೩೧೩
ನರಗಳ ಎಳೆಗಳು ಸಂಪರ್ಕವನ್ನು ಸಾಧಿಸುತ್ತಿಲ್ಲ ಎಂದಾಗ, ಅವು ತುಂಡಾಗಿರಲೇಬೇಕು ಎಂದು ಹೇಳುವಂತಿಲ್ಲ. ಏಕೆಂದರೆ ಅವುಗಳ ರಾಸಾಯನಿಕ ಸ್ಥಿತಿಯು ಕ್ಷಣ ಕ್ಷಣಕ್ಕೂ ಒಂದು ಇತಿಮಿತಿಯಲ್ಲಿ ವ್ಯತ್ಯಾಸವನ್ನು ಹೊಂದುತ್ತಿರುತ್ತದೆ. ನರಗಳಲ್ಲಿ ವಿದ್ಯುತ್ ಹರಿಯುವಾಗ ಹೀಗಾಗಬೇಕಾದುದು ಸಮಂಜಸ.
ಮೆದುಳಿನ ವಿವರಗಳನ್ನು ತಿಳಿದುಕೊಳ್ಳಲು, ಈ ರೀತಿ, ಕಣ್ಣಿಗೆ ಕಂಡ ಹಾಗೆ ಭಾಗಗಳನ್ನು ಮಾಡಿ ಅಧ್ಯಯನವನ್ನು ಮಾಡುತ್ತಾರೆ. ಆದರೆ ಮೆದುಳು ಕಾರ್ಯಗತವಾಗಿರುವಾಗ ಸಂಬಂಧಿಸಿದ ಎಲ್ಲಾ ಭಾಗಗಳ ಸುಸೂತ್ರ ಸಮನ್ವಯದಿಂದ, ಊಟಮಾಡುವವನಿಗೆ, ಅನ್ನ ಸಾರು, ಅನ್ನ ಹುಳಿ, ಮೊಸರನ್ನ, ಚಟ್ಟಿ ಎಂಬುದೇ ಪ್ರಾಮುಖ್ಯವಾದುದು. ಆದರೆ ಅಡಿಗೆಯನ್ನು ಮಾಡುವವನಿಗೆ, ಅನ್ನವೇ ಬೇರೆ, ಅದರ ಅಡಿಗೆಯೇ ಒಂದು ರೀತಿ, ಸಾರು ಬೇರೆ, ಅದರ ಅಡಿಗೆಯು ಮತ್ತೊಂದು ರೀತಿ. ಹುಳಿ ಮತ್ತು ಅದರ ಅಡಿಗೆಯೇ ಬೇರೊಂದು ತರಹ, ಮನಸ್ಸನ್ನು ಉಪಯೋಗಿಸಿಕೊಳ್ಳುವಾಗ ಊಟವನ್ನು ಮಾಡಿದಂತೆ. ಮನಸ್ಸನ್ನು ವಿಶ್ಲೇಷಿಸಿ, ಅದರ ಕಾರ್ಯಕ್ರಮವನ್ನು ವಿವರವಾಗಿ ತಿಳಿಯುವಾಗ, ಅಡಿಗೆಯವನಂತಾಗಬೇಕು. ಈ ವ್ಯತ್ಯಾಸವನ್ನು ಗಮನಿಸಬೇಕು. ಇಷ್ಟು ಅನ್ನಕ್ಕೆ ಅಷ್ಟು ಸಾರನ್ನು ಹಾಕಿ ಕಲಸಿ ಕೊಳ್ಳಬೇಕು, ಎನ್ನುವುದು ಉಣ್ಣುವವನ ಅಭಿರುಚಿಗೆ ತಕ್ಕಂತೆ. ಇದರ ಕಲ್ಪನೆಯು ಕೂಡ ಅಡಿಗೆಯವನಿಗೆ ಇರುವುದಿಲ್ಲ. ಅದೇ ರೀತಿಯಲ್ಲಿ ಅಡಿಗೆಯನ್ನು ಮಾಡುವವನ ಕೆಲಸಗಳ ಕಲ್ಪನೆಯು ಉಣ್ಣುವವನಿಗೆ ಇರಬೇಕಾಗಿಲ್ಲ. ಮನಸ್ಸಿನ ಕೆಲಸವೂ ಹೀಗೆಯೇ. ಮನಸ್ಸನ್ನು ಉಪಯೋಗಿಸುವವನು ತನ್ನ ಅಭಿರುಚಿಗೆ ತಕ್ಕಂತೆ ಬಳಸಿಕೊಳ್ಳುತ್ತಾನೆ. ಆದರೆ ಮನಃಶಾಸ್ತ್ರಜ್ಞರು ಅಡಿಗೆಯವರಂತೆ. ಮನಸ್ಸನ್ನು ವಿಶ್ಲೇಷಿಸುವುದು ಮಾತ್ರವಲ್ಲದೆ, ಅಭಿರುಚಿಯನ್ನೂ ತಿಳಿದು ಅಳತೆಮಾಡಲೂ ಕೂಡ ಪ್ರಯತ್ನಿಸುತ್ತಾರೆ. Aptitude tests ಎನ್ನುವುದು, ಈ ರೀತಿಯವು. ಆದರೆ ಈ ವಿಷಯದಲ್ಲಿ, ಈಗಿನ ವೈಜ್ಞಾನಿಕ ಹಂತದಲ್ಲಿ ಊಹಾಪೋಹಗಳು ತಾಂಡವವಾಡುತ್ತಿವೆಯೇ ವಿನಹಾ, ನಿಖರವಾದ ಸಿದ್ಧಾಂತಗಳಲ್ಲ. ಆದರೂ ವ್ಯಕ್ತಿಯ ಅಭಿರುಚಿಯನ್ನು ಸಾಕಷ್ಟುಮಟ್ಟಿಗೆ ತಿಳಿಯಬಹುದು. ಉದಾಹರಣೆಗೆ :-
'ರಾಮಯ್ಯನವರು ಮನೆಯಲ್ಲಿದ್ದಾರೆಯೇ ನೋಡಿಕೊಂಡು ಬಾ' ಎಂದು ಯಜಮಾನರು ಜವರನಿಗೆ ಹೇಳಿದರು. ಜವರ ಹೋಗಿ ಬಂದ 'ಆಯ್ಯನವರು ಮನೆಯಾಗಿಲ್ಲ, ಬುದ್ಧಿ !” ಎಂದು ಹೇಳಿದ. ಎಂಟು ವರ್ಷದ ಮಗ ಕಿಟ್ಟುವನ್ನು ಕರೆದು 'ರಾಮಯ್ಯನವರು ಮನೇಲಿದ್ದಾರೆಯೆ ? ನೋಡಿಕೊಂಡು ಬಾ' ಎಂದರು.