೩೨೫
ಯೌವನ ಅಥವಾ ಪ್ರೌಢ ವಯಸ್ಸಿನವರಲ್ಲಿ ಮನಸ್ಸಿನ ಕಾರ್ಯಕ್ರಮ.
ಯಾವುದಾದರೂ ಮದುವೆಯ ಮನೆಯಲ್ಲಿ ಹದಿಮೂರು ಹದಿನಾಲ್ಕು ವಯಸ್ಸಿನ ಹುಡುಗರೂ ಹುಡುಗಿಯರೂ ಬೇಕಾಬಿಟ್ಟಿಯಾಗಿ ಆಡಿಕೊಂಡಿರುತ್ತಾರೆ. ಅವರುಗಳ ಕಣ್ಣಿಗೆ ಇವನು ಗಡವಾ, ಇವನೊಂದಿಗೆ ಆಡುವುದಿಲ್ಲ, ಅವರೊಂದಿಗೆ ಆಡಲು ಇವನಿಗೂ ಇಷ್ಟವಿರುವುದಿಲ್ಲ. ಏಕೆಂದರೆ ನಾನು ಬೆಳೆದಿದ್ದೇನೆ. ಈಗ ದೊಡ್ಡವ ಎಂಬ ಭಾವನೆಯು ಉಂಟಾಗುತ್ತದೆ. ಚಡ್ಡಿಯ ಬದಲು ಪಂಚೆಯನ್ನೋ ಅಥವಾ ಪೈಜಾಮಗಳನ್ನೋ ಧರಿಸಲು ಶುರುಮಾಡಿರುತ್ತಾನೆ. ದೊಡ್ಡವರು ಕೂತಿರುವೆಡೆಗೆ ಹೋಗಿ, ತಾನೂ ಅವರ ಮಾತುಕತೆಗಳಲ್ಲಿ ತಲೆ ಹಾಕತೊಡಗುತ್ತಾನೆ. 'ಅಧಿಕ ಪ್ರಸಂಗಿ ; ದೊಡ್ಡವರ ಮಾತಿನಲ್ಲಿ ತಲೆ ಹಾಕಬೇಡ ; ಹುಡುಗರ ಜತೆಗೆ ಆಡಿಕೋ ಹೋಗು' ಎಂದು ಬೈಸಿಕೊಂಡು, ಮನಸ್ಸು ಚಿಕ್ಕದು ಮಾಡಿಕೊಂಡು, ಬೇರೆಡೆಗೆ ಸಾಗುತ್ತನೆ. ಸಮ ವಯಸ್ಕರು ಸಿಗದಿದ್ದರೆ ನಾಯಿಪಾಡೇ ಅವನದು. ಮದುವೆಯ ಗಿಜಿಗಿಜಿಯಲ್ಲಿ ಅವ ಒಂಟಿ.
ಈ ರೀತಿಯಲ್ಲಿ ಆರಂಭವಾಗುತ್ತದೆ ಯುವಕನ ವಯಸ್ಸು, ಪೌಗಂಡ ವಯಸ್ಸು 'ತನ್ನ ತನವು, EGO ವು ಸಾಕಷ್ಟು ಬೆಳೆದಿರುತ್ತದೆ. ದೇಹವೂ ಹೊರವಾಗಿರುತ್ತದೆ. ತಾಯ್ತಂದೆಯರು, ಮತ್ತು ಮನೆಯ ಇತರರು ಬಾಲ್ಯದಲ್ಲಿ, ಮುದ್ದು ಮಾಡುವಂತೆ, ಈಗ ಮಾಡುವುದಿಲ್ಲ. ದೊಡ್ಡವರು ಇವನನ್ನು ಗೌರವಿಸುವುದೂ ಇಲ್ಲ. ಮರ್ಯಾದೆಯಿಂದ ಇತರರನ್ನು ಮಾತನಾಡಿಸುವಂತೆ, ಮಾತನಾಡಿಸುವುದೂ ಇಲ್ಲ. ಹೀಗಾಗಿ ಬಾಲ್ಯದ ಅದರವೂ ತಪ್ಪಿತು ; ಬೆಳೆದವರ ಸದರವೂ ಸಿಗಲಿಲ್ಲ. ಯುವಕನ EGOವಿಗೆ ಪೆಟ್ಟು ಬೀಳುತ್ತಲೇ ಇರುತ್ತದೆ.
ID ಇನ ಕಾವ್ಯಗಳು ಈ ವಯಸ್ಸಿನಲ್ಲಿ, ಬಾಲ್ಯದಲ್ಲಿದ್ದಂತೆ ಸುಪ್ತವಾಗಿರುವುದಿಲ್ಲ. ಸ್ಪಷ್ಟವಾಗತೊಡಗುತ್ತವೆ. ಅವುಗಳನ್ನು ಈಡೇರಿಸಲು, EGO ವಿಗೆ ಸಾಕಷ್ಟು ಲೋಕಾನುಭವವಾಗಲೀ, ಅಗತ್ಯವಾದಷ್ಟು ಸ್ವಯಂಶಕ್ತಿಯಾಗಲೀ ಯುವಕನಲ್ಲಿರುವುದಿಲ್ಲ. ಪೆಟ್ಟುಗಳನ್ನು ಪರಿಸರದಿಂದ ಪಡೆಯುತ್ತಿರುವ EGO ವನ್ನು, ಅವನ ID ಈಗ ಕೆಣಕತೊಡಗುತ್ತದೆ. 'ಲೇ, EGO! ಪುರಾತನವಾದ ನನ್ನ ಭುಜಗಳ ಮೇಲೆ ನೀನು ಕುಳಿತಿರುವೆ. ನಿನಗೆ ಸಾಕಷ್ಟು ಅವಮಾನವಾಗಿದೆ, ಗಾಯಗಳಾಗಿವೆ. ನನ್ನ ಮಾತನ್ನು ಕೇಳು. ನಿನ್ನ ಹಿರಿಮೆಯನ್ನು ಸಾಧಿಸಿಕೋ, ಬಂಡೆದ್ದು ಹೋರಾಡಿಯಾದರೂ ಎಲ್ಲರಿಗಿಂತಲೂ ತಲೆಯನ್ನು ಹೆಚ್ಚು ಎತ್ತರ ನಿಲ್ಲಿಸು. ಹಾಗೆ ನೀನು ಮಾಡದೆ ಇದ್ದರೆ, ಹೇಳ ಹೆಸರಿಲ್ಲದ ಹಾಗೆ, ನಿನ್ನನ್ನು ತುಳಿದುಬಿಡುತ್ತಾರೆ ; ತಲೆಯೆತ್ತಲು, ಸ್ವಾವಲಂಬಿಯಾಗಲು, ಮುದಿಯಾದರೂ