ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬಾಲ್ಯ, ಆಗಿನ ಮನಸ್ಸು

೩೩೧

ಇದು ವಿಪರೀತವಾದಾಗ ಮನಸ್ಸು ಛಿದ್ರವಾಗುತ್ತದೆ.

ಕಾಲೇಜಿನ ಹಂತದಲ್ಲಿ ಹೀಗಾಗಬಹುದು. ಅದಕ್ಕಿಂತಲೂ ಹೆಚ್ಚಾಗಿ, ಪ್ರೌಢ ವಿದ್ಯಾಭ್ಯಾಸಕ್ಕೆ, ಎಂ.ಎಸ್‌ಸಿ ; ಪಿಎಚ್.ಡಿ. ಗಳಿಗೆ ಸೇರಿದಾಗ ಆಗಬಹುದು.

ಎಷ್ಟು ಜಾಣ ಹುಡುಗ, ಎಂತಹ ಬುದ್ಧಿವಂತ, ಅವನಿಗೆ ಹುಚ್ಚು ಹಿಡಿಯುವುದು ಹೇಗೆ ಸಾಧ್ಯ? ಎಂದು ಕಂಡವರು ಅಚ್ಚರಿ ಪಡುತ್ತಾರೆ. ಆಲೋಚನೆಯನ್ನು ಸ್ವಂತವಾಗಿ ಮಾಡುವುದಕ್ಕೆ ವಿಚಾರಪರ ಮನಸ್ಸು ಇನ್ನೂ ಪಕ್ವವಾಗಿರುವುದಿಲ್ಲ. ಅಪಕ್ವವಾದ ಮನಸ್ಸು ಸುಲಭವಾಗಿ ಪಲ್ಲಟವಾಗುತ್ತದೆ. ಆದುದರಿಂದ ಶಿಕ್ಷಣತಜ್ಞರು, ಇಂತಹ ವಯಸ್ಸು ಮುಗಿದ ಮೇಲೆ ಮಾತ್ರ ಇಂತಹ ಪರೀಕ್ಷೆಗೆ ಕೂಡಬಹುದು ಎಂದು ನಿರ್ಧರಿಸುವುದು. ಯಾವನೋ ಒಬ್ಬ ಪ್ರಚಂಡ, ಹದಿನೈದನೇ ವಯಸ್ಸಿನಲ್ಲಿ ಆರು ಚಿನ್ನದ ಪದಕಗಳನ್ನು ಪಡೆದು, ಬಿ. ಎಸ್‌ಸಿ. ಅನರ್ಸ್ ಪ್ಯಾಸು ಮಾಡಿದ, ಆದುದರಿಂದ ವಯಸ್ಸಿನ ಇತಿಮಿತಿಯನ್ನು ಹಾಕಿ, ಜಾಣ ಹುಡುಗರನ್ನು ಮುಂದಿನ ಪರೀಕ್ಷೆಗೆ ಕೂಡಲು ಅವಕಾಶವನ್ನು ತಪ್ಪಿಸಬಾರದು ಎಂದು ಜನರು ಅನ್ನುವುದುಂಟು. ಒಬ್ಬ ಪ್ರಚಂಡನು ಮಾಡಿದುದನ್ನು ನೋಡಿದವರು, ಮಾನಸಿಕ ಆಸ್ಪತ್ರೆಗಳಿಗೆ ಹೋಗಿ ಜಾಣ ಯುವಕರ, ಯಶಸ್ವಿಯಾಗಿ ಎಳೆ ವಯಸ್ಸಿನ ಇತಿಮಿತಿಯನ್ನು ಹಾಕಿ, ಜಾಣ ಹುಡುಗರನ್ನು ಮುಂದಿನ ಪರೀಕ್ಷೆಗೆ ಕೂಡಲು ಅವಕಾಶವನ್ನು ತಪ್ಪಿಸಬಾರದು ಎಂದು ಜನರು ಅನ್ನುವುದುಂಟು. ಒಬ್ಬ ಪ್ರಚಂಡನು ಮಾಡಿದುದನ್ನು ನೋಡಿದವರು, ಮಾನಸಿಕ ಆಸ್ಪತ್ರೆಗಳಿಗೆ ಹೋಗಿ ಜಾಣ ಯುವಕರ, ಯಶಸ್ವಿಯಾಗಿ ಎಳೆ ವಯಸ್ಸಿನಲ್ಲಿ ಪ್ಯಾಸು ಮಾಡಿ, ತದನಂತರ ಅಪಕ್ವಮನಸ್ಸಿನಿಂದಾಗಿ, ಆಸ್ಪತ್ರೆಗೆ ಸೇರಿರುವುದನ್ನು ಕಣ್ಣಾರ ಕಾಣಬೇಕು !

ಕಾಲೇಜಿಗೆ ಹೋಗಿ ಓದುವ ಜವ್ವನದ ತರುಣಿಯರಲ್ಲಿ ಇದೇ ಪರಿಸ್ಥಿತಿಯು ಇರುತ್ತದೆ. ಕಾಲೇಜಿನ ಡಿಗ್ರಿ ಪಡೆದು ಮದುವೆಯಾಗಿ ಗಂಡನ ಮನೆಗೆ ಹೋದಾಗ, ಅಪಕ್ವ ಮನಸ್ಸಿದ್ದವರು ; Inature Minds – ಮಾನಸಿಕ ಅಲ್ಪಸ್ವಲ್ಪ ಪಲ್ಲಟಕ್ಕೆ ತುತ್ತಾಗುತ್ತಾರೆ. ಅತ್ತೆಯ ಕಾಟ ಎಂದು ಹಿಂದೆ ಹೇಳುತ್ತಿದ್ದುದು. ಅಪಕ್ವ ಮನಸ್ಸಿನ ಸೊಸೆಯು ಮನೆಗೆ ಬಂದುದರಿಂದ ಅಪಕ್ವವಾದ ಮನಸ್ಸಿದ್ದರೆ, ಸ್ವಾಭಿಮಾನವೂ, ನಾನು ಓದಿದವಳು ಎನ್ನುವ ಹೆಮ್ಮೆಯೂ ಬಲವಾಗಿರುತ್ತದೆ. ಆದುದರಿಂದ ಇತರರು ಹೇಳಿದಂತೆ ಕೇಳುವುದಿಲ್ಲ. ಆದರೆ ತಾವೇ ಯೋಚಿಸಿ ವಿಹಿತವಾಗಿ ಕೆಲಸವನ್ನು ಮಾಡಲೂ ಆಗುವುದಿಲ್ಲ. ಆಗ ಮಾನಸಿಕ ಪಲ್ಲಟವು ಅಲ್ಪ ಹಂತದಲ್ಲಿ ಅಥವಾ ಹೆಚ್ಚು ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆಯನ್ನು ಮೊದಲ