ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦೨

ಮನಮಂಥನ

ತೊಡಗಿತು. One world is my world ಎಂಬ ಭಾವನೆಯು ಉಂಟಾದಾಗ, ನನ್ನ ಆಲಯದ ಗಡಿಯು ಭೂಮಂಡಲದ ಗಡಿಯಾಯಿತು. ಬ್ರಹ್ಮಾಂಡದಲ್ಲಿ, ಭೂಮಂಡಲದ ಹೊರಗಿರುವುದೆಲ್ಲಾ ಬಯಲು ಎಂದಾಯಿತು.

ದೇಹವನ್ನು ನನ್ನ ಅಲಯ ಎಂದುಕೊಂಡ ಮನಸ್ಸು, ಅಮಿತವಾಗಿ ವಿಸ್ತರಿಕೊಂಡು ಬ್ರಹ್ಮಾಂಡವು ನನ್ನದು ಎಂದು ಅರಿತುಕೊಂಡರೆ, ಅನಂತರ ಬಯಲಾವುದು? ಆಲಯವು ಯಾವುದು? ಗುರುತಿಸಲು ಗಡಿಯೇ ಇರದಿದ್ದರೆ, ಆಲಯವು ಮತ್ತು ಬಯಲು ಎರಡೂ ಒಂದೇ. ಮನಸ್ಸಿನ ಭಾವನೆಯು ಆಲಯ ಮತ್ತು ಬಯಲು ಎನ್ನುವ ವಿಂಗಡಣೆಯನ್ನು ಮಾಡಿಕೊಂಡಿದೆ. ಮನಸ್ಸನ್ನು ವಿಶಾಲಗೊಳಿಸುವ ಇಂತಹ ಭಾವನೆಯು, ಮನಸ್ಸಿನ ಸತ್-ಚೈತನ್ಯ ಎಂಬ ಭಾಗದಿಂದ ಸಾಧ್ಯವಾಗುತ್ತದೆ.

ಬಯಲು ಆಲಯದೊಳಗೊ, ಆಲಯವು ಬಯಲೊಳಗೊ ಬಯಲು ಆಲಯವೆರಡು ನಿನ್ನೊಳಗೊ ದೇವಾ !

ಎಂದು ದಾಸವರ್ಯರು, ಅತಿಮಾನವ ಸ್ಥಿತಿಯಲ್ಲಿದ್ದಾಗ, ಅವರ ಮನಸ್ಸಿನ ಸತ್ ಚೈತನ್ಯಾಂಶವು ಪ್ರಜ್ವಲಿಸುತ್ತಿದ್ದಾಗ, ನುಡಿದುದರಿಂದ, ಆ ವಾಕ್ಯಗಳು ಚಿರಂ- ಜೀವಿಯಾಗಿವೆ.

ಬಯಲರೂಹು ಮಾಡ ಬಲ್ಲಾತನೆ ಶರಣನು ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭವಿ ಈ ಉಭಯ ವೊಂದಾದರೆ ನಿಮ್ಮಲ್ಲಿ ತೆರಹುಂಟೆ ಕೂಡಲ ಸಂಗಮ ದೇವಾ

ಎಂದು ಸಂತ ಬಸವಣ್ಣನವರು ನುಡಿದುದೂ, ಹೀಗೆಯೇನೇ.

ದೇಹ-ಮನಸ್ಸಿನ ಒಕ್ಕೂಟವನ್ನು ಆಲಯ ಎಂದು ನಾನು ಅಂದುಕೊಂಡಾಗ ನನ್ನ ಹೊರಗೆ ಸುತ್ತಲೂ ಇರುವ ಪರಿಸರವನ್ನು ಬಯಲು ಎಂದುಕೊಳ್ಳುತ್ತೇನೆ. ಬಯಲಿನ ಅರಿವನ್ನು ಪಡೆಯಲು ಪಂಚೇಂದ್ರಿಯಗಳನ್ನು ; ವಿಚಾರಪರ ಮನಸ್ಸನ್ನೂ ಮತ್ತು ಸ್ಮರಣಾ ನೆರವನ್ನು ಪಡೆಯುತ್ತೇನೆ. ಆಲಯದಲ್ಲಿ ನಡೆಯುವ ವಿಷಯಗಳನ್ನು, ಅಂದರೆ ನನ್ನ ದೇಹ-ಮನಸ್ಸಿನ ಒಕ್ಕೂಟದಲ್ಲಿ ನಡೆಯುವ ವ್ಯವಹಾರಗಳನ್ನು ದೇಹಶಾಸ್ತ್ರದ ಅಧ್ಯಯನದಿಂದ ತಿಳಿಯುತ್ತೇನೆ. ಹಾಗೂ ಮನಃಶಾಸ್ತ್ರದ ಮನಃಶಾಸ್ತ್ರದ ಅಧ್ಯಯನದಿಂದಲೂ ತಿಳಿಯಲೆತ್ನಿಸುತ್ತೇನೆ. ಮನಸ್ಸಿನ ಸತ್-ಚೈತನ್ಯದ ಅಂಶವು ವೈಜ್ಞಾನಿಕ ಸಂಶೋಧನೆಗೆ ಇಂದಿನ ಹಂತದಲ್ಲಿ ಸುಲಭವಾಗಿ ಸಿಕ್ಕುವುದಿಲ್ಲ. ಆದರೂ ಆ ಅಂಶದ ಅರಿವು ಸ್ವಲ್ಪಮಟ್ಟಿಗಾದರೂ ತಿಳಿಯುತ್ತದೆ. ಈ ವಿಷಯವನ್ನು