲೇ ಭದ್ರವಾಗಿದ್ದರೆ, ಪ್ರಚೋದನೆಯು ಇರುವುದಿಲ್ಲ.
ಬೆಳಕು, ಸಸ್ಯಗಳನ್ನು ತನ್ನ ಕಡೆಗೆ ವಾಲಿಸಿಕೊಳ್ಳುತ್ತದೆ. ಶಬ್ದವು, ವಿಹಿತವಾದ ಸಂಗೀತದಂತಿದ್ದರೆ, ಸಸ್ಯಗಳ ಬೆಳವಣಿಗೆಗೆ ಸಹಾಯವಾಗುತ್ತದೆಯಂತೆ. ಕೀರ್ತಿಶೇಷ