೩೧೧
ಸಾಧಿಸಬೇಕು. ಇಲ್ಲದಿದ್ದರೆ ಬಿದ್ದು ಪೆಟ್ಟು ಮಾಡಿಕೊಳ್ಳಬೇಕು. ನರ್ತಕಿಯರು, ಮತ್ತು ಸರ್ಕಸ್ ಮಾಡುವವರು ದೇಹದ ಸಮತೋಲನವನ್ನು ಎಷ್ಟು ಅದ್ಭುತವಾಗಿ ಅಣಿ ಮಾಡಿಕೊಂಡಿದ್ದಾರೆ, ನೋಡಿ. ಹೇಗೆ ಎಷ್ಟು ಬಾಗಿದರೂ ಬೀಳುವುದಿಲ್ಲ. ಅತ್ಯಾಶ್ಚರ್ಯಕರವಾಗಿ ದೇಹದ ಸಮತೋಲನವನ್ನು ಸಾಧಿಸುವುದು, ಸರಿಬೆಲ್ಲಂ ಇನ ಕಾರ್ಯ. ದೊಂಬರಾಟವನ್ನು ನೋಡಿಲ್ಲವೇ? ನೆಟ್ಟಗೆ ನಿಲ್ಲಿಸಿದ ಬೊಂಬಿನ ತುದಿಯ ಮೇಲೆ ದೊಂಬರವನು ಮಲಗಿ ತಿರುಗುವುದಿಲ್ಲವೆ, ಬೊಂಬಿನ ಮೇಲೆ ಹೊಟ್ಟೆಯನ್ನು ಮಾತ್ರ ಇರಿಸಿಕೊಂಡು, ಆಶ್ಚರ್ಯವಾಗುವುದಿಲ್ಲವೇ ? ಸರಿಬೆಲ್ಲಂ ಇನ ಚಾಕಚಕ್ಯತೆಯಿಂದ ಇದು ಸಾಧ್ಯವಾಗಿದೆ.
ಪ್ರಮುಖವಾದ ಈ ಮೂರು ಭಾಗಗಳು ಒಂದರೊಂದಿಗೆ ಉಳಿದುವು ಸಮನ್ವಯಿಸಿಕೊಂಡು ಹೇಗೆ ಕೆಲಸವನ್ನು ಮಾಡುತ್ತದೆ ಎಂಬುದನ್ನು ನಿದರ್ಶನದೊಂದಿಗೆ ತಿಳಿಯುವುದು ಸುಲಭ.
ಪಕ್ಕದ ಮನೆಯ ಸೀಬೆ ಮರದಲ್ಲಿ ದೋರಗಾಯಿಯೊಂದು ಕಾಣಿಸುತ್ತದೆ. ಹುಡುಗನ ಕಣ್ಣು ಅದನ್ನು ನೋಡುತ್ತದೆ. ದೋರಗಾಯಿನ ಜತೆಗೆ ಉಪ್ಪು ಹಾಕಿಕೊಂಡು ಹಿಂದೊಮ್ಮೆ ಖುಷಿಯಿಂದ ತಿಂದದ್ದು ಸ್ಮರಣೆಗೆ ಬರುತ್ತದೆ. ಸೀಬೆಕಾಯಿಯನ್ನು ಕಂಡಾಗ, ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣಿನ ಮೂಲಕ, ಸೆರಿಬ್ರಂ ಇನಲ್ಲಿರುವ ದೃಷ್ಟಿಯ ಕೇಂದ್ರಗಳಿಗೆ ಸುದ್ದಿಯು ಮುಟ್ಟುತ್ತದೆ. ಅಲ್ಲಿಂದ ಸ್ಮರಣಾ ಭಾಗಕ್ಕೆ ಈ ಸುದ್ದಿಯ ಒಂದು ಪ್ರತಿಯು ಹೋಗುತ್ತದೆ. ಹಿಂದೆ ಸೀಬೆಕಾಯಿಯನ್ನು ಉಪ್ಪಿನ ಜತೆಗೆ ತಿಂದು ಸುಖಪಟ್ಟಿದುದರ ಸ್ಮರಣೆಯು ಪ್ರಚೋದಿತವಾಗುತ್ತದೆ. ಪ್ರಚೋದಿತವಾದ ಸ್ಮರಣೆಯು, ತಿರುಗಿ ತಿನ್ನಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತದೆ.
ಆಸೆಯು ಹುಡುಗನನ್ನು ಕೆರಳಿಸುತ್ತದೆ. ಅವನ ಸರಿಬ್ರಂ ಇನಲ್ಲಿರುವ ವಿಚಾರ ಪರ ಮನಸ್ಸು ಹೀಗೆ ಹೀಗೆ ಮಾಡಿದರೆ ದೋರಗಾಯಿ ಸಿಗಬಹುದು ಎಂದು ನಿರ್ಧರಿಸುತ್ತದೆ. ಕಾಪೌಂಡ್ ಗೋಡೆಯನ್ನು ಹತ್ತುತ್ತಾನೆ. ಹತ್ತುವಾಗ ಮತ್ತು ಹತ್ತಿ ಗೋಡೆಯ ಮೇಲೆ ನಿಂತುಕೊಂಡಾಗ ಅವನ ಸೆರಿಬೆಲ್ಲಂ ಬಹಳ ಚಾಕಚಕ್ಯತೆಯಿಂದ, ಕೆಳಕ್ಕೆ ಬೀಳದಂತೆ ಅವನನ್ನು ಕಾಪಾಡುತ್ತದೆ. ಗೋಡೆಯ ಅಂಚಿನಲ್ಲಿ ನಿಂತು, ಮರದ ಕೊಂಬೆಯತ್ತ ವಾಲಿಕೊಂಡು, ಅದನ್ನು ಬಗ್ಗಿಸಿ, ಕಾಯಿಯನ್ನು ಕೀಳುವಾಗ ಕೆಳಕ್ಕೆ ಬೀಳಲು, ಎಷ್ಟೆಲ್ಲಾ ಅವಕಾಶವಿರುತ್ತದೆ. ಸೆರಿಬೆಲ್ಲಂ ಇನ ಜಾಣತನದ ನಿರ್ವಹಣೆಯಿಂದ, ಹುಡುಗ ಕೆಳಕ್ಕೆ ಬೀಳುವುದಿಲ್ಲ. ದುಡುಕಿದರೆ ಗೊತ್ತೆ ಇದೆ, ದುಢುಂ ಎಂದು ಬಿದ್ದು ಮಂಡಿಯನ್ನು ತರಚಿಕೊಳ್ಳುತ್ತಾನೆ, ಅಥವಾ