ಈ ಪುಟವನ್ನು ಪ್ರಕಟಿಸಲಾಗಿದೆ
೩೧೬
ಮನಮಂಥನ
ಭಂಡಾರ.
ಮಾನವನ ಮಾನಸಿಕ ಆರೋಗ್ಯವನ್ನು ತಿಳಿದುಕೊಳ್ಳುವಾಗ, ಮನಸ್ಸಿನ ಈ ಗುಣವನ್ನು ಮರೆಯಬಾರದು. ಮನಸ್ಸಿನ ಅನಾರೋಗ್ಯಕ್ಕೂ, ಅದರ ಪರಿಹಾರ ಕ್ರಮಕ್ಕೂ, ಇಂತಹ ತಿಳಿವಳಿಕೆಯು ಅತ್ಯಗತ್ಯ.
ಮನಸ್ಸಿನ ಕಾರ್ಯಕ್ರಮವನ್ನು ತಿಳಿಯುವಾಗ, ಮನುಷ್ಯನ ಹಲವಾರು ಸ್ವಾಭಾವಿಕವಾದ ಅವಸ್ಥೆಗಳನ್ನೂ ಗಮನಿಸಬೇಕು. ಬಾಲ್ಯ, ಕೌಮಾರ, ಯೌವನ ವಾರ್ಧಕ್ಯ ಎಂದು ನಾಲ್ಕು ಮುಖ್ಯವಾದ ಅವಸ್ಥೆಗಳನ್ನು ಮನುಷ್ಯನು ಸ್ವಾಭಾವಿಕವಾಗಿ,ಒಂದಾದ ಮೇಲೊಂದರಂತೆ ಅನುಭವಿಸಬೇಕು. ಆಕಸ್ಮಿಕಕ್ಕೆ ಗುರಿಯಾಗಿ ಸಾಯದೆ ಇದ್ದರೆ, ಮನಸ್ಸಿನ ಚಟುವಟಿಕೆಗಳು, ಈ ಅವಸ್ಥೆಗಳಿಗೆ ಅನ್ವಯವಾಗಿರುತ್ತವೆ.ಆದಕಾರಣ ಮನಸ್ಸನ್ನು ವಿಶ್ಲೇಷಿಸುವಾಗ, ಈ ವಿಂಗಡನೆಯನ್ನು ಬಳಸಿಕೊಳ್ಳುವುದು ಉಪಯುಕ್ತ.