ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬಾಲ್ಯ, ಆಗಿನ ಮನಸ್ಸು

೩೨೯

ಉತ್ಕೃಷ್ಟವಾದ, ನವ ಸಮಾಜವನ್ನು ಸೃಷ್ಟಿಸುತ್ತೇವೆ, ಸ್ವಾರ್ಥಿ ಸಂಪ್ರದಾಯಸ್ಥರನ್ನು ಮೂಲೆಗೆ ನೂಕಲೇ ಬೇಕು ಎನ್ನುವ ಹುಮ್ಮನಸ್ಸು ಪ್ರಬಲವಾಗಿರುತ್ತದೆ.

ಪ್ರಪಂಚದ ಎಲ್ಲಾ ಕಡೆಗಳಲ್ಲೂ ಕಾಣಬರುವ ಯುವಕ ಅಂದೋಳನಗಳು, ಪ್ರಕೃತಿ ಸಹಜವಾದ ಬಂಡೇಳುವ ಪ್ರವೃತ್ತಿ. The angry young men : The young turks : ಪ್ರಗತಿಶೀಲರು-ಕ್ರಾಂತಿಕಾರಿಗಳು-ಇವೆಲ್ಲವೂ ಸಂಪ್ರದಾಯಸ್ಥ ಸಮಾಜದ ವಿರುದ್ಧ ಬಂಡೇಳುವವರ ಗುಂಪುಗಳು, Father Image ಇನ ವಿರುದ್ಧ ಹೋರಾಡುವ ಈ ಹಲವಾರು ಹೆಸರಿನ ಗುಂಪಿನವರು Step-Father ವಿರುದ್ಧ ಹೋರಾಡುತ್ತಿದ್ದೇವೆ ಎಂದುಕೊಂಡಿರಲೂಬಹುದು.

ಸಂಪ್ರದಾಯಸ್ಥರ ವಿರುದ್ಧ ಬಂಡೇಳುವ ಪ್ರಕೃತಿ ಸಹಜವಾದ ಯುವಕ ಪ್ರವೃತ್ತಿಯು ಗುಂಪು ಕಟ್ಟಿಕೊಂಡಾಗ ಮಾತ್ರ ಸಾಧ್ಯ. ಕಾಡಿನಲ್ಲಿ ಹುಲಿಯು ಎರಡೋ ಮೂರೋ ಸೀಳುನಾಯಿಗಳು ಎದುರು ಸಿಕ್ಕಾಗ ಸುಲಭವಾಗಿ ಅವನ್ನು ಸದೆ ಬಡಿದು ಕೊಲ್ಲುತ್ತದೆ. ಆದರೆ ಸೀಳುನಾಯಿಗಳ ಹಿಂಡಿಗೆ ಹುಲಿಯು ಸಿಕ್ಕಿಬಿದ್ದರೆ ಹುಲಿಯನ್ನು ಛಿದ್ರಛಿದ್ರ ಮಾಡುತ್ತದೆ, ಕಲಿಯುಗದಲ್ಲಿ ಶಕ್ತಿಯು ಸಂಘಗಳಲ್ಲಿ ಮಾತ್ರ ಪ್ರಬಲವಾಗಿರಲು ಸಾಧ್ಯ ತಾತ್ಕಾಲಿಕವಾಗಿ,

ಸಂಘಗಳನ್ನು ಕಟ್ಟಲಾಗದಿದ್ದಾಗ, ಯುವಕನು ಯಾವ ರೀತಿಯಲ್ಲಿ ಬಂಡೇಳಲು ಸಾಧ್ಯ? ಒಂಟಿಯಾಗಿ ಏನು ಮಾಡುತ್ತಾನೆ?

ಬಾಲಕನಾಗಿದ್ದಾಗ, ಮನೆಯಲ್ಲಿ ಮತ್ತು ಶಾಲೆಯಲ್ಲಿ Super-Egoವು- ಅಂದರೆ ಮನಸ್ಸಿನಲ್ಲಿ ರೂಢಿಸಿ ಬೆಳೆಸಲ್ಪಟ್ಟ ಸತ್-ಚೈತನ್ಯಾಂಶವು ದೃಢವಾಗಿದ್ದರೆ, ಆಗ ಯುವಕನು ಧೈಯವಾದಿಯಾಗುತ್ತಾನೆ. ತನ್ನ Id ಇನ ಕಾವ್ಯ ಪ್ರೇರಣೆಗಳನ್ನು ಬದಿಗಿರಿಸಿ, ತನ್ನ ಸುಖವನ್ನು ಮತ್ತು ಲೌಕಿಕ ಭವಿಷ್ಯವನ್ನೂ ಅಲ್ಲಗಳೆಯುತ್ತಾನೆ. ಸಮಾಜದ ದೀನದಲಿತರ ನೆರವಿಗೆ ಹಿಂದು ಮುಂದು ನೋಡದೆ ನುಗ್ಗುತ್ತಾನೆ. ಧೈಯ ಸಾಧನೆಯು, ಮತ್ತು ಆ ದಿಸೆಯಲ್ಲಿ ನಡೆಸುವ ಸ್ವಪ್ರಯತ್ನಗಳು, ಅವನ Ego ವಿಗೆ ತಂಪೆರೆಯುತ್ತವೆ, ಸಂತಸವನ್ನು ನೀಡುತ್ತವೆ.

Super-Ego ವು ಸಾಕಷ್ಟು ದೃಢವಾಗಿ ಬೆಳೆಯದೆ ಇದ್ದರೆ, ಆಗ ಯುವಕನ Ego ವು Id ಇನ ಪ್ರಭಾವಕ್ಕೆ ತಲೆಬಾಗುತ್ತದೆ. ಕಾವ್ಯವಸ್ತುಗಳನ್ನು ಪಡೆಯಲು ಯತ್ನಿಸುತ್ತಾನೆ. ಯೌವನದಲ್ಲಿ ಲೋಕಾನುಭವವು ಸಾಲದುದರಿಂದ, ನಡೆಸಿದ ಪ್ರಯತ್ನಗಳು ಕಾವ್ಯಗಳನ್ನು ದೊರಕಿಸಿ ಕೊಡದೆ ಇರಬಹುದು. ಆಗ ಯುವಕನ Ego ವಿಗೆ ಕಸವಿಸಿಯು ಹೆಚ್ಚಾಗುತ್ತದೆ. ಇದನ್ನು ಸಮಾಧಾನ ಪಡಿಸಲು ಅವನು ಕಳ್ಳತನದಿಂದ ಕಾಮ್ಯಗಳನ್ನು ಪಡೆಯಲು ಯತ್ನಿಸುತ್ತಾನೆ. ಅಪರಾಧಗಳನ್ನು