ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦೪

ಮನಮಂಥನ

ವಿವರವಾಗಿ ದೇಹ ಶಾಸ್ತ್ರಜ್ಞರು ಸಂಶೋಧನೆಗಳನ್ನು ನಡೆಸಿ, ನಿಖರವಾಗಿ ನಿರ್ಧರಿಸಿದ್ದಾರೆ. ಇಂತಹ ವಿಜ್ಞಾನವನ್ನು ಆಲಯದ ವಿಜ್ಞಾನ ಎಂದರೂ ತಪ್ಪಲ್ಲ.

ಮನಸ್ಸಿನ ಈ ಅಂಶವು ದೇಹದ ಸಹಜ ಜಾಣತನಕ್ಕೆ ಸಂಬಂಧವನ್ನು ನಿಕಟವಾಗಿ ಹೊಂದಿದೆ. ಮನಸ್ಸಿನ ಇನ್ನೊಂದು ಪ್ರಮುಖ ಅಂಶವು ವಿಚಾರಪರತೆಯನ್ನು ನಡೆಸುತ್ತದೆ. Cortical Activity ಎಂಬುದಿದು. ಸ್ಮರಣೆಯನ್ನು ಉಳಿಸಿಕೊಂಡು ಅಳಿಯದಂತೆ ಕಾಪಾಡಿಕೊಂಡು ಬರುವ ಮನಸ್ಸಿನ ಮುಖ್ಯಾಂಶವೊಂದು, ಮೆದುಳಿನ ಒಂದು ಭಾಗದಲ್ಲಿ ವ್ಯವಸ್ಥಿತವಾಗಿದೆ. ಇವೆಲ್ಲವನ್ನೂ ಪ್ರಚೋದಿಸುವ, ಹಾಗೂ ನಡೆಸುವ, ಸತ್-ಚೈತನ್ಯಾಂಶವೂ ಮೆದುಳಿನಲ್ಲಿ ಪ್ರತಿಷ್ಠಿತವಾಗಿದೆ.

ವಿಚಾರಪರ ಮನಸ್ಸು ಭಾವನಾಪರ ಮನಸ್ಸಿನಿಂದ ಸಮಾನ್ಯವಾಗಿ ಪ್ರಚೋದಿತವಾಗುತ್ತದೆ. ಯಾರಾದರೂ ನಮ್ಮನ್ನು ಅಲ್ಲಗಳೆದರೆ, ನಮಗಿಂತ ಸೆಣಕಲಾಗಿದ್ದರೆ, ಅವರನ್ನು ತದುಕಿಬಿಡು ಎಂದು ವಿಚಾರಪರ ಮನಸ್ಸು ನಿರ್ಧರಿಸುತ್ತದೆ. ನಮಗಿಂತ ಧಡಿಯರಾಗಿದ್ದರೆ, ಸದ್ಯಕ್ಕೆ ತೆಪ್ಪಗಿರು, ಅವಕಾಶವು ದೊರೆತಾಗ ಎಲ್ಲರೆದುರಿಗೂ ಅವರ ಮಾನವನ್ನು ಜಾಲಾಡಿ ಬಿಡೋಣ ಎಂದು ತೀರ್ಮಾನಿಸುತ್ತದೆ.

ವಿಚಾರಪರ ಮನಸ್ಸು ಭಾವನಾಪರ ಮನಸ್ಸಿನ ಭಾಗದ ಮೇಲೆ ಗುರುತರವಾದ ಹತೋಟಿಯನ್ನು ಹೊಂದಿಲ್ಲ. ತುಸು ಮಟ್ಟಿಗೆ ಮಾತ್ರ ಪ್ರಭಾವವನ್ನು ಬೀರುತ್ತದೆ. ಹೀಗಿಲ್ಲದೆ ಇದ್ದರೆ, ಕೋಪವು ಉಕ್ಕೇರಿದಾಗ ತನ್ನ ಮೂಗನ್ನೆ ಕತ್ತರಿಸಿಕೊಳ್ಳುತ್ತಿದ್ದ ಇಂದಿನ ಮಾನವ. ಈಗ ತನ್ನ ತಲೆಯನ್ನು ಮಾತ್ರ ಚಚ್ಚಿಕೊಳ್ಳುತ್ತಾನೆ. ಆದರೆ ಹೆಚ್ಚು ಆಘಾತವಾಗದಂತೆ, ಚಚ್ಚಿಕೊಳ್ಳುತ್ತಾನೆ. ಅದೂ ಇತರರನ್ನು ಹೆದರಿಸುವುದಕ್ಕೆ ಮಾತ್ರ.

ಮನಸ್ಸಿನಲ್ಲಿ ವಿಧವಿಧವಾದ ಕಾರ್ಯಗಳಿಗೆ ಮೀಸಲಾದ ಹಲವಾರು ಮುಖ್ಯ ಅಂಶಗಳನ್ನು ಗಮನಿಸಿದೆವು. ಈ ಎಲ್ಲ ಕಾರ್ಯಗಳನ್ನೂ ಸಮನ್ವಯಿಸಿ ನಡೆಸುವ ಸತ್-ಚೈತನ್ಯವೆಂಬ ಅಂಶವು ಬಲು ಪ್ರಾಮುಖ್ಯವಾದುದು ಎಂಬುದನ್ನೂ ಗಮನಿಸಿದೆವು.

ಮನಸ್ಸು ಎಲ್ಲಿದೆ ಮೆದುಳಿನಲ್ಲಿ ಮನಸ್ಸು ಕಾರ್ಯವನ್ನು ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಮನಸ್ಸು ಹಲವಾರು ರೀತಿಗಳಲ್ಲಿ ಕಾರ್ಯವನ್ನು ಮಾಡುತ್ತದೆ ಎನ್ನುವುದನ್ನು ಸ್ಕೂಲವಾಗಿ ಅರಿತಿದ್ದಾಯಿತು. ಮೆದುಳಿನ ವಿವಿಧ ಭಾಗಗಳು,