೩೩೯
ಮೂಡಿಸಿ, ಕಾಡುತ್ತವೆ. ಇಂತಹ ಊಟವೇ ಬೇಕು. ಈ ರೀತಿಯಲ್ಲಿ ಬಡಿಸಬೇಕು, ಎಂದು ವಯಸ್ಕನು ಹಾತೊರೆಯುತ್ತಾನೆ. ಸ್ವಾವಲಂಬಿಯಾಗಿರುತ್ತಾನೆ, ಸಂಪಾದಿಸುತ್ತಾನೆ. ಅಂದ ಮೇಲೆ ಸ್ವಾರ್ಥವೂ ಅಧಿಕವಾಗಿರುತ್ತದೆ. ಇದೇ ಆಗಬೇಕು ಎನ್ನುವ ಹಟ ಹೆಚ್ಚಾಗುತ್ತದೆ. ನಿದ್ರೆ ಮಾಡುವಾಗಲೂ ಹಾಗೆಯೆ, ಹಾಸಿಗೆಯು ಹೀಗಿರಬೇಕು, ದಿಂಬು ಇಷ್ಟು ಎತ್ತರವಿರಬೇಕು ಎಂದು ಆಶಿಸುತ್ತಾನೆ. ಕ್ಯಾಂಪಿನಲ್ಲಿ ಯುವಕರು ಜಮಖಾನದ ಮೇಲೆ ಮಲಗಿ ಸುಖವಾಗಿ ನಿದ್ರಿಸುವಂತೆ ವಯಸ್ಕರು ಮಾಡಲಾರರು. ಭಯದ ವಿಷಯವನ್ನು ಆಗಲೇ ಪ್ರಸ್ತಾಪಿಸಲಾಗಿದೆ. ಕಾಮದ ವಿಷಯದಲ್ಲಿಯೂ ವಯಸ್ಕರ ರಸಿಕತೆಯೇ ಬೇರೆ. ಯುವಕರ ಅವಸರವೇ ಬೇರೆ.
Ego ಅಥವಾ ನಾನು ಎಂದುಕೊಳ್ಳುವ ಮನಸ್ಸಿನ ಅಂಶವು ಪ್ರಬಲವಾಗಿರುತ್ತದೆ. ಅನುಕಂಪದಿಂದ ಹರಡಿದ ಧೈಯವಾದಿ ಆದರ್ಶಗಳು, ಯುವಕರನ್ನು ಪ್ರೇರಿಸುವಂತೆ, ವಯಸ್ಕರನ್ನು ಸೆಳೆದು ನಡೆಸುವುದಿಲ್ಲ 'ನಾನು' ಎಂದುಕೊಳ್ಳುವ ಮಮಕಾರದ ಕೋಟೆಯು ವಯಸ್ಕರಲ್ಲಿ ಸದೃಢವಾಗುತ್ತದೆ. ಆದಕಾರಣ ಸ್ವಾರ್ಥವು ವಯಸ್ಕರಲ್ಲಿ ಅತಿಯಾಗಿರುತ್ತದೆ. ಲೋಕಾನುಭವವು ಹೆಚ್ಚಾಗಿರುವುದರಿಂದ, ಸ್ವಾರ್ಥಕ್ಕಾಗಿ ಮಾಡುವ ಕೆಲಸ ಕಾರ್ಯಗಳಿಗೆ, ಪರಾರ್ಥಕ್ಕಾಗಿ ಮಾಡುತ್ತಿದ್ದಾರೆ, ಎನ್ನುವ ನಂಬಿಕೆಯನ್ನು ಇತರರಲ್ಲಿ ಮೂಡಿಸುತ್ತಾರೆ. ಮಮಕಾರದ ಕೋಟೆಯು ಭದ್ರವಾಗತೊಡಗುವುದರಿಂದ, ಹೊನ್ನು, ಹೆಣ್ಣು, ಮಣ್ಣು ; ಇವುಗಳಿಗಿಂತ ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು ; ಗಣ್ಯ ಎಂದೆನಿಸಿಕೊಳ್ಳಬೇಕು. ಎನ್ನುವ ಹಂಬಲವು ಅತಿಯಾಗಿರುತ್ತದೆ, ಸಾರ್ವಜನಿಕ ಸಭೆಯಲ್ಲಿ ಅಗ್ರಪಂಸ್ತೆಯಲ್ಲಿ ತನ್ನನ್ನು ಕೂರಿಸಲಿಲ್ಲ ಎನ್ನುವ ಕೊರಗು ವಯಸ್ಕರನ್ನು ಕಾಡುವಂತೆ ಯುವಕರನ್ನು ಕಾಡುವುದಿಲ್ಲ. ಆದುದರಿಂದ ಡಿ.ವಿ.ಜಿ. ಯವರು 'ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಯ ; ಚಿನ್ನದಾತುರಕಿಂತ ಹೆಣ್ಣು ಗಂಡೊಲವು; ಮನ್ನಣೆಯದಾಹವೀಯೆಲ್ಲಕಂ ತೀಕ್ಷ್ಯತಮ ; ತಿನ್ನುವುದದಾತ್ಮವನೆ ಮಂಕು ತಿಮ್ಮ' ಎಂದು ನುಡಿದರು. ಮನ್ನಣೆಯ ದಾಹವು ತೀಕ್ಷ್ಯತಮವಾಗಿ, ಆತ್ಮವನು ಎಂದರೆ ಸತ್-ಚೈತನ್ಯಾಂಶವಾದ Super-Egoವನ್ನು ಮರೆಮಾಚಿ ಬಿಡುವುದು. ಇದು ವಯಸ್ಕರಲ್ಲಿ ಕಾಣಬರುವ ಪ್ರವೃತ್ತಿ. ಎಲ್ಲ ನಾಲ್ಕು ಆತುರಗಳು ಎಲ್ಲರಲ್ಲಿಯೂ ಕಂಡುಬಂದರೂ, ಬಾಲ್ಯದಲ್ಲಿ ಅನ್ನದಾತುರವು ಹೆಚ್ಚು. ಯೌವನದಲ್ಲಿ ಹೆಣ್ಣು- ಗಂಡೊಲವು ವಯಸ್ಕರಲ್ಲಿ, ಚಿನ್ನ ಅದಕ್ಕೂ ಮಿಗಿಲಾಗಿ ಮನ್ನಣೆಯ ಆತುರವು ಹೆಚ್ಚು.