ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೩೦

ಮನಮಂಥನ

ಮಾಡತೊಡಗುತ್ತಾನೆ. ಹಲವಾರು ಯುವಕರಲ್ಲಿ ಅಪರಾಧಗಳನ್ನು ಗುಪ್ತವಾಗಿ ಮಾಡುವುದು ಅಭ್ಯಾಸವಾಗಿ ಬಿಡುತ್ತದೆ. Habitual offenders ಇವರುಗಳು, ಸಮಾಜದ ಕಟ್ಟಲೆ ಕಾನೂನುಗಳನ್ನು ಕಳ್ಳತನದಲ್ಲಿ ವಿರೋಧಿಸುವುದೂ, ಬಂಡೇಳುವ ಪ್ರವೃತ್ತಿಯ ಒಂದು ಮುಖ.

Super-Ego ಸಾಕಷ್ಟು ದೃಢವಾಗಿ ಬೆಳೆದಿದೆ, ಅನ್ನಿ, ಧೈಯವಾದಿಯಾಗು ಎಂದು ಸತ್-ಚೈತನ್ಯಾಂಶವು ಪ್ರೇರಿಸುತ್ತದೆ. ಆದರೆ ಸಮಸಮವಾಗಿ Id ಇನ ತಮಃ-ಪ್ರಭಾವವು ಕೂಡ Ego ವನ್ನು ಮೈಚಾಚಿ ಕರೆಯುತ್ತಿದೆ, ಅನ್ನಿ. ಯುವಕನ ಮನಸ್ಸು ಇತ್ತ ಅತ್ತ ಜಗ್ಗಾಡಲ್ಪಡುತ್ತದೆ. ಲೋಕದ ವಾಸ್ತವಿಕತೆಯ ಅರಿವು ಯುವಕರಲ್ಲಿ ಅಗತ್ಯವಾದಷ್ಟು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸು ಜಗ್ಗಾಟವನ್ನು ತಡೆಯಲಾರದೆ, ತನ್ನದೇ ಆದ ಅವಾಸ್ತವಿಕ ಪ್ರಪಂಚವೊಂದನ್ನು ಸೃಷ್ಟಿಸಿಕೊಂಡು, ಆ ಲೋಕದಲ್ಲಿ ನೆಮ್ಮದಿಯಿಂದಿರುತ್ತದೆ. ಹೀಗಾದಾಗ ಹುಚ್ಚು ಹಿಡಿಯುತ್ತಿದೆ, Insight intoReality ಶೂನ್ಯವಾಗಿದೆ, ಎಂದನ್ನುತ್ತಾರೆ. ಇಂತಹ ನತದೃಷ್ಟ ಯುವಕರ ಮನಸ್ಸು ಛಿದ್ರವಾಗಿರುತ್ತದೆ. ಒಂದು ಭಾಗವು ಅವಾಸ್ತವಿಕ ಪ್ರಪಂಚದಲ್ಲಿ ವಿಹರಿಸುತ್ತದೆ. ಇನ್ನೊಂದು ಭಾಗವು ವಾಸ್ತವಿಕವಾದ ಪ್ರಪಂಚದಲ್ಲಿ ಬಾಲಂಗೋಚಿ ಇಲ್ಲದ ಗಾಳಿಪಟದಂತೆ ಸ್ಟೇಚ್ಛೆಯಾಗಿ ಲಾಗ ಹಾಕುತ್ತಿರುತ್ತದೆ. Schizo-Phrenia, ಎಂದನ್ನುತ್ತಾರೆ, ಹೀಗಾದಾಗ, Schizoಎಂದರೆ ಛಿದ್ರವಾದುದು Phrenia ಎಂದರೆ ಮನಸ್ಸು.

ಹೈಸ್ಕೂಲುಗಳಲ್ಲಿ ಅತ್ಯಂತ ಯಶಸ್ವಿಯಾಗಿ ಪ್ಯಾಸು ಮಾಡಿರುತ್ತಾರೆ. ಹೇಳಿ ಕೊಟ್ಟ ಪಾಠಗಳನ್ನು ಲಕ್ಷಣವಾಗಿ ಅರ್ಥಮಾಡಿಕೊಂಡು, ಪರೀಕ್ಷೆಯಲ್ಲಿ ಒಪ್ಪಿಸಿದರೆ, ಹೈಸ್ಕೂಲಿನಲ್ಲಿ ಯಶಸ್ವಿಯಾಗಿ ಪಾಸಾಗಬಹುದು. ಸ್ವಂತವಾಗಿ ಯೋಚಿಸಲು ಹೆಚ್ಚು ಅಗತ್ಯವಿರುವುದಿಲ್ಲ. ಬಾಲಕನು ಯುವಕನಾಗಿ ಕಾಲೇಜಿಗೆ ಬಂದರೆ, ಅಲ್ಲಿನ ವಿದ್ಯಾಭ್ಯಾಸದ ರೀತಿಯೇ ಬೇರೆ. ಕಾಲೇಜುಗಳಲ್ಲೂ ಪಾಠವನ್ನು ಕಲಿಸುತ್ತಾರೆ. ಆದರೆ ಅದಕ್ಕಿಂತಲೂ ಮುಖ್ಯವಾದುದು, ವಿದ್ಯಾರ್ಥಿಯು ಸ್ವಂತವಾಗಿ ಆಲೋಚಿಸುವುದನ್ನು ಪ್ರೇರೇಪಿಸುವುದು, 'ಧೀಯೋ ಯೋನಃ ಪ್ರಚೋದಯಾತ್", ಧೀಃ ಶಕ್ತಿಯನ್ನು ವಿಚಾರಪರ ಮನಸ್ಸನ್ನು, ಪ್ರಚೋದಿಸುವುದು, ಕಾಲೇಜಿನ ಹಂತದ ಶಿಕ್ಷಣದ ತಿರುಳು.

ಸ್ವಂತವಾಗಿ ಆಲೋಚಿಸುವಾಗ, ತನ್ನಲ್ಲಿರುವ ಕುಂದುಗಳು ಮತ್ತು ಲೋಪಗಳು ಕಾಣಬರುತ್ತವೆ. ಎಸ್. ಎಸ್. ಎಲ್. ಸಿ. ಯಲ್ಲಿ ಬ್ಯಾಂಕ್ ಪಡೆದೆ, ಇಲ್ಲಿ ಸೆಕೆಂಡ್ ಕ್ಲಾಸ್‌ ಕೂಡ ಬರಲಿಲ್ಲ. ಎಂದೆನ್ನುವ ಕೊರಗು ಕಾಣತೊಡಗುತ್ತದೆ.