ಮನಮಂಥನ
ಕಡಿಮೆಯಾಗಿದ್ದರೂ, ನಾಶವಾಗಿರುವುದಿಲ್ಲ, ಸಾಮಾನ್ಯವಾಗಿ ಹಳೆಯ ಸುಖದಾಯಕ ನೆನಪುಗಳನ್ನು ಮೆಲಕುಹಾಕುತ್ತ Id ಸಮಾಧಾನವನ್ನು ಹೊಂದುತ್ತದೆ. ಆದರೆ ಮತ್ತೆ ಕೆಲವರಲ್ಲಿ, ವಿಚಿತ್ರವಾದ ಮತ್ತು ಅಸಹ್ಯವೂ ಆದ ನಡವಳಿಕೆಗಳನ್ನು ಪ್ರೇರಿಸುತ್ತದೆ. ಇಂತಹ ಮುದುಕರಲ್ಲಿ ಮನಸ್ಸಿನ ಸತ್-ಚೈತನ್ಯಾಂಶವು, Super- Ego ವು ಬಹಳ ಮಂದವಾಗಿರುತ್ತದೆ, ಸಡಿಲವಾಗಿಯೂ ಇರುತ್ತದೆ. ಆದುದರಿಂದ ಅವರುಗಳ ಮನಸ್ಸು ಯದ್ವಾತದ್ವಾ ನಡೆಯುತ್ತದೆ. ಮಾನಸಿಕ ಪಲ್ಲಟವು ಇಂತಹುದೇ. ಸಮಾಜ ವಿಚ್ಛಿದ್ರಕ ಕಾರ್ಯಗಳನ್ನು ಮಾನಸಿಕ ಪಲ್ಲಟವಾದವರು ನಡೆಸುತ್ತಾರೆ. ಮುಪ್ಪು ಅಡರಿರುವ ಅಪರಾಧಿಗಳನ್ನು ಕಂಡಾಗ, ಅವರುಗಳ ಮನಸ್ಸಿನಲ್ಲಿರುವ ಭೂತಗಳು ರೀತಿ ಚೇಷ್ಟೆಯನ್ನು ಮಾಡಿಸುತ್ತವೆ ಎಂಬುದನ್ನು ಮರೆಯಬಾರದು.
ಮಾನವನ ಪ್ರಗತಿ ಹೊಂದಿದ ಮನಸ್ಸಿನಲ್ಲಿ Id ಎಂಬುದು ಅತ್ಯಗತ್ಯವಾದ ಅದ್ಭುತವಾದ ಭೂತ, ಪಿಶಾಚಿ, ಬ್ರಹ್ಮರಾಕ್ಷಸ, ಹಾಗೂ ಮೋಹಿನಿ ದೆವ್ವ, ಅವು ಆಡಿಸಿದಂತೆ ಮಾನವನು ಚೆಲ್ಲಾಡುತ್ತಾನೆ. ರಕ್ಷಣೆಯಿತ್ತ ಸಮಾಜವನ್ನು ಹುಚ್ಚನಂತೆ, ತುಂಡರಿಸಲು ಯತ್ನಿಸುತ್ತಾನೆ. ಪ್ರಗತಿ ಹೊಂದುತ್ತಿರುವ ಮಾನವನ ಮನಸ್ಸಿನಲ್ಲಿ ಸತ್-ಚೈತನ್ಯಾಂಶವೂ Super-Ego ವೂ ವೃದ್ಧಿಸುತ್ತವೆ. ಅಭಿವೃದ್ಧಿಸುತ್ತವೆ. ಇವನ್ನು ದೇವತೆಗಳು, ಸುರರು, ಆಮೃತರು, ಎನ್ನಬಹುದು. ಈ ಶಕ್ತಿಗಳೂ ಅತ್ಯಗತ್ಯ, ಉದ್ಧಾರಕ್ಕೆ. ಇವೂ ಅದ್ಭುತ. ಇವಕ್ಕೆ ಸಮಾಜದ ಹಿತ ವಿಹಿತ ಸಾಧನೆಯೇ ಧ್ಯೇಯ ಮತ್ತು ಆಶಯ.
ಈ ಸುರರು, ಸಾಕಷ್ಟು ಪ್ರಬಲವಾಗಿ, ಮಾನವನ ಮನಸ್ಸಿನಲ್ಲಿ, ಹುಟ್ಟಿದಂದಿನಿಂದಲೂ ರೂಢಿಸಲ್ಪಡದಿದ್ದರೆ, ಬೆಳೆಯದೆ ಇದ್ದರೆ, ಆಗ Id ಇನ, ತಮೋಗುಣದ ಪ್ರಭಾವವು ಹೆಡೆಯೆತ್ತುತ್ತದೆ. Ego ವನ್ನು ಪಿಶಾಚಿಗಳಂತೆ ಜಗ್ಗಾಡಿಸುತ್ತವೆ. Egoವಿಗೆ ದೇಹವೇ ಉತ್ಸವ ವಿಗ್ರಹ. ಮೂಲವಿಗ್ರಹವು, ಗರ್ಭಗುಡಿಯಲ್ಲಿ ಸುರಕ್ಷಿತವಾಗಿರಲಿ, ದೇಹದಿಂದಲೇ ಅದನ್ನು ನಡೆಸುವ ಮನಸ್ಸಿನಿಂದಲೇ, ತಾನು ಸಮಾಜದಲ್ಲಿ ಪ್ರತಿಷ್ಠಿತನಾಗುವುದು, ಎಂದು Ego ಅಂಶವು, -ಮಮಕಾರವು ನಿರ್ಧರಿಸುತ್ತದೆ. ದೇಹವು ಕ್ಷೀಣವಾದಾಗ, Super- Ego ಬೆಳೆಯದೆ ಇದ್ದಾಗ, Id ಇನ ತಮೋಪ್ರಧಾನವಾದ ದೆವ್ವಗಳು, ಪಿಶಾಚಿಗಳು. ಬ್ರಹ್ಮರಾಕ್ಷಸರು, ಕಾಡಿ ಕೆಡವುತ್ತಾರೆ. ಮದವೇರಿದ ಸಲಗನು ತನ್ನ ತಲೆಯ ಮೇಲೆ ಮಣ್ಣನ್ನು ಎರಚಿಕೊಳ್ಳುವಂತೆ, ತನ್ನ ನಾಶವನ್ನು ತಾನೇ ಮಾಡಿಕೊಳ್ಳುವಂತೆ Super-Egoವು ಲಕ್ಷಣವಾಗಿ ಬೆಳೆಯದೇ ಇದ್ದವರು, ದೇಹವು ಶಿಥಿಲಗೊಂಡು Ego ವು ಧೃತಿಗೆಟ್ಟಾಗ ತಮ್ಮ ನಾಶವನ್ನು ತಾವೇ ಮಾಡಿಕೊಳ್ಳುತ್ತಾರೆ, ತಾವು