೩೦೫
ಒಂದಲ್ಲ ಒಂದು ರೀತಿಯಲ್ಲಿ, ಮನಸ್ಸಿನ ಒಂದೊಂದು ತೆರನ ಕಾರ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಮನಸ್ಸು ಕಾರ್ಯ ಮಾಡುವಾಗ ಮೆದುಳಿನ ವಿವಿಧ ಭಾಗಗಳು ಸಂಪರ್ಕವನ್ನು ಹೊಂದಬೇಕು. ಯೋಚನೆಯನ್ನು ಮಾಡುವಾಗ, ವಿಚಾರಪರ ಮನಸ್ಸು, ಸ್ಮರಣಾವಿಭಾಗದೊಂದಿಗೆ ಸಂಬಂಧವನ್ನು ಪಡೆಯಬೇಕು. ವಿಚಾರಪರ ಮನಸ್ಸು ಮೆದುಳಿನ ಕಾರ್ಟೆಕ್ಸ್ ಮತ್ತು ಮುಂಭಾಗಗಳಲ್ಲಿ ಬಹಳಷ್ಟು ಕೇಂದ್ರೀಕೃತವಾಗಿದೆ. ಸ್ಮರಣೆಯು ಮೆದುಳಿನ ಪಕ್ಕಗಳಲ್ಲಿ ಅಚ್ಚಾಗಿರುತ್ತದೆ. ಮೆದುಳಿನ ಈ ಎರಡೂ ಭಾಗಗಳು-ನಿಕಟ ಸಂಪರ್ಕವನ್ನು ಹೊಂದಿರುವುದು ಅತ್ಯಗತ್ಯ. ಇದು ಯಾವ ರೀತಿಯಲ್ಲಿ ನಡೆಯುತ್ತದೆ ?
ಮೆದುಳಿನ ಪ್ರತಿಯೊಂದು ಸೆಲ್ಯೂ, ಇತರ ಸೆಲ್ಲುಗಳಿಂದ ಸುತ್ತುವರಿಯಲ್ಪಟ್ಟಿದೆ. ಪ್ರತಿ ಒಂದು ಸೆಲ್ಲೂ ತನ್ನಲ್ಲಿರುವ ದ್ರವದಲ್ಲಿ ಆಗುವ ರಸಾಯನಿಕ ವ್ಯತ್ಯಾಸಗಳಿಂದ, ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿಕೊಳ್ಳುತ್ತದೆ. ವಿದ್ಯುತ್‌ಶಕ್ತಿಯು ಸೆಲ್ಲಿನಿಂದ ಸೆಲ್ಲಿಗೆ ಹರಡುತ್ತದೆ. ಹರಡುವಾಗ ಇಂತದೇ ಮಾರ್ಗದಲ್ಲಿ ವಿದ್ಯತ್‌ಶಕ್ತಿಯು ಹರಿಯಬೇಕು ಎಂಬುದು ಜನ್ಮತಾಳಿದಾಗ ನಿರ್ಧಾರವಾಗಿರುತ್ತದೆ. ಹುಟ್ಟಿದ ಮೇಲೆ ಬಾಳಿನ ಅನುಭವಗಳಿಂದ ಕಲಿಯುವಾಗ ಇತರ ಮಾರ್ಗಗಳು ಮೆದುಳಿನಲ್ಲಿ ಅಣಿಗೊಳ್ಳುತ್ತವೆ. ತುಂಬಾ ಪ್ರಚಂಡನೆಂದೆನಿಸಿಕೊಂಡವನ ಮೆದುಳಿನಲ್ಲಿ ಇಂತಹ ಸಂಪರ್ಕ ಮಾರ್ಗಗಳು ಬಹಳಷ್ಟು ಸಂಖ್ಯೆಯಲ್ಲಿರುತ್ತವೆ. ಸಾಮಾನ್ಯನಿಗಿಂತ ಸಹಸ್ರಾರು ಪಾಲು ಹೆಚ್ಚಾಗಿರುತ್ತವೆ. ಪ್ರಚಂಡತನದ (genius) ಅಸ್ತಿಭಾರವು ಇದು. ಹೀಗಾಗಿರದಿದ್ದರೆ ಒಂದು ಸೆಲ್ಲು ಸುತ್ತಲಿರುವ ಯಾವುದಾದರೂ ಸೆಲ್ಲಿನ ಸಂಪರ್ಕ ಪಡೆಯಬಹುದು. ಆಗ ಮನಸ್ಸು ಅಲ್ಲೋಲಕಲ್ಲೋಲವಾಗುತ್ತದೆ. ಪ್ರಚಂಡತನವಾಗಲೀ ಜಾಣತನವಾಗಲಿ, ಅಥವಾ ಸಾಮಾನ್ಯ ಚುರುಕಾಗಲಿ, ಯಾವುದೂ ಸಾಧ್ಯವಾಗುತ್ತಿರಲಿಲ್ಲ.
ಮೆದುಳಿನ ಸೆಲ್ಲು ವಿದ್ಯುತ್ ಶಕ್ತಿಯನ್ನು, ರಾಸಾಯನಿಕ ಮಾರ್ಪಾಡುಗಳಿಂದ ಉತ್ಪಾದಿಸುತ್ತದೆ ಎಂದೆವು. ಈ ಕಾರ್ಯಕ್ರಮವು ಮೋಟಾರ್ ಕಾರುಗಳಲ್ಲಿರುವ ಬ್ಯಾಟರಿಗಳಂತೆ, ಬ್ಯಾಟರಿಗಳಲ್ಲಿ ದ್ರವವು ಒಂದು ಸ್ಥಿತಿಯಲ್ಲಿರುತ್ತದೆ. ಛಾರ್ಜ್ ಮಾಡಿದಾಗ ದ್ರವದಲ್ಲಿರುವ, ಎಲೆಕ್ಟೋಲೈಟ್ ವಸ್ತುಗಳು ಬೇರೆ ಬೇರೆಯಾಗುತ್ತವೆ. ಕೆಲವು ಒಂದು ಕಡೆಗೆ, ಮತ್ತೆ ಉಳಿದುವು ಮತ್ತೊಂದು ಕಡೆಗೆ, ಬ್ಯಾಟರಿಯಿಂದ ವಿದ್ಯುತ್ ಶಕ್ತಿಯು ಹೊರಕ್ಕೆ ಹರಿಯತೊಡಗಿದಾಗ, ಎಲೆಕ್ಟೋಲೈಟ್ ವಸ್ತುಗಳು ಮೊದಲಿದ್ದ ಸ್ಥಿತಿಗೆ ಹಿಂತಿರುಗುತ್ತವೆ. ಇದರಂತೆಯೇ ಮೆದುಳಿನ ಸೆಲ್ಲುಗಳ