೩೩೫
ಯುವಕರಲ್ಲಿ ಅತ್ಯುತ್ಸಾಹದಿಂದ ತುಂಬಿರುತ್ತದೆ. ಉದಾತ್ತ ಧೈಯಗಳಿಂದಲೂ ಪ್ರೇರೇಪಿಸಲ್ಪಡುತ್ತದೆ. ಆಗುಹೋಗುಗಳನ್ನು ಸಾಕಷ್ಟು ವಿಚಾರ ಮಾಡದೆ ಹರೆಯದ ಹೋರಿಯಂತೆ ಮುನ್ನುಗ್ಗುತ್ತಾರೆ. ಮಹಾಭಾರತದ ಅಭಿಮನ್ಯುವು ಉತ್ತಮ ನಿದರ್ಶನ. ಸಮರವಿದ್ಯೆಯನ್ನು ಲಕ್ಷಣವಾಗಿ ಕಲಿತಿದ್ದ. ಉತ್ಸಾಹವಿತ್ತು, ದೇಹಕ್ಕೆ ಹುಮ್ಮನ್ನೂ ಇತ್ತು. ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಯಾರೂ ಇರದಿದ್ದಾಗ, ತಾನೇ ಶತ್ರುವಿನ ಚಕ್ರವ್ಯೂಹವನ್ನು ಭೇದಿಸಿ ಒಳ ನುಗ್ಗಿದ. ಒಳಕ್ಕೆ ಹೋದವನು ಸುರಕ್ಷಿತವಾಗಿ ಹಿಂದಕ್ಕೆ ಬರಲು ಸಾಧ್ಯವೇ ? ಸಾಧ್ಯವಾದರೆ ಯಾವ ರೀತಿಯನ್ನು ಅನುಸರಿಸಬೇಕು, ಎಂದವನಿಗೆ ವಿಚಾರ ಮಾಡುವಷ್ಟು ತಾಳ್ಮೆಯಿರಲಿಲ್ಲ. ಮುನ್ನುಗ್ಗಿದ. ಸಿಕ್ಕಿಹಾಕಿಕೊಂಡ, ಅಸುವನ್ನು ಬಲಿಕೊಟ್ಟ.
ವಯಸ್ಕರಾದರೋ, ಯಾವುದನ್ನು ಮಾಡಬೇಕಾದರೂ, ತಮ್ಮ ಯೋಗ್ಯತೆಗೆ ಮತ್ತು ಕಲಿಕೆಗೆ ತಕ್ಕಂತೆ, ವಿಚಾರವನ್ನು ಮಾಡುತ್ತಾರೆ. ಮುಂದೆ ಹೀಗಾಗಬಹುದೋ ಹಾಗಾಗಬಹುದೋ ಎಂದು ಯೋಚಿಸುತ್ತಾರೆ. ಅನಂತರ ನಿರ್ಧಾರವನ್ನು ಮಾಡಿ ಕಾರ್ಯೋನ್ಮುಖರಾಗುತ್ತಾರೆ. ಭಾವನಾಪರವಶತೆಯು, ವಿಚಾರಪರತೆಯು ಹೆಚ್ಚಾದಂತೆಲ್ಲಾ ಮನಸ್ಸಿನಲ್ಲಿ ಕ್ಷೀಣವಾಗುತ್ತದೆ. Sentiment is in inverse proportion to Reasoning; in its pull on the mind ; ಎನ್ನಬಹುದು.
“ಅಪ್ಪ ಅಳೆದೂ ಸುರಿದೂ ನೋಡುತ್ತಾರೆ. ಮಗ ಅಂತಃಕರಣದಿಂದ ಜಟ್ಟಂತ ಮಾಡುತ್ತಾನೆ' ಎಂದು ಮನೆಯಾಕೆಯು ಗಂಡನನ್ನು ಶ್ಲಾಘಿಸಿದರೂ, ಯುವಕ ಮಗನನ್ನು ಮೆಚ್ಚುತ್ತಾಳೆ. ಹೆಂಗರುಳು ವಿಚಾರಪರತೆಗೆ ಸೊಪ್ಪು ಹಾಕುವುದಿಲ್ಲ. ಪ್ರಕೃತಿನಿಯಮದಲ್ಲಿ ಹೆಣ್ಣು ಭಾವನಾ ಪ್ರೇರಿತೆ ; Emotional, ಗಂಡು ವಿಚಾರ ಪ್ರೇರಿತ, Rationally Motional, ಆದುದರಿಂದ ತಾಯಿಯು ಯುವಕ ಮಗನನ್ನು ಹೆಚ್ಚು ಮೆಚ್ಚುವುದು. ಇಬ್ಬರಿಗೂ ವಯಸ್ಸಿನ ಅಂತರವಿದ್ದರೂ, Sentiment ಮತ್ತು Emotion ಇವುಗಳಲ್ಲಿ ಇಬ್ಬರಿಗೂ ಸಮಾನ ಧರ್ಮವಿರುತ್ತದೆ. ತಾದಾತ್ತ್ವವಿರುತ್ತದೆ. ಫ್ರಾಯ್ಲಿನ ಈಡಿಪಸ್ ಕಾಂಪ್ಲೆಕ್ಷನ್ನು ಗಣನೆಗೆ ತೆಗೆದುಕೊಳ್ಳದೇ ಇದ್ದರೂ, ತಾಯಿ ಮಗನ ಪರಸ್ಪರ ಮೆಚ್ಚುಗೆಯನ್ನು ಅರ್ಥಮಾಡಿಕೊಳ್ಳಬಹುದು. ಇದು ವಯಸ್ಸಿನೊಡನೆ ಅನ್ವಯಿಸಿರುತ್ತದೆ, ಎಂಬುದನ್ನು ಮರೆಯಬಾರದು. ಯುವಕ ಮಗನು ವಯಸ್ಕನಾದ ಮೇಲೆ, ಭಾವನಾ ಪ್ರೇರಣೆಯು ಕಡಿಮೆಯಾಗತೊಡಗಿದಂತೆ, ತಾಯಿಯ ತಾದಾತ್ಮದ ಅಚ್ಚುಮೆಚ್ಚು ಕಡಿಮೆಯಾಗುತ್ತದೆ. ಆ ವಯಸ್ಸಿನಲ್ಲಿ ವಯಸ್ಕ ಮಗನು ತನ್ನ ಜೀವನಕ್ಕೆ ಅಗತ್ಯವಾದುದರಿಂದ, ಅಚ್ಚುಮೆಚ್ಚು ಹೋಗಿ ಕೃತಜ್ಞತಾಪೂರ್ವಕ ಆದರವು ಬಹಳಷ್ಟು