ಮನಮಂಥನ
ಅವನ್ನು ಮನಸ್ಸಿನ ಹಗೇವುಗಳಿಗೆ ಪ್ರಕೃತಿಯ ಸ್ವಸ್ವಭಾವದಿಂದ ದೂಡಿದ್ದು ! ಆದುದರಿಂದಲೇ ರೋಗಿಗೆ ಈ ವಿಷಯವನ್ನು ವೈದ್ಯನು ವಿವರಿಸಿದರೆ, ಅವ ತಿರುಗಿಬೀಳುತ್ತಾನೆ.
'ನೀತಿ ನಿಯಮಗಳನ್ನು ಅರಿಯದ ಜಾತಿಗೆಟ್ಟ ಡಾಕ್ಟರು ; ಅಲ್ಲಸಲ್ಲದ ಕೆಟ್ಟ ಆಸೆಗಳು ಅವನ ಮನಸ್ಸನ್ನು ಕಾಡುತ್ತಿವೆಯೇನೋ? ಅವನ್ನೆಲ್ಲಾ ನನಗೆ ವರ್ಗಾಯಿಸುತ್ತಿದ್ದಾನೆ. ನನ್ನಂತಹ ಧೀರೋದಾತ್ತನಿಗೆ ನನ್ನಂತಹ ನೀತಿ ಮೂರ್ತಿಗೆ ತಪ್ಪದೆ ಸಂಧ್ಯಾವಂದನೆಯನ್ನು ಮಾಡುವ, ದೇವಸ್ಥಾನಕ್ಕೆ ಆಗಿಂದಾಗ್ಗೆ ಹೋಗಿ ಸೇವೆ ಮಾಡುವ, ನನ್ನಂತಹ ದೈವಭಕ್ತನಿಗೆ, ದೈವಭೀರುವಿಗೆ ಇಂತಹ ಕೆಟ್ಟ ಯೋಚನೆಗಳು ಹೇಗೆ ತಾನೆ ಬರಲು ಸಾಧ್ಯ !" ಹೀಗೆ ಅವನ ಜಾಣ ಮತ್ತು ತೋರ ಮನಸ್ಸು ನುಡಿಯುತ್ತದೆ. ಆ ತನಕ ಬೆಳೆಸಿಕೊಂಡು ಬಂದಿರುವ ವೈದ್ಯನಲ್ಲಿನ ನಂಬಿಕೆಯು ಸಡಿಲವಾಗುತ್ತದೆ. ಆದಕಾರಣ ಬಿಚ್ಚು ಮಾತುಗಳಲ್ಲಿ ವೈದ್ಯನು ಇವನ್ನು ಹೇಳುವಂತಿಲ್ಲ. ಎಳ್ಳಂಬಳಸೆಯಾಗಿ ಪ್ರಶ್ನೆಗಳನ್ನು ಕೇಳಿ, ಬಂದ ಉತ್ತರಗಳಿಂದ ಅಗತ್ಯವಾದ ವಿಷಯಗಳನ್ನು ಸಂಗ್ರಹಿಸಬೇಕು.
ಉಸಿರು ಸಿಕ್ಕಿಕೊಂಡ ನಮ್ಮ ತರುಣ, ಈ ರೀತಿ ಎಳ್ಳಂಬಳಸೆ ಸಂಭಾಷಣೆ ಯನ್ನು ಮಾಡಿದಾಗ ಹೇಳಿದ:-
'ನನ್ನ ಕ್ಲಾಸ್ ಮೇಟ್ ಒಬ್ಬ ಇದಾನೆ, ಸಾರ್ ! ಎಂತಹ ದುರ್ಮಾರ್ಗಿ ಅಂತ ! ಅವನ ಹತ್ತಿರ ಮಾತನಾಡುವುದಿರಲಿ, ಅವನ ಮುಖವನ್ನು ನೋಡುವುದಕ್ಕೂ ನನಗೆ ಬೇಸರ. ಕ್ಲಾಸಿಗೆ ಚಕ್ಕರ್ ಕೊಟ್ಟು, ಮಧ್ಯಾಹ್ನದ ಮ್ಯಾಟನಿಗೆ, ಹುಡುಗಿಯ ಜತೆಗೆ ಹೋಗಿಬಿಡುತ್ತಾನೆ, ಸಾರ್ ! ಎಂಥಹ ರೌರವಾದಿ ನರಕ ಅವನಿಗೆ ಮೀಸಲಾಗಿದೆಯೋ ಕಾಣೆ !' ಎಂದು ಹೇಳಿ ಗಹಗಹಿಸಿ ನಕ್ಕ.
'ಅಷ್ಟರ ಕೀಳು ಮಟ್ಟಕ್ಕೆ ನಿಮ್ಮ ಕಾಲೇಜು ಈಗ ಇಳಿದಿದೆಯೇ?' ಎಂದು ಸಹಾನುಭೂತಿಯನ್ನು ತೋರಿಸಿದೆ. ಹಾಗೆ ಮಾಡುವಾಗ ಅವನ ನಿಷ್ಠೆಯನ್ನೂ ಹೊಗಳಿದಂತಾಯಿತು. ಅವನೂ ತುಸು Relax ಆದ. ಬಿಚ್ಚು ಮನಸ್ಸಿನಿಂದ ಮಾತನಾಡತೊಡಗಿದ.
ಪೌಗಂಡ ವಯಸ್ಸಿನಲ್ಲಿ ಸಹಜವೂ ಸ್ವಾಭಾವಿಕವೂ ಆದ ಇಂತಹ ಭ್ರಾಂತಿಗಳು ಒಂದು ದೃಷ್ಟಿಯಲ್ಲಿ ಅಗತ್ಯವೂ ಹೌದು. ನಿಷ್ಠಾಧೇಯದವರು, ಇಂತಹ ಭ್ರಾಂತಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ, ಆಳ ಮನಸ್ಸಿನ ಹಗೇವುಗಳಿಗೆ ದೂಡುತ್ತಾರೆ. ಮಲಗಿ ನಿದ್ರಿಸುವಾಗ ನಿಷ್ಠಾವಂತ ಮನಸ್ಸಿನ ಹತೋಟಿಯು ಮಸುಕಾಗುತ್ತದೆ. ಆಗ ಅದುಮಲ್ಪಟ್ಟ ಭ್ರಾಂತಿಯೋಚನೆಗಳೂ ಕನಸುಗಳಾಗಿ