೩೪೩
ಸಮರ್ಥವಾಗಿರುವುದಿಲ್ಲ. ಜತೆಗೆ ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಮನ್ನಣೆಯನ್ನೂ ಪಡೆದಿರುತ್ತಾನೆ. ಆದಕಾರಣ, ಮನ್ನಣೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವುದನ್ನು Id ಇನ ಪ್ರೇರಣೆಯಿಂದ ಮಾಡಿದರೂ, ಗುಪ್ತವಾಗಿ ಮಾಡುತ್ತಾನೆ.
ರಸ್ತೆಯಂಚಿನಲ್ಲಿ, ಚರಂಡಿಯ ಪಕ್ಕದಲ್ಲಿ, ಸಂಜೆಯ ಹೊತ್ತಿನ ವೇಳೆಗೆ ಬೋಂಡಾ ಮತ್ತು ವಡೆಗಳನ್ನು ಕರಿಯುವ ಅಂಗಡಿಗಳಿರುವುದಿಲ್ಲವೆ ? ಅವುಗಳ ಘಮಘಮವು ರಸ್ತೆಯಲ್ಲಿ ಪಸರಿಸುತ್ತದೆ. ಆದರೆ ತುಸು ಮನ್ನಣೆಯನ್ನು ಸಮಾಜದಲ್ಲಿ ಗಳಿಸಿಕೊಂಡ, ವಿಶ್ರಾಂತಿವೇತನವನ್ನು ಪಡೆದ ಬಡ ಶಾಲಾ ಮಾಸ್ತರು ಅಂತಹ ಅಂಗಡಿಗಳ ಬಳಿಯಲ್ಲಿ ನಿಂತು, ಬೋಂಡಾವನ್ನು ಕೊಂಡು ತಿನ್ನಲು ಹಿಂತೆಗೆಯುತ್ತಾನೆ. ಆದರೆ ಆಸೆಯು ಬಿಡದು. ಮೊಮ್ಮಕ್ಕಳ ನೆಪವನ್ನು ಹೂಡಿ, ಅವರಿಗೋಸ್ಕರ ಎಂದು ಹೇಳಿಕೊಂಡು, ಕೊಳ್ಳುತ್ತಾನೆ. "ತುಂಬಾ ಖಾರ ಇಲ್ಲವಲ್ಲಪ್ಪಾ ಮೊಮ್ಮಗು ಕೇಳಿತು,' ಎಂದು ಅಂಗಡಿಯವನಿಗೆ ಹೇಳುತ್ತಾನೆ. ಅಂಗಡಿಯವರು ನಂಬುವುದಿಲ್ಲ ಎಂದು ಮಾಸ್ತರಿಗೂ ಗೊತ್ತು. ಆದರೂ ತನಗೆ ತಾನೇ ಮೋಸ ಮಾಡಿಕೊಂಡು, ಪೊಟ್ಟಣವನ್ನು ಕಟ್ಟಿಸಿಕೊಂಡು, ಪಾರ್ಕಿನ ನಿರ್ಜನ ಮೂಲೆಯಲ್ಲಿ ತಿನ್ನುತ್ತಾನೆ. ಕಟ್ಟಿದ ಕಾಗದದಲ್ಲಿ ಬಾಯೊರೆಸಿಕೊಂಡು, ಕಣ್ಣು ಮುಚ್ಚಿಕೊಂಡು ಹಾಲು ಕುಡಿದ ಬೆಕ್ಕಿನಂತೆ ಮನೆಗೆ ಹಿಂತಿರುತ್ತಾನೆ.
ಕಾಮದ ವಿಷಯದಲ್ಲನಕ ಅವನ ನಡವಳಿಕೆಯು ಅತಿ ವಿಚಿತ್ರವಾಗಿರುತ್ತದೆ. ಭಗವದ್ಗೀತೆಯ ಪುಸ್ತಕದ ರಟ್ಟಿನಲ್ಲಿ ವಾತ್ಸಾಯನನ ಚಿತ್ರಗಳನ್ನು ಮರೆಮಾಚಿಟ್ಟುಕೊಂಡು ಕಳ್ಳತನದಲ್ಲಿ ನೋಡುತ್ತಾನೆ. ಹೆಂಗಸರು ಸ್ನಾನ ಮಾಡುವ ಕೆರೆಯ ಪಕ್ಕದ ತುಳಸಿವನದಲ್ಲಿ ಕುಳಿತು, ಜಪ ಮಾಡಲು ಕುಳಿತಿರುತ್ತಾನೆ. ಅರೆಮುಚ್ಚಿದ ಕಣ್ಣು, ಸ್ನಾನ ಮಾಡುವವರ ಮೇಲೆ ಹರಿದಿರುತ್ತದೆ. ಮೂರನೆಯ ಮಹಡಿಯಲ್ಲಿರುವ ಷಹರಿನ ಮುದುಕ, ಎದುರು ಮನೆಯ ಎರಡನೆಯ ಮಹಡಿಯ ಕಿಟಕಿಯನ್ನು ವೀಕ್ಷಿಸುತ್ತಾನೆ. ಆ ಕಿಟಕಿಯಲ್ಲಿ ಕಂಡುದುದು ಅವನ Id ಅನ್ನು, ಯಾವ ತೆರನ ದೇಹದ ಪ್ರಯಾಸವೂ ಇರದೆ, ಶಮನಗೊಳಿಸುತ್ತದೆ. Voyuerism ಎನ್ನುವ ಇಂತಹ ನಡವಳಿಕೆಗಳು ಮುಪ್ಪಿಗರಲ್ಲಿ ಹೆಚ್ಚಾಗಿರುತ್ತದೆ. ಅಂದರೆ ಇತರ ಯುವಕರಲ್ಲಿ ಅಥವಾ ವಯಸ್ಕರಲ್ಲಿ ಇರುವುದಿಲ್ಲ ಎಂದೇನೂ ಅಲ್ಲ. ಆದರೆ ಮುದುಕರಲ್ಲಿ ಇಂತಹವರ ಸಂಖ್ಯೆಯು ಬಹಳಷ್ಟು ಹೆಚ್ಚಾಗಿರುತ್ತದೆ. 'ಎಳೆಯ ಬಾಲಕಿಯರ ಮೇಲೆ ಅತ್ಯಾಚಾರ' ಎಂಬ ಶಿರೋನಾಮೆಯಲ್ಲಿ ಪ್ರಕಟವಾಗುವ ಪತ್ರಿಕಾ ಸುದ್ದಿಗಳಲ್ಲಿ ಮುಪ್ಪಿಗರು ಹೆಚ್ಚು ಪಾತ್ರವನ್ನು ವಹಿಸಿರುತ್ತಾರೆ.
ಅಂದರೆ, ಮುಪ್ಪಿನಲ್ಲಿ Id ಇನ ಪ್ರಭಾವವು, ದೇಹದ ಶಿಥಿಲತೆಯಿಂದ