೩೦೧
ಜಗದೀಶ್‌ಚಂದ್ರ ಬೋಸ್ ಅವರು, ಅತ್ಯಂತ ಸೂಕ್ಷ್ಮವಾದ ಯಂತ್ರಗಳನ್ನು ಅಣಿಮಾಡಿ, ಗಿಡಗಳಿಗೆ ಮನಸ್ಸಿನಂತಹ ಶಕ್ತಿಯು ನೆರವಾಗುತ್ತದೆ ಎಂದು ಪ್ರಯೋಗಗಳನ್ನು ನಡೆಸಿ ಸಿದ್ಧಾಂತ ಮಾಡಿದರು. ಸಸ್ಯವರ್ಗದಲ್ಲಿ ಇರಬಹುದಾದ ಅಂತಹ ಮನಸ್ಸಿನಂತಿರುವ ಶಕ್ತಿಯು, ಪ್ರಾಣಿಗಳಿಗೆ ಹೋಲಿಸಲ್ಪಟ್ಟರೆ ಶೈಶವಾಸ್ಥೆಯಲ್ಲಿದೆ ಎನ್ನಬೇಕು.
ಅಂದಮೇಲೆ ಸ್ಥಾವರ ಸಸ್ಯಗಳಲ್ಲಿ, ಮನಸ್ಸಿನಂತಿರುವ ಶಕ್ತಿಯು ಇದ್ದರೆ, ಅದು ಶೈಶವಾವಸ್ಥೆಯಲ್ಲಿದ್ದು, ಸ್ಥಾವರವಾಗಿರುತ್ತದೆ, ಜಂಗಮವಾಗಿರುವುದಿಲ್ಲ ಎನ್ನಬಹುದು. ಇಂದಿನ ಮಾನವನ ಪ್ರಗತಿಹೊಂದಿದ ಅದ್ಭುತವಾದ ಮನಸ್ಸಿಗೂ, ಸಸ್ಯ ವರ್ಗದಲ್ಲಿರಬಹುದಾದ ಮನಸ್ಸಿನಂತಹ ಶಕ್ತಿಗೂ, ಅರ್ಥಾರ್ಥಕ ಸಂಬಂಧವಿಲ್ಲ.
ಆಲಯ ಮತ್ತು ಬಯಲು
ನನ್ನ ದೇಹ ಮತ್ತು ಮನಸ್ಸುಗಳ ಒಕ್ಕೂಟವನ್ನು 'ನಾನು' ಎಂದು ದೃಢವಾಗಿ ನಂಬಿದ್ದೇನೆ. ದೇಹಕ್ಕೆ ಗಡಿಯಿದೆ, ಮಿತಿ ಇದೆ. ಅದರ ಸುತ್ತಲೂ ಇರುವ ಪರಿಸರದಿಂದ ಸುದ್ದಿಗಳನ್ನು ಪಡೆದು, ನಾನು ಸುರಕ್ಷಿತವಾಗಿರಲು ಸುಖಪಡಲು ಹಾಗೂ ದುಃಖವಾಗದಂತೆ ಜಾಗರೂಕನಾಗಲು ಪ್ರಯತ್ನಿಸುತ್ತೇನೆ. ನಿಖರವಾದ ಗಡಿರೇಖೆಗಳಿರುವ, ನನ್ನ ದೇಹ ಮತ್ತು ಮನಸ್ಸಿನ ಒಕ್ಕೂಟವನ್ನು 'ಆಲಯ' ಎಂದು ಹತ್ತು ಹನ್ನೆರಡನೆಯ ಶತಮಾನದಲ್ಲಿ ಮನನಿಗರು ಕರೆಯುತ್ತಿದ್ದರು.
ನಾನು ಎಂದುಕೊಳ್ಳುವ ಆಲಯದ ಗಡಿರೇಖೆಗಳನ್ನು ದೇಹದ ದೃಷ್ಟಿಯಿಂದ ವಿಸ್ತರಿಸಿಕೊಳ್ಳುವುದು ಅಲ್ಪಸ್ವಲ್ಪ ಮಾತ್ರ ಧಡಿಯರಾಗುವುದರಿಂದ ಸಾಧ್ಯ. ಆದರೆ ಮನಸ್ಸಿನ ದೃಷ್ಟಿಯಿಂದ ಸುಲಭವಾಗಿ ವಿಸ್ತರಿಸಿಕೊಳ್ಳಬಹುದು. ಸುರಕ್ಷಿತವಾಗಿ ಇರಲು ಕಟ್ಟಿಕೊಂಡ ನಾಲ್ಕೂ ಗೋಡೆಗಳಿಂದ ಆವೃತವಾದ ಮನೆಯನ್ನು ನನ್ನ ಆಲಯ ಎಂದುಕೊಳ್ಳುತ್ತೇನೆ. 'ನಾನು' ಆಲಯವೆಂಬ ಕಲ್ಪನೆಯು, ಈಗ ವಿಶಾಲಗೊಂಡು, ನನ್ನ ಮನೆಯನ್ನೂ ಒಳಗೊಂಡಿತು, ಏಕೆ ? ಮನಸ್ಸು ಹಾಗೆ ಅಂದುಕೊಂಡುದರಿಂದ, ಸ್ವಾರ್ಥದಿಂದ ಪ್ರಚೋದಿತವಾದರೂ, ಮನಸ್ಸು ವಿಶಾಲವಾಯಿತು, ಆಲಯವು ತುಸು ಹಿರಿದಾಯಿತು. ನನ್ನ ಗ್ರಾಮ ನನ್ನ ಊರು ಎಂಬ ಭಾವನೆಯು ನಂತರ ಮನಸ್ಸಿನಲ್ಲಿ ಉಂಟಾಯಿತು. ಅಂದರೆ ಮನಸ್ಸಿನಿಂದಾಗಿ ಆಲಯವು ಮತ್ತೂ ವಿಶಾಲಗೊಂಡಿತು. ನನ್ನದೇಶ, ನನ್ನ ರಾಷ್ಟ್ರ ಎಂಬ ಭಾವನೆಯು ಮನಸ್ಸಿನಲ್ಲಿ ಬೇರೂರಿದಾಗ, ನನ್ನ ಆಲಯದ ಗಡಿಯು ಅಪಾರವಾಗಿ ವಿಸ್ತರಿಸಿತು. ಭೂಲೋಕವೇ ನನ್ನದು ಎಂಬ ಭಾವನೆಯು ಆನಂತರ ಬೆಳೆಯ