ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೨೦

ಮನಮಂಥನ

ಮೊದಮೊದಲು ಮಾತುಗಳ ಅನುಕರಣೆಯು ಪುರಾತನ ಭಾಷೆಯಂತಿರುತ್ತದೆ. ಬೆಳೆಯುತ್ತಾ ಹೋದಂತೆಲ್ಲಾ ಪುರಾತನ ಭಾಷೆಯು ನೂತನ ಭಾಷೆಯಾಗುತ್ತದೆ.

ಅಮ್ಮ ಅಪ್ಪ, ಇವುಗಳು ಮಮ್ಮಿ ಡ್ಯಾಡಿಗಳಾಗತೊಡಗುತ್ತವೆ. ಎಳೆಯ ಮಗುವಾಗಿದ್ದಾಗ ತಾಯಿಯು 'ಆ ಅನ್ನು' ಎಂದು ಹೇಳಿ ಔಷಧಿಯನ್ನು ನೀರಿದಲ್ಲಿ ಕದರಿ ಕುಡಿಸುತ್ತಾಳೆ, ಅಗತ್ಯ ಬಿದ್ದಾಗ, ಮಗುವಿನ ಮನಸ್ಸಿನಲ್ಲಿ ಕೆಲಕಾಲ ಕುಡಿಯುವುದೆಲ್ಲವೂ 'ಆನು' ಎಂದು ಸ್ಥಿರವಾಗುತ್ತದೆ. ಪುರಾತನ ಭಾಷೆಯ ರೀತಿ ಇದು. ಆನಂತರ ನೀರನ್ನು ಕುಡಿಯಬೇಕಾದಾಗ ಮಗುವು 'ಆನು, ಅನು ಎನ್ನುತ್ತದೆ. ನೀರನ್ನು ನೀಡಿದರೆ ನಗಲು ಆರಂಭಿಸುತ್ತದೆ. 'ಆ ಅನ್ನು' ಎನ್ನುವುದು ಮಗುವಿನ ಆ ವಯಸ್ಸಿನಲ್ಲಿ 'ಆನು' ಆಗಿರುತ್ತದೆ. ಕುಡಿಯುವ ಪದಾರ್ಥ ಎಂಬ ಅರ್ಥ, ಅದಕ್ಕೆ. ಇದೇ ರೀತಿಯಲ್ಲಿ ಹಿರಿಯರನ್ನು ಅನುಕರಣೆ ಮಾಡುತ್ತ ತನ್ನ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಹಾಗೂ ಶಬ್ದ ಸಂಪತ್ತನ್ನು ಹೆಚ್ಚು ಮಾಡಿಕೊಳ್ಳುತ್ತದೆ.

ಮೂರನೆಯ ವರ್ಷದಿಂದ ಆರನೆಯ ವರ್ಷದವರೆಗೆ, ಕೇಳಿಸಿದುದನ್ನು ಆಡಲು ಕಲಿಯಲು ಮುಖ್ಯವಾದ ವಯಸ್ಸು ಕೇಳಿಸಿದುದನ್ನು ಅರ್ಥಮಾಡಿಕೊಂಡು ಸ್ಮರಣೆಯಲ್ಲಿಟ್ಟುಕೊಳ್ಳುವುದು ; ಮತ್ತು ಅದರಂತೆಯೇ ಮಾತನಾಡುವುದು, ಈ ಕೆಲಸಗಳಿಗೆ ಮೆದುಳಿನ ಒಂದು ಭಾಗವು ಮೀಸಲಾಗಿರುತ್ತದೆ. Speech Brain ಎಂದು ಅನ್ವರ್ಥವಾಗಿ ಈ ಭಾಗವನ್ನು ಕರೆಯುತ್ತಾರೆ. ಕಂಡುದನ್ನು ತೋಚಿದಂತೆ ಬರೆಯ ತೊಡಗುವುದೂ ಮೆದುಳಿನ ಈ ಭಾಗದಿಂದ ನಿರ್ವಹಿಸಲ್ಪಡುತ್ತದೆ.

ಮೂರು ಅಥವಾ ನಾಲ್ಕು ವರ್ಷ ವಯಸ್ಸಿನ ಮಕ್ಕಳು ಚಿತ್ರ ಬರೆಯುವುದನ್ನು ನೋಡಿ ! ಮರಗಳ ಚಿತ್ರ ಮನುಷ್ಯರ ಕಡ್ಡಿ ಚಿತ್ರ ಹಕ್ಕಿಯ ಚಿತ್ರ, ಇತ್ಯಾದಿಗಳು ಹಿರಿಯರ ಕಣ್ಣಿಗೆ ನಗುವನ್ನು ಮೂಡಿಸಿದರೂ, ಬರೆದ ಮಕ್ಕಳ ಕಣ್ಣುಗಳಿಗೆ ಬಲು ಚೆಲುವಾಗಿರುತ್ತವೆ.

ಮಾನಸಿಕ ರೋಗಗಳು ತಗಲಿರುವ ಕೆಲವರು ಮಕ್ಕಳಂತೆಯೇ ಚಿತ್ರಗಳನ್ನು ಬರೆಯುತ್ತಾರೆ ; ಪ್ರಯೋಗಾ ಪರೀಕ್ಷೆಗಳನ್ನು ಮಾಡಿದಾಗ, ಬರೆದ ಚಿತ್ರಗಳ ಸ್ವರೂಪವನ್ನು ನೋಡಿ, ಮಾನಸಿಕ ಬೇನೆಯು ಯಾವ ತೆರನಾದುದು ಎಂಬುದನ್ನು ಊಹಿಸಬಹುದು.

ಆರು ವರ್ಷದ ವಯಸ್ಸು ಮುಗಿಯುವ ವೇಳೆಗೆ, ಮಗುವಿನ ಮೆದುಳಿನಲ್ಲಿ ಈ ಭಾಗವು ಸಂಪೂರ್ಣವಾಗಿ ವೃದ್ಧಿಯಾಗಿರುತ್ತದೆ. ಅಂದರೆ ಮೆದುಳಿನ ಆ ಭಾಗವು ಸುಸೂತ್ರವಾಗಿ, ಒಂದಕ್ಕೊಂದನ್ನು ಅನ್ವಯಿಸಿಕೊಂಡು