ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬಾಲ್ಯ, ಆಗಿನ ಮನಸ್ಸು

೩೪೫

ಮೆರೆಯಬೇಕೆಂದಿರುವ ಸಮಾಜದಲ್ಲಿ ಅವಮಾನಿತರಾಗಿ ಕಂಗೆಡುತ್ತಾರೆ.

ಮುಪ್ಪಿನಲ್ಲಿ Ego ವಿನ ಮೆರೆಯುವಿಕೆಯು ವಯಸ್ಕರಲ್ಲಿದ್ದಂತೆ ಪ್ರಬಲವಾಗಿರುವುದಿಲ್ಲ. ಏಕೆಂದರೆ Ego ಮೆರೆಯಬೇಕಾದರೆ ದೇಹವು ದೃಢವಾಗಿರಬೇಕು. ವಿಚಾರಪರ ಮನಸ್ಸು ಅತಿ ಚುರುಕಾಗಿರಬೇಕು. ಸ್ಮರಣೆಯೂ ಅಚ್ಚಳಿಯದೆ ಉಳಿದು ಅಗತ್ಯವಾದಾಗ ಜಟ್ಟಂತ ನೆನಪಾಗಬೇಕು. ಮುಪ್ಪಿನಲ್ಲಿ ದೇಹವು ಶಿಥಿಲವಾಗುತ್ತದೆ. ತಲೆಯ ಕೂದಲುಗಳು ನರೆಯತೊಡಗಿ, ಕಡೆಗೆ ಅವಾದರೂ ಇದ್ದರೆ ಸಾಕು. ಭಟ್ಟ ತಲೆಯಾಗದಿದ್ದರೆ ಸಾಕಪ್ಪ ; ಎನ್ನುವಂತಾಗಿರುತ್ತದೆ. ಕಣ್ಣುಗಳು ತುಸು ಮಂದವಾಗತೊಡಗುತ್ತವೆ. `ಆ! ಏನಂದೆ' ಎಂದು ಪುನಃ ಕೇಳುವಷ್ಟು ಕಿವುಡು ಶುರುವಾಗುತ್ತದೆ. ನುಣುಪಾಗಿದ್ದ ಕಾಂತಿಯುತವಾಗಿದ್ದ ಚರ್ಮವು ಕಾಂತಿಹೀನವಾಗಿ ಸುಕ್ಕು ಸುಕ್ಕಾಗತೊಡಗುತ್ತದೆ. ನಾಲಿಗೆಯು ಚಪಲದಿಂದ ಉದ್ರೇಕಿತವಾದರೂ, ಆ ವಯಸ್ಸಿನಲ್ಲಿ ಹಲ್ಲುಗಳು ತಾಸವನ್ನು ಕೊಡಲಾರಂಭಿಸಿರುವುದರಿಂದ, ಅಗಿದು ರುಚಿ ನೋಡಿ ಸುಖ ಪಡುವಂತಿರುವುದಿಲ್ಲ. ಅಜೀರ್ಣದ ಭಯದಿಂದ ನಿಶ್ಚಿಂತೆಯಿಂದ ತೃಪ್ತಿಯಾಗುವಂತೆ ತಿನ್ನಲೂ ಆಗುವುದಿಲ್ಲ. ಪಂಚೇಂದ್ರಿಯಗಳು ಕ್ಷೀಣವಾಗುತ್ತಹೋದರೆ, ಮೆದುಳೂ ಶಿಥಿಲವಾಗುತ್ತದೆ. ವಿಚಾರಪರ ಮನಸ್ಸಿನ ಚುರುಕು ಕಡಿಮೆಯಾಗುತ್ತದೆ. ಸ್ಮರಣೆಯೂ ಬೇಕೆನಿಸಿದಾಗ ಮರುಕಳಿಸುವುದಿಲ್ಲ. ಹೀಗಾಗಿ Ego ವು ತನ್ನ ಪ್ರದರ್ಶನವನ್ನು ಮಾಡಿಕೊಳ್ಳಲು ಅವಕಾಶವು ಕಡಿಮೆಯಾಗುತ್ತದೆ.

ಈ ವಯಸ್ಸಿನಲ್ಲಿ, ಬಾಳಿನಲ್ಲಿ ಹೇಗೆಲ್ಲಾ ಮುಂದುವರೆಯಬಹುದಾಗಿತ್ತು. ಆದರೆ ಯಾವುಯಾವುದೋ ಕಾರಣಗಳಿಂದ, ಇನ್ನೇನು ಫಲಿಸಿಯೇ ಬಿಡುತ್ತದೆ ಎನ್ನುವಾಗ, ಠೋಕರ್ ತಿಂದುದರ ಕಹಿ ಸ್ಮರಣೆಗಳು ಕಾಡುತ್ತವೆ. ವಿಧಿಲಿಖಿತ ; ನನ್ನ ದುರದೃಷ್ಟ : ಪೂರ್ವಜನ್ಮದ ಕರ್ಮ ; ಎಂದೆಲ್ಲಾ ಹೇಳಿಕೊಂಡು ಸಮಾಧಾನವನ್ನು ಮಾಡಿಕೊಳ್ಳುತ್ತಾನೆ. ವಯಸ್ಕನಾಗಿದ್ದಾಗ, ನಾನು ಕಡಿದು ಕಟ್ಟಿ ಹಾಕುತ್ತೇನೆ ಎನ್ನುವ ಕೆಚ್ಚು Ego ಎಗಿರುತ್ತದೆ. ಆದರೆ ಮುಪ್ಪಿನಲ್ಲಿ Ego ವಿಗೆ ಅಂತಹ ಕೆಚ್ಚು ಇರುವುದಿಲ್ಲ. ಇತರ ಅವ್ಯಕ್ತವಾದ ಶಕ್ತಿಗಳು Ego ದ ಪ್ರಯತ್ನಗಳನ್ನು ಕುಂಠಿಸುತ್ತವೆ. 'ನಾನು' ತಲೆ ಚಚ್ಚಿಕೊಂಡರೂ ಬಯಸಿದಂತೆ ಬಾಳಲು ಸಾಧ್ಯವಾಗುವುದಿಲ್ಲ ಎನ್ನುವ ಅರಿವು ಮೂಡಿರುತ್ತದೆ.

ಇದರ ಜತೆಗೆ, ಮುಪ್ಪಿನಲ್ಲಿ ರೋಗಗಳು ಕಾಣಿಸಿಕೊಂಡಿರುತ್ತವೆ. ರಕ್ತದ ಒತ್ತಡ; ಸಕ್ಕರೆ ಬೇನೆ, ಕೀಲುಗಳ ನೋವು : ಇತ್ಯಾದಿ ಇತ್ಯಾದಿಗಳು ಪ್ರಾರಂಭವಾಗಿರುತ್ತವೆ. ಬಂದಿರುವ ರೋಗಗಳಿಗಿಂತ, ಬರಬಹುದಾದ ರೋಗಗಳ