ಮನಮಂಥನ
ನಾಲ್ಕು-ನಾನು ಮತ್ತು ನನ್ನ ವಿಹಿತವನ್ನು ನಾನೇ ಸಾಧಿಸಿಕೊಳ್ಳಬೇಕು. ಯಾವ ಹೊರಗಿನದೂ, ನನ್ನ ನೆರವಿಗೆ ಬರುವುದಿಲ್ಲ. ಆದಕಾರಣ ನನ್ನನ್ನು ನಾನು ನಿಸ್ಸಂಶಯವಾಗಿ ನಂಬಬೇಕು. ಹೀಗೆ ನಂಬಬೇಕಾದರೆ 'ನಾನು' ಎನ್ನುವುದು ಯಾವುದು? ಅದರ ಸ್ವರೂಪವೇನು ? ಲಕ್ಷಣಗಳೇನು ? ಎಂಬುದನ್ನು ವಿಚಾರಪರ ಮನಸ್ಸಿನಿಂದ ಅರಿತುಕೊಳ್ಳಬೇಕು, ಹೀಗೆ ವಿಚಾರಪರ ಮನಸ್ಸನ್ನು ಅತ್ಯದ್ಭುತವಾಗಿ ಬಳಸಿ, 'ಅದೇ ನಾನು' ಎಂದು ನಿರ್ಧರಿಸುವ ಅಲ್ಪಸಂಖ್ಯಾತರು ಕೆಲವರು. ಅದು ಮತ್ತು ನಾನು ಎಂಬ ಭೇದವನ್ನು ಅಳಿಸುವವರು.
ಐದು-ನಾನು ನನ್ನ ಹಿತಕ್ಕಾಗಿ ಯತ್ನಿಸುತ್ತೇನೆ. ಅದೂ ನನ್ನ ಹಿತವನ್ನು ಕರುಣಿಸುತ್ತದೆ. ನನಗೂ 'ಅದ'ಕ್ಕೂ ನಿಕಟವಾದ ಗಂಟು ಮತ್ತು ನೆಂಟು ಇದೆ. ಆದರೆ ನಾನು 'ಅದು' ಆಗಲಸಾಧ್ಯ. ಆದಕಾರಣ 'ಅದು' ವನ್ನು ಎಂದೆಂದಿಗೂ ನಂಬಿ ಈ ಜನ್ಮದ ಬಾಳನ್ನು ಆದಷ್ಟು ಹಿತವಾಗಿ ನಡೆಸಿಕೊಳ್ಳಬೇಕು ; ಎಂದು ತೀರ್ಮಾನಿಸುವವರು ಕೆಲವರು.
ವಯಸ್ಕರ ಮನಸ್ಸಿನ ಕಾರ್ಯಕ್ರಮದಲ್ಲಿ ಏನೆಲ್ಲಾ ವೈವಿಧ್ಯ !
ಮುಪ್ಪಿನಲ್ಲಿ ಮನಸ್ಸಿನ ಕಾರ್ಯಕ್ರಮ
ಮುಪ್ಪಿನಲ್ಲಿ ದೇಹದಾರ್ಡ್ಯವು ಇಳಿಮುಖವಾಗಿರುತ್ತದೆ. ತಿನ್ನಬೇಕು ಎನ್ನುವ ಚಪಲವು ಉಳಿದಿದ್ದರೂ, ತಿಂದ ಮೇಲೆ ಜೀರ್ಣವಾಗದೆ ನರಳಬೇಕಾಗುತ್ತದಲ್ಲ ಎನ್ನುವ ಭಯವು ತಡೆಯುತ್ತದೆ. ಇದರಂತೆಯೇ ಇತರ ಕಾವ್ಯಗಳು, ದೇಹವು ಶಕ್ತಿಯನ್ನು ಕಳೆದುಕೊಳ್ಳುವಂತೆ, ಮನಸೂ ಚುರುಕನ್ನು ಸಾಮಾನ್ಯವಾಗಿ ಕಳೆದುಕೊಳ್ಳುತ್ತದೆ. ತುಂಬಾ ವಿರಳವಾಗಿ ಕೆಲವರ ಮನಸ್ಸು ಮುಪ್ಪಿನಲ್ಲಿ ಕೂಡ ಚುರುಕಾಗಿರುವುದುಂಟು.
Id ಇನ ಕಾವ್ಯಗಳ ಸೆಳೆತವು, ದೇಹದ ನಿರ್ಬಲತೆಯಿಂದಾಗಿ, ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಯೌವನ ಮತ್ತು ವಯಸ್ಕನಾಗಿದ್ದಾಗ ಅನುಭವಿಸಿದ ಕಾವ್ಯ ಕಾರ್ಯಗಳ ನೆನಪು ಹಸಿರಾಗಿ ಉಳಿದಿರುತ್ತದೆ. ಅವುಗಳ ಸ್ಮರಣೆಯು ಮುಪ್ಪಿನಲ್ಲಿ ತುಂಬಾ ಸುಖವನ್ನು ನೀಡುತ್ತದೆ. ತುರುಬು ನೆನಸಿಕೊಳ್ಳುವುದಕ್ಕಿಂತ ಇತರ ಯಾವುದು ತಾನೇ ಹೆಚ್ಚು ಹಿತವಾಗಿರುತ್ತದೆ ! ಮುಪ್ಪಿನಲ್ಲಿ.
ಕೆಲವು ಮುಪ್ಪಿಗರಲ್ಲಿ Id ಇನ ಕಾವ್ಯ ಪ್ರೇರಕಗಳು ಸ್ಮರಣೆಯಿಂದ ತೃಪ್ತಿಗೊಳ್ಳುವುದಿಲ್ಲ. ಆದರೆ ನಿರ್ಬಲವಾದ ದೇಹವು ಆಶಿಸಿದಂತೆ ಆಡಲು