ಮನಮಂಥನ
Brain-wash ಮಾಡಿಸಿಕೊಂಡು, ಆ ಮೂಲಕ Super-Ego ಅಥವಾ ಸತ್ ಚೈತನ್ಯಾಂಶವನ್ನು ಬೆಳೆಸಿಕೊಂಡ ಯುವಕನು, ಹೋರಿ ಆನೆಯಂತೆ ಮುದಿ ಸಲಗನನ್ನು ಹೊಡೆದು ಬಡೆದು ಕೋರೆ ಕೊಂಬುಗಳಿಂದ ತಿವಿದು ಓಡಿಸುವುದಿಲ್ಲ. ಆದರೆ ಮುದಿ ಸಲಗನಿಗೆ Sentimental ಆಗಿ ಆದರದಿಂದ, ದೈಹಿಕ ರಕ್ಷಣೆಯನ್ನು ನೀಡುತ್ತಾನೆ. ಮಾನಸಿಕವಾಗಿ, ಮುಪ್ಪಿನ ಹಿರಿಯರು ಅರಳುಮರುಳಿನಿಂದ ನೀಡಿದ ಸಲಹೆಗಳನ್ನು ಮತ್ತು ಉಪದೇಶಗಳನ್ನು ತೃಣೀಕರಿಸಿ, ಅವರುಗಳಿಗೆ ಮನೋಘಾತವನ್ನು, ಮಾನಸಿಕ ಗಾಯಗಳನ್ನೂ ಲಕ್ಷಣವಾಗಿ ಮಾಡುತ್ತಾನೆ ಮಾನಸಿಕ ಈ ಹೋರಾಟದಲ್ಲಿ ಹಿರಿಯ ಮುದುಕರು ಸೋತು ಮಾನಸಿಕವಾಗಿ ಮದುಡಿಕೊಳ್ಳುತ್ತಾರೆ. ಹರಿಯುತ್ತಿರುವ ಸಾವಿರಕಾಲನ್ನು ಹಂಚಿಕಡ್ಡಿಯಿಂದ ಚುಚ್ಚಿದರೆ, ಅದು ಸುರುಳು ಸುತ್ತಿಕೊಂಡು ಮುಂದೆ ಹೋಗದೆ ಹಿಂದಕ್ಕೂ ಸಾಗದೆ ಮುದುಡಿಕೊಳ್ಳುವುದಿಲ್ಲವೇ, ಹಾಗೆ ಹಿರಿಯ ಮುದುಕರ ಮನಸ್ಸು ಸುರುಳಿ ಸುತ್ತಿ ಮುದುಡಿಕೊಳ್ಳುತ್ತದೆ.
ಹೀಗೆ ಮಾಡುವಾಗ, ಯುವಕನಿಗೆ, ಮೊದಮೊದಲು ಸಾಕಷ್ಟು ಶಕ್ತಿಯಿರುವುದಿಲ್ಲ. ಆದರೆ ಅದೇ ಮನೋಧರ್ಮವಿರುವ, ಸಮ ವಯಸ್ಕರು, ಸುಮಾರು ಸಂಖ್ಯೆಯಲ್ಲಿ ಜತೆಗೂಡಿದಾಗ, 'ಸಂಘಶಕ್ತಿಃ ಕಲೌಯುಗೇ' ಆಗುತ್ತದೆ. ಸಂಘದ ಶಕ್ತಿಯು ; Co-operative ಪ್ರವೃತ್ತಿಯು ಪರಬಲವಾಗುತ್ತದೆ. ಆಗ ಜಂಗಮ ಜೀವಿಗಳ ಸ್ವಾಭಾವಿಕವಾದ ಮುನ್ನಡೆಗೆ ಅಗತ್ಯವಾದ, ಹಿರಿಯರ ವಿರುದ್ಧ ಬಂಡೇಳುವ ಸಾಹಸ ಪ್ರಯತ್ನವು ಯಶಸ್ವಿಯಾಗಲು ಸುಲಭ ಸಾವಿರಾರು ಯುವಕರು ಜತೆಗೂಡಿ ಸಂಪ್ರದಾಯದ ಕಾನೂನು ಕಟ್ಟಲೆಗಳನ್ನು ಮುರಿಯುವಾಗ, ಗುಂಪಿನಲ್ಲಿ ಗೋವಿಂದ ಎಂತಾಗುತ್ತದೆ. ವ್ಯಕ್ತಿಯ Super Ego ಅಥವಾ ಸತ್- ಚೈತನ್ಯಾಂಶದ ಅಣತಿಯು, ಗುಂಪಿನಲ್ಲಿರುವಾಗ, ತುಂಬಾ ಕಡಿಮೆಯಾಗಿರುತ್ತದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಗುಂಪಿನಲ್ಲಿದ್ದರೆ ಸುಲಭ. ಮನಸ್ಸ ಆಗ ಉದ್ವೇಗದ ಸ್ಥಿತಿಯಲ್ಲಿರುತ್ತದೆ. ಆಗುಹೋಗುಗಳನ್ನು ಸಾವಧಾನವಾಗಿ ಯೋಚಿಸಲು ವ್ಯವಧಾನವಿರುವುದಿಲ್ಲ. ಸಮಾಜಛಿದ್ರಕ ಕಾರ್ಯಗಳನ್ನು ಮಾಡುತ್ತಿದ್ದೇನೆ ಎನ್ನುವ ಯೋಚನೆಯೂ ಅವನ ಮನಸ್ಸಿನಲ್ಲಿ ಆಗ ಸುಳಿಯುವುದಿಲ್ಲ.
ಸಂಪ್ರದಾಯಸ್ಥರ ವಿರುದ್ಧ ಈ ರೀತಿ ಬಂಡೇಳುವಾಗ, ಕೆಚ್ಚಿನಿಂದ ಹೋರಾಡುವಾಗ, ತಪ್ಪು ಮಾಡುತ್ತಿದ್ದೇವೆ ಎನ್ನುವ ಸಂಶಯವು ಉಂಟಾಗುವುದಿಲ್ಲ. ಆ ನಂತರ ಪಶ್ಚಾತ್ತಾಪವೂ ಇರುವುದಿಲ್ಲ. ಹಳೆಯ ನೀರನ್ನು ತೆಗೆದುಹಾಕಿದ ಮೇಲೆ ತಾನೇ ಹೊಸ ನೀರು ತುಂಬಿಕೊಳ್ಳಲು ಅವಕಾಶವಿರುವುದು. ಹೆಚ್ಚು