ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೧೫

ವೇಷ ಧರಿಸಿಕೊಂಡು ನಿದ್ರಿಸುವವನ ಮನಸ್ಸಿನಲ್ಲಿ ಚಲನಚಿತ್ರದಂತೆ ಪ್ರದರ್ಶನವನ್ನು ನಡೆಸುತ್ತವೆ. ವಯಸ್ಸಿನ ಸ್ವಾಭಾವಿಕ ಒತ್ತಡವನ್ನು ಕನಸಿನಲ್ಲಿ ನೆನೆಸಿ, ಇಳಿಸುತ್ತದೆ. ಮನಸ್ಸಿನ ಈ ವರ್ತನೆಯನ್ನು ಎಳ್ಳಂಬಳಸೆಯಾಗಿ ವಿವರಿಸಿದಾಗ, ಅವನೇ ಹೇಳಿದ :-

'ಕೆಲವೊಮ್ಮೆ, ನನಗೂ ಯಾವ ಪ್ರೇರಣೆಯು ಇರದೆ ಇದ್ದರೂ, ಅಸಹ್ಯವಾದ ಕನಸುಗಳು ಬೀಳುತ್ತವೆ. ಎಚ್ಚರವಾಗುವ ಹೊತ್ತಿಗೆ ಮೈಲಿಗೆಯಾಗಿ ಬಿಟ್ಟಿರುತ್ತೇನೆ. ಮನಸ್ಸಿಗೆ ತುಂಬಾ ಬೇಸರವೂ ಜುಗುಪ್ಪೆಯೂ ಆಗುತ್ತದೆ. ಆಗ ಇದನ್ನು ತಪ್ಪಿಸುವಂತೆ ಔಷಧಿಗಳನ್ನು ಕೊಡಿ, ಸಾರ್' ಎಂದು.

ಹೀಗಾಗುವುದು ಯೌವನದ ಸಹಜ ಪ್ರವೃತ್ತಿ ಎಂದವನಿಗೆ ತಿಳಿದಿದ್ದರೆ, ಹೀಗಾಗುತ್ತಲ್ಲ ಎನ್ನುವ ಹೇಯ ಮನೋಭಾವವು ಉಂಟಾಗುತ್ತಿರಲಿಲ್ಲ. ಕೊರಗುತ್ತಲೂ ಇರಲಿಲ್ಲ. ಇನ್ನೂ ಒಂದು ಭಯಂಕರ ಪಿಶಾಚಿಯು ಅವನನ್ನು ಕಾಡುತ್ತದೆ. 'ಹೀಗೆಯೇ ಮುಂದೆಯೂ ಆಗುತ್ತ ಹೋದರೆ, ನನ್ನ ದೇಹವು ಶಿಥಿಲವಾಗುತ್ತದೆ. ಮದುವೆಯಾಗುವ ಹೊತ್ತಿಗೆ ಬೃಹನ್ನಳೆಯಾಗಿ ಬಿಡುತ್ತೇನೆ. ನನ್ನ ಬಾಳಭವಿಷ್ಯವೇ ಹಾಳಾಗಿ ಹೋಗುತ್ತದೆ' ಎನ್ನುವ ಪಿಶಾಚಿಯು ಅವನ ಮನಸ್ಸನ್ನು ಕಾಡತೊಡಗುತ್ತದೆ. ಪತ್ರಿಕೆಗಳಲ್ಲಿ ಬರುವ ಜಾಹಿರಾತುಗಳು, ವಿಧವಿಧ ಮುರಬ್ಬಾಗಳೂ ಈ ಪಿಶಾಚಿಗಳನ್ನು ಹೊರವಾಗಿ ಬೆಳೆಸುತ್ತವೆ. ಜತೆ ವಯಸ್ಸಿನ ಗೆಳೆಯರು ಹೇಳುವ ಘೋರ ವಿವರಗಳೂ ಇಂತಹ ಪಿಶಾಚಿಗೆ ಕುಮ್ಮಕ್ಕು ಕೊಡುತ್ತವೆ. ಪತ್ರಿಕೆಗಳಲ್ಲಿ ಬರುವ ಲೇಖನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಅರ್ಧಂಬರ್ಧ ಅಪಾರ್ಥ ಮಾಡಿಕೊಳ್ಳುವುದರಿಂದಲೂ ಷಂಡತ್ವದ ಭಯವು ಅತಿಯಾಗುತ್ತದೆ. ಈ ವಿಷಯವನ್ನೆಲ್ಲಾ ಬಿಡಿಬಿಡಿಯಾಗಿ, ಮೇಲಿಂದಮೇಲೆ ಒತ್ತಿಒತ್ತಿ ಹೇಳಿದೆ. 'ಬಹುಪಾಲು ಜನರಿಗೆ ಪೌಗಂಡ ವಯಸ್ಸಿನಲ್ಲಿ ಹೀಗಾಗುವುದು ಸರ್ವೆ ಸಾಮಾನ್ಯ ಮತ್ತು ಸ್ವಾಭಾವಿಕ. ಹಲವಾರು ಯುವಕರು, ಕನಸಿಗಾಗಿ ಕಾಯದೆ, ಸ್ವಸಹಾಯವನ್ನು ಪಡೆದು ಒತ್ತಡವನ್ನಿಳಿಸಿಕೊಳ್ಳುತ್ತಾರೆ. ಇದರಿಂದಾಗಿ ಯಾವ ದುಷ್ಪರಿಣಾಮವೂ ದೇಹದ ಮೇಲೆ ಆಗುವುದಿಲ್ಲ. ದೇಹವನ್ನು ಮುಂದೆ, ಯಾವ ರೀತಿಯಲ್ಲೂ ಕುಂಟಿಸುವುದಿಲ್ಲ. ಉದ್ವೇಗವು ಅಧಿಕವಾದಾಗ ಮತ್ತು ಅತ್ಯುತ್ಕಟವಾದಾಗ, ಹೀಗೆ ಆಗುತ್ತದೆ. ಆಗಲೂ ಉಸಿರು ವೇಗವೇಗವಾಗಿ, ಹುಚ್ಚು ರೇಗಿದ ತಿದಿಯಂತೆ ಆಡುತ್ತದೆ.

'ನಿಷ್ಠಾವಂತ ಪ್ರವೃತ್ತಿಯ ಯುವಕರು, ಈ ವಯಸ್ಸಿನ ಪ್ರಾಯದಲ್ಲಿ Super Ego ವನ್ನು ಬಲಪಡಿಸಿಕೊಳ್ಳುತ್ತಾರೆ. ಅಂತಹ ಮಾನಸಿಕ ಪರಿಸ್ಥಿತಿಯಲ್ಲಿ, ದೇಹದ