೩೧೫
ಆತನ ಸಿದ್ಧಾಂತವು ಭದ್ರವಾದ ತಳಹದಿಯಾಯಿತು.
ಆದರೆ ಹಿಂದೆ ನಡೆದ ಹತ್ತನೆಯ ಶತಮಾನದಲ್ಲಿ, ಇಂತಹ ಪ್ರಚಂಡ ಬುದ್ಧಿ ಇದ್ದವರು ಇರಲೇ ಇಲ್ಲವೇ ? ಇದ್ದೇ ಇರಬೇಕು. ಆದರೆ ಭೌತಶಾಸ್ತ್ರದ ಪ್ರಗತಿಯು ಆ ಶತಮಾನದಲ್ಲಿ ಶೈಶವಾಸ್ಥೆಯಲ್ಲಿತ್ತು. ಆದಕಾರಣ ಅಂತಹ ಪ್ರಚಂಡನು ಇದ್ದಿದ್ದರೂ, ಅವನ ಚುರುಕು ಬುದ್ಧಿಯು ಅಮೋಘವಾಗಿ ವಿಕಸಿಸಲು ಸಾಧ್ಯವಾಗಲಿಲ್ಲ. ಆದರೆ ಈ ಶತಮಾನದ ವೇಳೆಗೆ ಭೌತಶಾಸ್ತ್ರದ ಜ್ಞಾನ ಭಂಡಾರವು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದಿತು. ಐನ್‌ಸ್ಟೈನನ ಮನಸ್ಸು ವಿಕಸಿಸಲು ಅವಕಾಶವು ಬಹಳಷ್ಟು ಇತ್ತು.
ಇಂದಿನವರೆವಿಗೂ ಪ್ರಪಂಚದಲ್ಲೆಲ್ಲಾ ಅತ್ಯಂತ ಮೇಧಾವಿಯಾಗಿದ್ದವನು, ಬಲು ಪ್ರಚಂಡನಾಗಿದ್ದವನು, ಎಂದರೆ ಲಿಯೋನಾಡೊ ಡ ವಿಂಚಿ. ಶಿಲ್ಪ ಕಲೆಯಲ್ಲಾಗಲೀ, ವರ್ಣಚಿತ್ರರಚನೆಯಲ್ಲಾಗಲೀ, ವಿಜ್ಞಾನದಲ್ಲಾಗಲೀ, ಆತ ಸಾಧಿಸಿದ ಔನ್ನತ್ಯವು, ಮಿಕ್ಕ ಯಾರಿಂದಲೂ ಆಗಿಲ್ಲ, ಎಂದು ಪ್ರಚಂಡರು ಎನಿಸಿಕೊಂಡ ಹಲವಾರು ಜನರು ನುಡಿದಿದ್ದಾರೆ. ಆದರೆ ಭೌತವಿಜ್ಞಾನದಲ್ಲಿ ಆತನಿಗೆ ತಿಳಿದುದಕ್ಕಿಂತ ಹೆಚ್ಚಾಗಿ, ಇಂದಿನ ಕಾಲೇಜುಗಳ ಭೌತ ವಿದ್ಯಾರ್ಥಿಗಳು ಕಲಿತುಕೊಂಡಿದ್ದಾರೆ.
ಏಳನೆಯ ಶತಮಾನದಲ್ಲಿ ಆದಿಶಂಕರಾಚಾರ್ಯರು ಬರೆದು ಪ್ರಚಾರಕ್ಕೆ ತಂದ ಸಿದ್ಧಾಂತವು ಇಂದೂ ಪ್ರಪಂಚದ ಹಲವಾರು ಬುದ್ಧಿ ಜೀವಿಗಳ ಮನ್ನಣೆಯನ್ನು ಪಡೆದಿದೆ. ಆದರೆ ಅವರು ಬಾಳಿದ ಕಾಲದಲ್ಲಿ, ನಮ್ಮ ರಾಷ್ಟ್ರದಲ್ಲಿ, ಆತ್ಮಜ್ಞಾನದ ಅರಿವು ಬುದ್ಧಿಜೀವಿಗಳ ಏಕೈಕ ಗುರಿಯಾಗಿತ್ತು. ಆದರೆ ಆದಿಶಂಕರರು ಈಗ ಬದುಕಿದ್ದಿದ್ದರೆ, ರಸಾಯನ ಅಥವಾ ಭೌತಶಾಸ್ತ್ರದ ಅಧ್ಯಯನವನ್ನು ಮಾಡಿದ್ದಿದ್ದರೆ ನೋಬೆಲ್ ಪಾರಿತೋಷಕವು ಹಲವಾರುಬಾರಿ ನಮ್ಮ ದೇಶಕ್ಕೆ ದೊರೆಯುತ್ತಿತ್ತು.
ಸಾರಾಂಶವೇನೆಂದರೆ ಪ್ರಚಂಡ ಬುದ್ಧಿ ಇದ್ದರೂ, ಅದು ವಿಕಸಿಸಿ ಫಲಪ್ರದವಾಗಬೇಕಾದರೆ, ಆ ಕಾಲದ ಜ್ಞಾನ ಭಂಡಾರವು ತಳಹದಿಯಾಗುತ್ತದೆ; ಅದನ್ನು ಅನ್ವಯಿಸಿಕೊಂಡು, ಅವರುಗಳು ನವ್ಯ ಸಿದ್ಧಾಂತಗಳನ್ನು ಕಟ್ಟಬೇಕು. ಇಂದಿಗೂ ಆಫ್ರಿಕಾದ ಹಿಂದುಳಿದ ಜನಾಂಗಗಳಲ್ಲಿ, ನ್ಯೂಟನ್, ಐನ್‌ಸ್ಟೈನ್‌ರಂತಹ ಪ್ರಚಂಡಮತಿಗಳಿರಬೇಕು. ಆದರೆ ಅವರ ಪ್ರಚಂಡ ಬುದ್ಧಿಯು, ಬಿಲ್ಲು ಬಾಣಗಳನ್ನು ನವೀನಗೊಳಿಸುವುದರಲ್ಲಿ ಮುಕ್ತಾಯಗೊಳ್ಳುತ್ತಿರಬಹುದು. ಆದರೆ ಮನಸ್ಸಿನಲ್ಲಿ ಆಲೋಚನಾ ಶಕ್ತಿಯು ಚುರುಕಾಗಿರಬೇಕಾದರೆ, ವಂಶಾನುಗತವಾಗಿ ನಡೆದುಬಂದ ಗುಣವು ಅಗತ್ಯ. ಅಷ್ಟೇ ಅಗತ್ಯವಾದುದು, ಆ ಕಾಲದ ಮಾನವನ ಜ್ಞಾನ