೩೨೭
ಇವರುಗಳಲ್ಲಿ ಯಾರಮೇಲಾದರೂ ಯುವಕನು ತಿರುಗಿ ಬೀಳುತ್ತಾನೆ.
ವನ್ಯ ಮೃಗಗಳಲ್ಲಿ ಯುವಕ ಮೃಗವು ಬಂಡೇಳುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಹಿಂಡಿನ ನಾಯಕನಾದ ಸಲಗನು ಮುಪ್ಪಾದರೆ, ಅದನ್ನು ಹಿಂಡಿನಲ್ಲಿರುವ ಹೋರಿ ಆನೆಯು ಬಡಿದುಹಾಕಿ, ತಾನೇ ಯಜಮಾನನಾಗುತ್ತದೆ. ಮುಪ್ಪಿಗರನ್ನು ಮೂಲೆಗೆ ಹಾಕಿ, ಬಂಡೆದ್ದು ಹೋರಾಡಿ ಯಾಜಮಾನ್ಯವನ್ನು ವಹಿಸಿಕೊಳ್ಳುವುದು ಯೌವನದ ಸ್ವಾಭಾವಿಕ ಪ್ರವೃತ್ತಿ.
ಪ್ರಕೃತಿ ಸಹಜವಾದ ಈ ನಡವಳಿಕೆಯು ಮನುಷ್ಯರಲ್ಲಿ ವನ್ಯಮೃಗಗಳಲ್ಲಿದ್ದಂತೆ ಕಾಣಬರುವುದಿಲ್ಲ. ಏಕೆಂದರೆ ಮನುಷ್ಯನ ಬೆಳವಣಿಗೆಯಲ್ಲಿ ದೇಹಕ್ಕಿಂತ ಮಿಗಿಲಾಗಿ ಮನಸ್ಸು ಅಭಿವೃದ್ಧಿಯಾಗಿರುತ್ತದೆ. ಮನಸ್ಸಿನಲ್ಲಿ ಸತ್-ಚೈತನ್ಯಾಂಶವು, ಬಾಲ್ಯದಿಂದಲೂ ಸಾಕಷ್ಟು ದೃಢವಾಗಿ ರೂಢಿಸಲ್ಪಟ್ಟಿರುತ್ತದೆ. Super-Ego ಪ್ರಬಲವಾದ ಶಕ್ತಿಯಾಗಿರುತ್ತದೆ.
ಬಾಲ್ಯದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸುವಾಗ, ಶ್ರೀಓನಾಮವನ್ನು ಕಲಿಸುವಾಗ ಏನೇನನ್ನೆಲ್ಲಾ ಕಲಿಸಿ ನನ್ನ ಬಾಳನ್ನು ಹಸನುಗೊಳಿಸುತ್ತಾರೆ. ಎಷ್ಟು ಆದರದಿಂದ ನನ್ನ ಭವಿಷ್ಯವನ್ನು ಸುಗಮ ಮಾಡಲು ಹಾತೊರೆಯುತ್ತಾರೆ ಎಂದು ಬಾಲಕನು ಅಂದುಕೊಳ್ಳುತ್ತಾನೆ. 'ಮಾತೃದೇವೋಭವ ; ಪಿತೃ ದೇವೋಭವ ; ಆಚಾರ್ಯ ದೇವೋಭವ' ಎಂಬ ಪಾಠಗಳನ್ನು ಕಲಿಸಿದಾಗ, ಶತಾಂಶ ಸತ್ಯ ಅವುಗಳು ಎಂದು ತಿಳಿಯುತ್ತಾನೆ. ನಿಸ್ಸಂದೇಹವಾಗಿ ನಂಬುತ್ತಾನೆ.
ಬಾಲಕನ ಮನಸ್ಸನ್ನು Brain-wash ಮಾಡಲು ಬಾಲ್ಯದ ಪಾಶಗಳು ನಾಂದಿಯಾಗುತ್ತವೆ. ಮಕ್ಕಳ ಶಾಲೆಗಳಲ್ಲಿ, ಮೆಚ್ಚಿ ನುಡಿದ ಮಾಸ್ತರ ಹೊಗಳಿಕೆಗಳು ಮಕ್ಕಳ ಅಹಂಕಾರವನ್ನು ಅಭಿವೃದ್ಧಿಸುವುದಲ್ಲದೇ, ಮಾಸ್ತರು ನನ್ನ ಹಿತ ಚಿಂತಕರು, ಅವರ ಆಶೀರ್ವಾದದಿಂದ ನನ್ನ ಬಾಳು ಹಿತಮಯವಾಗಬೇಕು ಎಂಬ ದೃಢ ನಂಬಿಕೆಯನ್ನೂ ಮೂಡಿಸುತ್ತದೆ. ಹಿರಿಯರ ಆಶೀರ್ವಾದವೇ ನನ್ನ ರಕ್ಷಾ ಕವಚ ಎಂದುಕೊಂಡ ಬಾಲಕನು. ಆನಂತರ ಎಷ್ಟೇ ವರ್ಷಗಳಾಗಲೀ, ಸಾಯುವ ತನಕ ಇದನ್ನು ನಂಬುತ್ತಾನೆ. ಬಾಳ ಅನುಭವದಲ್ಲಿ ವ್ಯಕ್ತಿರಿಕ್ತವಾದ ಸಾಕ್ಷ್ಯಗಳು ಎಷ್ಟೇ ದೊರಕಿದರೂ ಬಾಲ್ಯದ ನಂಬಿಕೆಗಳನ್ನು, ಹಿರಿಯರ ಆಶೀರ್ವಾದದ ರಕ್ಷಾ ಗುಣವನ್ನು, ಅವ ಬಿಟ್ಟುಕೊಡುವುದಿಲ್ಲ. ಭದ್ರವಾಗಿ ಕಟ್ಟಿಕೊಂಡೇ ಇರುತ್ತಾನೆ, 'ತನ್ನ' ತನದೊಂದಿಗೆ.
ಬಾಲಕನು ಯುವಕನಾದಾಗ, ಮೃಗಗಳೆಲ್ಲದರಲ್ಲಿಯೂ ಇರುವಂತೆ, ಮುದಿ ಹಿರಿಯರ ವಿರುದ್ಧ ಬಂಡೇಳುವ ಪ್ರವೃತ್ತಿಯು ಹೆಡೆಯೆತ್ತುತ್ತದೆ. ಆದರೆ ಬಾಲ್ಯದಿಂದ