ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೩೮

ಮನಮಂಥನ

ವಾಸ್ತವಿಕ ಅರಿವಿನ ದೆಸೆಯಿಂದ, ತನ್ನ ಸಂಸಾರದ ಜವಾಬ್ದಾರಿಯಿಂದಾಗಿ, ವಯಸ್ಕರು, ತಮ್ಮ ದೇಹಾರೋಗ್ಯದ ಬಗೆಗೆ ಕಾತರರಾಗಿರುತ್ತಾರೆ. ನಡುವಯಸ್ಸಿನಲ್ಲಿ ಗೊಟಕ್ ಎಂದರೆ, ಹೆಂಡತಿ ಮಕ್ಕಳು ಬೀದಿಪಾಲಾಗುತ್ತಾರಲ್ಲ ಎಂಬ ಆತಂಕವು ಹಿರಿದಾಗಿ ಕಾಡುತ್ತದೆ. ಹೆಂಗಸರಲ್ಲನಕ, ನಮ್ಮ ಸಂಸ್ಕೃತಿಯಲ್ಲಿ, ನನ್ನ ಮಕ್ಕಳು ಬಲತಾಯಿಯ ಕಾಟವನ್ನು ಅನುಭವಿಸಬೇಕಾಗುತ್ತದಲ್ಲ ಎಂದು ಆತಂಕಪಡುತ್ತಾರೆ. ತಾಕಿದ ಬೇನೆಯು ಮನಸ್ಸಿನ ಈ ಆತಂಕದಿಂದ, ಉಲ್ಬಣಗೊಳ್ಳುತ್ತದೆ. ದೇಹವು ತುಸು ಅನಾರೋಗ್ಯವಾದರೆ ಆತಂಕವು ಪ್ರಾರಂಭವಾಗಿ, ಭಯದಲ್ಲಿ ಪರ್ಯವಸಾನವಾಗಬಹುದು. ಭಯವು ಮನಸ್ಸಿನ ಕಾರ್ಯಗಳನ್ನು ಪಲ್ಲಟಗೊಳಿಸುತ್ತದೆ. ಧೈರ್ಯವು ಕುಗ್ಗುತ್ತದೆ, ಯಾವುದಾದರೂ ಹೊಸ ಉದ್ಯಮವನ್ನು ಅಥವಾ ಕೆಲಸವನ್ನು ಮಾಡಬೇಕಾದರೆ ಧೈರ್ಯವು ಅಗತ್ಯ. ಮಸಲಾ ನಷ್ಟವಾದರೂ ಮುಂದೆ ಸರಿಪಡಿಸಿಕೊಳ್ಳಬಹುದು ಎನ್ನುವ ಕೆಚ್ಚು ಇದ್ದರೆ, ಹೊಸ ಕೆಲಸವನ್ನು ಮಾಡಲು ಯತ್ನಿಸಬಹುದು. ಒಳಗೆ ಸಂದೇಹದ ಪುಕ್ಕಲು ಇದ್ದರೂ, ಆಸೆಯಿಂದ ಉದ್ರೇಕಿತನಾಗಿ ವಯಸ್ಕನು ಹೊಸ ಜಾಡನ್ನು ಹಿಡಿದರೆ, ಯಶಸ್ವಿಯಾಗುವುದೂ ಕಷ್ಟ, ಅನುಮಾನವೇ ಕುತ್ತಾಗುತ್ತದೆ. ಈ ಕಾರಣದಿಂದಾಗಿ, ಯುವಕರು ಧೈರ್ಯದಿಂದ ಮುನ್ನುಗ್ಗುವ ಪ್ರವೃತ್ತಿಯು, ವಯಸ್ಕರಲ್ಲಿ ಬಲು ಪಾಲು ಕಾಣಬರುವುದಿಲ್ಲ. Generation gap ಎನ್ನುವುದಕ್ಕೆ ಈ ವಿಷಯವು ಪುಷ್ಟಿಯನ್ನು ಕೊಡುತ್ತದೆ.

ವಯಸ್ಕರು ಎಂದಾಗ ಪಂಚಾಂಗದ ಪ್ರಕಾರ ಇಷ್ಟು ವಯಸ್ಸಾದವರು ಎಂದು ಸಾಮಾನ್ಯವಾಗಿ ಹೇಳುವುದಾದರೂ ಮಾನಸಿಕವಾಗಿ ಎಷ್ಟು ಬೆಳೆದಿದ್ದಾರೆ ಎನ್ನುವುದು ಮುಖ್ಯ. ಅರವತ್ತು ವಯಸ್ಸಿನ ಮುದಿಯ ಹದಿನೆಂಟರ ಹೋರಿಯಂತೆ ನಡೆದುಕೊಳ್ಳುವುದೂ ಉಂಟು. ಈ ನಗೆಪಾಟಲ ದೃಶ್ಯವನ್ನು ಸಮಾಜದಲ್ಲಿ ಕಾಣುತ್ತೇವೆ, ಅಲ್ಲವೇ?

ಒಟ್ಟಿನಲ್ಲಿ ವಯಸ್ಕರ ಮನಸ್ಸು, ಸ್ವಾವಲಂಬಿಗಳಾದುದರಿಂದ, ಸ್ವಾರ್ಥವೂ ಆಗಿರುತ್ತದೆ. ಸಹಜವಾದ ಅನುಕಂಪವು ಸ್ವಾರ್ಥದಿಂದ ಬಹಳಷ್ಟು ಮರೆಯಾಗಿರುತ್ತದೆ.

ಈ ರೀತಿ ವಯಸ್ಕರಲ್ಲಿ Id ಅಥವಾ ತಮೋಗುಣಪ್ರಧಾನವಾದ ಕಾವ್ಯಗಳು ಪ್ರಬಲವಾಗಿದ್ದರೂ, ಯುವಕರಲ್ಲಿದ್ದಂತೆ ಉನ್ಮಾದಾವಸ್ಥೆಗೆ ಹೋಗುವುದಿಲ್ಲ. Ego, ನಾನು ಎಂದುಕೊಳ್ಳುವ ಮನಸ್ಸಿನ ಕಲ್ಪನೆಯನ್ನು ಅತಿ ಹುಚ್ಚಾಗಿ ಚೆಲ್ಲಾಡಿಸುವುದಿಲ್ಲ.ಆಹಾರ, ನಿದ್ರಾ, ಭಯ, ಕಾಮ ಎಲ್ಲವೂ ವಯಸ್ಕರಲ್ಲಿ ರಸಿಕತೆಯ ಮೆರಗನ್ನು