ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೨೪

ಮನಮಂಥನ

ಇದ್ದಂತೆ ಇದ್ದರೆ ಆಯಿತು ; ಮುಂದಿನ ಯೋಚನೆಯೇ ಬೇಡ ; ಇದ್ದರೂ ಆಯಿತು, ಹೋದರೂ ಆಯಿತು ಎಂದು ಯೋಚಿಸುವ ಗೋಜೂ ಇರದ, ಮನಸ್ಸಿನ ತಮಃಶಕ್ತಿಯನ್ನು ID ಎಂದನ್ನಬಹುದು. ದೇಹ ಮತ್ತು ಅದಕ್ಕೆ ನಿಕಟವಾದ ಸಂಬಂಧವನ್ನು ಪಡೆದ ಮನಸ್ಸಿನ ಅಂಶ, ಇವೆರಡರ ಒಕ್ಕೂಟವನ್ನು ID ಒತ್ತಾಯ ಪೂರ್ವಕವಾಗಿ ಪ್ರೇರಿಸುತ್ತದೆ.

IDನಲ್ಲಿ ಹುದುಗಿ ಸುಪ್ತವಾಗಿರುವ ಕಾಮ ಪ್ರವೃತ್ತನೆಯು ಬಾಲಕರಲ್ಲಿ ಕೂಡ ಅತ್ಯಂತ ಪ್ರಭಾವಯುತವಾಗಿರುತ್ತದೆ ಎಂದು ಫ್ರಾಯ್ಡ್ ಸಿದ್ಧಾಂತ ಮಾಡಿದ. ಆದರೆ ಬಹು ಮಂದಿ ಮನೋವಿಜ್ಞಾನಿಗಳು ಈ ಸಿದ್ಧಾಂತವನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಭಾಗವತದ ಬಾಲಕೃಷ್ಣನ ಕಾಮ ಲೀಲೆಗಳು ಫ್ರಾಯ್ಡನ ಸಿದ್ಧಾಂತಕ್ಕೆ ಸ್ವಲ್ಪ ಮಟ್ಟಿಗೆ ಬೆಂಬಲವನ್ನು ನೀಡುತ್ತದೆಯೇನೋ? ಎನ್ನಿಸುತ್ತದೆ. ಕಾಮದಿಂದ ಪ್ರಚೋದಿತವಾದ ಬಾಲ ಲೀಲೆಗಳೇ ವಿನಹಾ ವಯಸ್ಕರ ಕಾಮ ಕೇಳಿಗಳಲ್ಲ ಎಂಬುದನ್ನು ಗಮನಿಸಬೇಕು.

ಬಾಲಕನಲ್ಲಿ ಮನಸ್ಸಿನ ಮೂರು ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ೧. ID ಎಂಬ, ತಮೋಗುಣ ಪ್ರಧಾನವಾದ, ಹಾಗೂ ಪುರಾತನವಾದ ಒಂದು ಅಂಶ. ದೇಹ ಮತ್ತು ಅದಕ್ಕೆ ನಿಕಟವಾಗಿ ಸಂಬಂಧಿಸಿದ ಮನಸ್ಸಿನ ಅಂಶ, ಇವು ID ಇನ ಪ್ರಭಾವಕ್ಕೆ ತುತ್ತಾಗಿವೆ.

೨.EGO, 'ನಾನು' ಎಂದು ಮನಸ್ಸು ಕಲ್ಪಿಸಿಕೊಂಡ ಅಂಶ. ಈ ಅಂಶವೇ ಮನಸ್ಸಿನ ನೇತೃತ್ವದಲ್ಲಿ ದೇಹದಿಂದ ಕಾವ್ಯ ಸಾಧನೆಗಳನ್ನು ನಡೆಸುವುದು Executive ಇದ್ದಂತೆ, ರಜೋಗುಣ ಪ್ರಧಾನವಾದುದು.

೩.Super-Egoಅಥವಾ ಮನಸ್ಸಿನ ಸತ್-ಚೈತನಾಂಶ, EGO, ಅಥವಾ 'ತನ್ನ'ತನವು ID ಇನ ಸ್ಟೇಚ್ಛಾ ಪ್ರವೃತ್ತಿಯನ್ನು ತಹಬಂದಿಯಲ್ಲಿರುವ, ಮನಸ್ಸಿನಲ್ಲಿ ರೂಢಿತವಾದ ಶಕ್ತಿ ಅಥವಾ ಕಲ್ಪನೆ ; ಸುತ್ತಲಿನ ಸಮಾಜದ ಹಿತವನ್ನು ರಕ್ಷಿಸಿ, ಆ ಮೂಲಕ ಸಮಾಜವು ವ್ಯಕ್ತಿಗೆ ರಕ್ಷಣೆಯನ್ನು ನೀಡುವಂತೆ ಮಾಡುವ ಶಕ್ತಿ.

ಬಾಲಕರಲ್ಲಿ ಕಾಣಬರುವ ಮನಸ್ಸಿನ ಮುಖ್ಯವಾದ ಈ ಮೂರು ಕಾರ್ಯ ಕ್ರಮಗಳು ಪರಾವಲಂಬಿಯಾಗಿರುವಾಗ ಹೀಗಿರುತ್ತದೆ.

ಸ್ವಾವಲಂಬಿಯಾಗಿ, ಬಾಲಕನು ಪ್ರೌಢನಾದ ಮೇಲೆ ಮನಸ್ಸಿನ ಕಾರ್ಯ ಕ್ರಮಗಳು ಹೇಗೆ ಪರಿವರ್ತನೆಯನ್ನು ಹೊಂದುತ್ತವೆ?