ಮನಮಂಥನ
ಕಾಣಿಸಿಕೊಳ್ಳುತ್ತದೆ. ಮುದಿತಾಯಿಯು ವಯಸ್ಕ ಮಗನನ್ನು ಆದರಕ್ಕಿಂತ ಹೆಚ್ಚಾಗಿ ಗೌರವಿಸುತ್ತಾಳೆ. ಸಮವಯಸ್ಕರೊಂದಿಗೆ ಮಗನ ಬಗ್ಗೆ ಹೆಮ್ಮೆಯಿಂದ ಬಡಾಯಿ ಕೊಚ್ಚುತ್ತಾಳೆ. ಆದರೆ EmotionalAttachment ಅಥವಾ ಭಾವನಾ ಬಂಧನವು ಸಡಿಲಗೊಳ್ಳುತ್ತದೆ.
ವಾಸ್ತವಿಕ ಅರಿವು, ವಯಸ್ಕನಲ್ಲಿ ಸ್ಪಷ್ಟವಾದಾಗ, Reality Principal ಅನ್ನು ಅವ ತಿಳಿದುಕೊಂಡಿದ್ದಾನೆ, ಎನ್ನಬಹುದು. ಅದಕ್ಕೆ ಮುಂಚೆ ಕೇವಲ Pleasure Principle ಅನ್ನು ಅವ ಅನುಭವಿಸುತ್ತಿದ್ದ. ಬಾಲ್ಯದಲ್ಲಿ ಹಾಗೂ ಯೌವನದಲ್ಲಿ, Pleasure Principle, ಅಥವಾ ಸುಖದ ಅನ್ವೇಷಣೆಯು ಪ್ರಮುಖವಾಗಿರುತ್ತದೆ. ಸುಖವು, ತಮೋಪ್ರಧಾನವಾದ Id ಇನ ಬೇಡಿಕೆಗಳನ್ನು ಪೂರೈಸುವುದರಿಂದ ದೊರೆಯಬಹುದು. ಹಾಗೂ ಸತ್-ಚೈತನ್ಯ ಪ್ರಧಾನವಾದ Super - Ego ವಿಗೆ, ತೃಪ್ತಿಯನ್ನೀಯುವ, ಧೈಯ ಪ್ರಯತ್ನವೂ ಆಗಿರಬಹುದು. ಆದರ್ಶ ಸಾಧನೆಯ ಯೋಚನೆಯು ಮತ್ತು, ಪ್ರಯತ್ನವೂ ಆಗಿರಬಹುದು. ಇವೆರಡೂ ವಾಸ್ತವಿಕ ಲೋಕದಲ್ಲಿ ಇದ್ದೇ ಇರುತ್ತವೆ. ಆದರೆ Super Ego ಅಥವಾ ಸತ್-ಚೈತನ್ಯಾಂಶವು, ಕನಸಿನಂತೆ ಸಿನಿಮೀಯವಾಗಿರುತ್ತದೆ.
ಈ ವ್ಯತ್ಯಾಸವನ್ನು ವಯಸ್ಕನು ಹಂತ ಹಂತವಾಗಿ ತಿಳಿದುಕೊಳ್ಳುತ್ತಾನೆ. Pleasure Principle ಅಥವಾ ಸುಖದ ಪ್ರೇರಣೆಯು ಬಲು ಚೆನ್ನ ಬಹಳ ಹಿತ ಎಂದುಕೊಂಡಿದ್ದವನು, ಲೌಕಿಕ ಜೀವನದ ವಾಸ್ತವಿಕವಾದ ಕಠೋರ ಸತ್ಯವನ್ನು ಅರಿಯುತ್ತಾನೆ. ಕಷ್ಟ ನಷ್ಟ ; ನೋವು ಸಂಕಟ ; ಮಾನ ಅವಮಾನ ; ಇವೆಲ್ಲವನ್ನೂ ಅನುಭವಿಸುತ್ತಾನೆ. ಆಗ Super - Ego ಅಥವಾ ಸತ್-ಚೈತನ್ಯಾಂಶವು ಬರಿಯ ಕನಸು ಎಂದಂದುಕೊಳ್ಳುತ್ತಾನೆ. ಅದನ್ನು ಮನಸ್ಸಿನ ಮೂಲೆಗೆ ತಳ್ಳಿ ಹಾಕುತ್ತಾನೆ.
Reality Principle, ಅಥವಾ ವಾಸ್ತವಿಕವಾದ ಲೌಕಿಕ ಪ್ರೇರಣೆಯು ಬಾಳಿಗೆ ಅತ್ಯಗತ್ಯವಾದುದು. ಇದೇ ಸತ್ಯ; ಇದೇ ಹಿತ, ಎಂದು ಅಂದುಕೊಳ್ಳುತ್ತಾನೆ.
ಮಾನಸಿಕ ಕಾರ್ಯಕ್ರಮಗಳನ್ನು ವಿಶ್ಲೇಷಿಸತೊಡಗಿದ, ಚಾರ್ವಾಕರು ಈ ನಿರ್ಧಾರವನ್ನು ಮಾಡಿದರು. ಮುಂದುವರೆಯಲು ಅವರಿಗೆ ಆಗ ಯೋಗ್ಯತೆಯು ಇರಲಿಲ್ಲ. 'ಋಣಂ ಕೃತ್ವಾ ಧೃತಂ ಪಿಬೇತ್' ಎಂದರು. ಸಾಲವನ್ನು ಮಾಡಿಯಾದರೂ, ಅದನ್ನು ಮುಂದೆ ತೀರಿಸುವ ಬಗೆ ಹೇಗೆ ಎಂದು ಯೋಚನೆಯನ್ನು ಮಾಡದೆ, ಘಮಘಮಿಸುವ ತುಪ್ಪವನ್ನು ಗಿಟ್ಟಿಸಿಕೊಳ್ಳಿ ; ತಿನ್ನಿ: ಸುಖಪಡಿ ಇದೇ ಹಿತದ ಬಾಳಿನ ಮರ್ಮ ಎಂದು ತೀರ್ಮಾನಿಸಿದರು. ಭವಿಷ್ಯದ