ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಸ್ವರೂಪ

೩೦೩

ಮುಂದೆ ವಿವರವಾಗಿ ತಿಳಿಯುವ; ಮನಃಶಾಸ್ತ್ರದ ವೈಜ್ಞಾನಿಕ ಪ್ರಗತಿಯೊಂದಿಗೆ, ಸಮನ್ವಯ ಮಾಡಿಕೊಂಡು.

'ನಾನು' ಎಂದುಕೊಳ್ಳುವ ನಂಬಿಕೆಯನ್ನು ದೃಢಪಡಿಸುವುದು ಮನಸ್ಸಿನ ಒಂದು ಮುಖ್ಯ ಅಂಶ ಎಂದೆವು. ಮನಸ್ಸಿನ ಈ ಅಂಶವು ಶೈಶವಾವಸ್ಥೆಯಲ್ಲಿ ಅತ್ಯಲ್ಪವಾಗಿರುತ್ತದೆ. ಬಾಲ್ಯದಲ್ಲಿ ಅಭಿವೃದ್ಧಿಗೊಳ್ಳುತ್ತದೆ. ಪ್ರಾಯದಲ್ಲಿ ಹೊರವಾಗುತ್ತದೆ. ಮುಪ್ಪಿನಲ್ಲಿ ಬೆಳೆಯದೆ ಇದ್ದರೂ, ಪ್ರಾಯದಲ್ಲಿ ಇದ್ದಂತೆಯೇ ಉಳಿಯುತ್ತದೆ.

ದೇಹದ ಒಳಗಿನ ಕಾರ್ಯಕ್ರಮಗಳನ್ನು, ನಾಡಿಯ ಬಡಿತ, ಉಸಿರಾಡುವಿಕೆ, ಮುಂತಾದುವನ್ನು ಮನಸ್ಸಿನ ಈ ಅಂಶವು ವ್ಯವಸ್ಥೆ ಮಾಡುತ್ತದೆ.

Walter B carnon ಎಂಬ ಪ್ರಸಿದ್ಧ ದೇಹ ಶಾಸ್ತ್ರಜ್ಞನು, "The wisdom of the body.” ಎಂಬ ಪುಸ್ತಕದಲ್ಲಿ, ಮನಸ್ಸಿನ ಈ ಅಂಶವು, Visceral Brainl ಅಂಶವು, ದೇಹದ ಸಕಲ ವಿಧವಿಧವಾದ ಕಾರ್ಯಗಳನ್ನೂ ಹೇಗೆ ಜಾಣತನದಿಂದ ವಿಚಾರಪರ ಮನಸ್ಸಿನ ಅಂಕೆ ಮತ್ತು ಶಿಕ್ಷೆಗೆ ಹೊರತಾಗಿ, ಸುಸೂತ್ರವಾಗಿ ನಡೆಸುತ್ತದೆ ಎಂಬುದನ್ನು ವಿವರಿಸಿದ್ದಾನೆ. ಸ್ವತಂತ್ರ ಚಾಲಿತ ನರ ಸಮೂಹಗಳಿಂದ (Autonomic nervous system and the limbic system,) ದೇಹದೊಳಗಿನ ಸಹಸ್ರಾರು ವಿಧವಿಧವಾದ ಕಾರ್ಯಗಳನ್ನು ಸುಸೂತ್ರವಾಗಿ ಸಮನ್ವಯಿಸುತ್ತದೆ ಎಂಬುದನ್ನು ವರ್ಣಿಸಿದ್ದಾನೆ.

ಹಸಿವಾಯಿತು ಎನ್ನಿ. ಮನೆಯಲ್ಲಿ ಮಾಡಿಟ್ಟಿದ್ದ ಅಡಿಗೆಯನ್ನು ತಿನ್ನುತ್ತೇವೆ. ಮಸಲಾ ಅಡಿಗೆ ಮಾಡಿದ ಪಾತ್ರೆಯಲ್ಲಿ ಕಲಾಯಿಯು ಇರಲಿಲ್ಲ. ಆಗ ತಾಮ್ರದ ಲವಣಾಂಶಗಳು ಅಡಿಗೆಯಲ್ಲಿ ಮಿಶ್ರಿತವಾಗುತ್ತವೆ. ಮೈಲುತುತ್ತ ಮತ್ತು ಅಂತಹ ವಿಷ ಪದಾರ್ಥಗಳು ಅಡಿಗೆಯಲ್ಲಿ ಸೇರಲು ಸಾಧ್ಯ. ಉಂಡ ಮೇಲೆ ಆ ವಿಷ ಪದಾರ್ಥಗಳು ಹೊಟ್ಟೆಗೆ ಸೇರಿದೆ ಎಂಬುದು ನಮ್ಮ ಮನಸ್ಸಿಗೆ ತಿಳಿದಿರುವುದಿಲ್ಲ. ಆದರೆ ಹೊಟ್ಟೆಗೆ ಅವುಗಳ ಗುರುತು ಸಿಗುತ್ತದೆ. ದೇಹಕ್ಕೆ ಇವು ಒಳ್ಳೆಯದಲ್ಲ ಎಂದು ದೇಹದ ಹುಟ್ಟು ಜಾಣತನವು ತಿಳಿಸುತ್ತದೆ. ಆಗ ಹೊಟ್ಟೆಯು, ತನ್ನಲ್ಲಿದ್ದುದನ್ನು ವಾಂತಿಯನ್ನು ಮಾಡಿಸಿ ಹೊರದೂಡುತ್ತದೆ. ವಾಂತಿಯನ್ನು ಮಾಡಬೇಕು ಎಂಬ ಆಸೆಯೇನೂ ವ್ಯಕ್ತಿಗೆ ಇರುವುದಿಲ್ಲ. ಅಂತಹ ಯೋಚನೆಯೂ ಬಂದಿರುವುದಿಲ್ಲ.ದೇಹದ ಆಜನ್ಮ ಜಾಣೆಯು, ಇಂತಹ ವಿಷ ನಿವಾರಣಾ ಕ್ರಮವನ್ನು, ತನ್ನಂತಾನಾಗಿಯೇ ಹೂಡುತ್ತದೆ. ಇಂತಹ ಸ್ವಯಂ ಸಂರಕ್ಷಣಾ ಕ್ರಮಗಳನ್ನು ದೇಹವು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಅತಿ ಸೂಕ್ಷ್ಮವಾಗಿ ಹಾಗೂ