ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೩೪

ಮನಮಂಥನ

ಮಾರ್ಕೆಟ್ ಬಳಿಗೆ ಬಂದಿದ್ದೆವು. 'ಇಲ್ಲಿ ಇಳಿಸಿ ಬಿಡಪ್ಪಾ, ನೆಟ್ಟಗೆ ನೀನು ಆಸ್ಪತ್ರೆಗೆ ಹೋಗಬಹುದು, ಬಡ ಸ್ನೇಹಿತನನ್ನು ಮರೆಯದೆ ಇದ್ದುದ್ದಕ್ಕಾಗಿ ವಂದನೆಗಳು ಕಣೋ' ಎಂದ.

ವಯಸ್ಕರಿಗೆ ರಾಮನಾಥಯ್ಯನಿಗೆ ಆದಂತೆ, ಲೋಕದ ಕಠಿಣ ಪಾಠಗಳು ವಾಸ್ತವಿಕ ಅರಿವನ್ನು ಮರೆಯದಂತೆ ಮಾಡಿಕೊಡುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ಹೊಣೆಗಾರಿಕೆಯು ಹೆಚ್ಚಾಗುತ್ತದೆ. ಇವನ್ನು ಪೂರೈಸಲು ಸುಳ್ಳನ್ನು ಹೇಳಬೇಕಾಗುತ್ತದೆ. ನಾನು, ನನ್ನ ಸಂಸಾರ, ಇವೆಲ್ಲಾ ನನ್ನ ಜವಾಬ್ದಾರಿ ; ಎಂದು ವಯಸ್ಕನ Ego ಭದ್ರವಾದ ಕೋಟೆಯನ್ನು ಕಟ್ಟಿರುತ್ತದೆ. ತನಗೆ ಕಾಮ್ಯವಾದ ವಸ್ತುಗಳು, ತನ್ನ ಜವಾಬ್ದಾರಿಗೆ ಒಳಪಟ್ಟ ಎಲ್ಲರಿಗೂ ದೊರಕಿಸಿಕೊಡಬೇಕು ಎಂದು ಅಂದುಕೊಳ್ಳುತ್ತಾನೆ. ಇವೆಲ್ಲವೂ ತಮೋಗುಣ ಪ್ರಧಾನವಾದ Id ಇನ ಪ್ರಭಾವೀ ಸೆಳೆತಗಳು. ಇವುಗಳನ್ನು ಈಡೇರಿಸುವುದು ತನ್ನ ಕರ್ತವ್ಯ ಎಂದು ಕೊಳ್ಳುವಾಗ, ಅವನ Super-Ego, ಅಥವಾ ಮನಸ್ಸಿನ ಸತ್-ಚೈತನ್ಯಾಂಶವು, ಪ್ರೇರಕವಾಗಿರುತ್ತದೆ. ತಾನು ಎನ್ನುವುದು ಈಗ ತನ್ನ ಸಂಸಾರ, ಬಳಗ, ಎಂದು ವಿಶಾಲಗೊಳ್ಳತೊಡಗುತ್ತದೆ. ಮುಂದೆ ವಿಶ್ವ-ಕುಟುಂಬ ಎನ್ನುವ ಧೈಯದತ್ತ ಇದು ಮೊದಲ ಹೆಜ್ಜೆ ಎಂದರೆ ತಪ್ಪಲ್ಲ.

ಬಾಲ್ಯದಲ್ಲಿ ಕಲಿತ ಆದರ್ಶಗಳನ್ನು, ಮತ್ತು ಯುವಕನಾಗಿದ್ದಾಗ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳನ್ನು, ವಯಸ್ಕರ ವಾಸ್ತವಿಕ ಅರಿವು ತುಂಡುಮಾಡುತ್ತದೆ. ಬಾಲ್ಯ ಮತ್ತು ಯೌವನದ ಧೈಯಗಳು ಕೇವಲ ಗಗನ ಕುಸುಮಗಳು. ಮರ್ತ್ಯ ಲೋಕದಲ್ಲಿ ಮಜವಾಗಿ ಬಾಳಬೇಕಾದರೆ, ಮೋಸವೇ ಗಾಂಡೀವ ; ಸುಳ್ಳೇ ಪಾಶುಪತಾಸ್ತ್ರ; ನಂಬಿಸಿ ನುಣ್ಣಗೆ ಮಾಡುವುದು ಭಾರ್ಗವಾಸ್ತ ಎಂದು ತಿಳಿಯುತ್ತಾನೆ. ಪತ್ತೆಯಾಗದಂತೆ ಇವೆಲ್ಲವನ್ನೂ ಮಾಡುವುದು, ವಯಸ್ಕರ ವಿಚಾರಪರ ಮನಸ್ಸಿನ ಕುಶಲತೆ. ಲೋಕಾನುಭವವು, ಅಂದರೆ ಅನುಭವಗಳಿಂದ ಪಾಠವನ್ನು ಕಲಿತಾಗ ವಿಚಾರಪರ ಮನಸ್ಸಿನ ಕುಶಲತೆಯನ್ನು ಅಭಿವೃದ್ಧಿಸುತ್ತದೆ.

ಲೌಕಿಕ ಜೀವನದ ವಾಸ್ತವಿಕತೆಯನ್ನು ವಯಸ್ಕನು ಪೂರ್ಣವಾಗಿ ಅರಿತ ಮೇಲೆ, ಭಾವನಾಪರವಾಗಿ, ವಿಚಾರವನ್ನು ಸಾಕಷ್ಟು ಮಾಡದೆ, ಯಾವುದಕ್ಕೂ ಮುನ್ನುಗ್ಗುವುದಿಲ್ಲ. ಯೌವನದಲ್ಲಿ ದೇಹವು Elasticity ಯನ್ನು ಪಡೆದಿರುತ್ತದೆ. ಆದಕಾರಣ ಸಾಹಸದ ಕೆಲಸಗಳನ್ನು ಮಾಡಲು ಶಕ್ತನಾಗಿರುತ್ತಾನೆ. ಕ್ರೀಡಾಪಟುಗಳೂ ಜಗತ್ತಿನ ಚಾಂಪಿಯನ್ನರಾಗುವುದು ಈ ವಯಸ್ಸಿನಲ್ಲಿಯೇ. ದೇಹದಂತೆ ಮನಸ್ಸ