೩೪೭
ಅವ ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು. ಆದರೆ ಮುದುಕರಲ್ಲಿ ಹೀಗಾದರೆ, ಕಾತರಕ್ಕೆ ಅವಕಾಶವೇ ಇರುವುದಿಲ್ಲ. ಅಗತ್ಯವೂ ಇರುವುದಿಲ್ಲ.
ಬಾಲಕರಲ್ಲಿ Ego ವನ್ನು ಪ್ರಚೋದಿಸುವ ಉತ್ಕಟಾಕಾಂಕ್ಷೆಯು ಸಮಾಜದಲ್ಲಿ ತಾನು ಸ್ವಾವಲಂಬಿಯಾಗಬೇಕು ಎನ್ನುವ ಆಸೆ, ಯೌವನದಲ್ಲಿ ಹಾಗೂ ವಯಸ್ಕರಲ್ಲಿ, ಕಾಮ ಮತ್ತು ಇತರ ಹೆಬ್ಬಯಕೆಗಳು Ego ವನ್ನು ಒದ್ದು ಜಗ್ಗಿ ನಡೆಸುತ್ತವೆ, ಮುದುಕರಲ್ಲಿ ಉದಾಸೀನತೆಯೂ, ಬೇಸರವೂ, Egoವನ್ನು ನಡೆಸುತ್ತದೆ. ಹೆಬ್ಬಯಕೆಗಳು ಮುದುಕರಲ್ಲಿ ಇರವುದಿಲ್ಲ ಎಂದಲ್ಲ. ಆದರೆ ನಮ್ಮ ಕಾಲ ಮುಗಿಯಿತು; ನಮ್ಮ ಮಕ್ಕಳ ಬಾಳಿನಲ್ಲಿ, ನಮ್ಮ ಇಷ್ಟಾರ್ಥಗಳ ಸಾಫಲ್ಯವನ್ನು ಕಂಡು ಸುಖಪಡೋಣ ಎಂಬ ಹೆಬ್ಬಯಕೆಗಳು ಇರುತ್ತವೆ. ಅಂದರೆ Ambition ಅಥವಾ ಹೆಬ್ಬಯಕೆಗಳು, ತಮ್ಮ ಸ್ವಂತ ಬಾಳಿಗೆ ಅನ್ವಯಿಸುತ್ತವೆ. ಸ್ವಾರ್ಥವು, ಸ್ವಲ್ಪಮಟ್ಟಿಗಾದರೂ ಈ ರೀತಿಯಲ್ಲಿ ಪರಾರ್ಥಕ್ಕೆ ಹರಡುತ್ತದೆ ಎನ್ನಬಹುದು.
ಮುದುಕರಲ್ಲಿ Ego ವು ಹುಡಿಯಾಗತೊಡಗುತ್ತದೆ, ದೃಢವಾಗಿ ಉಳದಿರುವುದಿಲ್ಲ, ಎನ್ನುವುದಕ್ಕೆ ಮುದುಕರ ಮತ್ತೊಂದು ಸಾಮಾನ್ಯ ನಡವಳಿಕೆಯ ಸಾಕ್ಷ್ಯ ನೀಡುತ್ತದೆ. ವಯಸ್ಕರಲ್ಲಿ ವಿಚಾರಪರ ಮನಸ್ಸು ಯಶಸ್ವಿಯಾಗಿ ಕಾರ್ಯವನ್ನು ಮಾಡುತ್ತದೆ. ಆದರೆ ಭಾವನಾ ಪ್ರದರ್ಶನಗಳನ್ನು ಅವರು ಕಾಣಿಸುವುದಿಲ್ಲ. ಸದೃಢವಾದ ಅವರ Ego ಕೋಟೆಯು, ಭಾವನಾ ಪ್ರದರ್ಶನಗಳು ಬಹಿರಂಗವಾಗಿ ಆಗದಂತೆ ತಡೆ ಹಿಡಿಯುತ್ತದೆ. ಮುಪ್ಪಿನಲ್ಲಿಯಾದರೆ, ಹೃದಯಸ್ಪರ್ಶಿಯಾದ ಕೃತಜ್ಞತೆಯ ಒಂದು ಮಾತನ್ನು ಮಗನೋ, ಶಿಷ್ಯನೋ, ತಂದೆಗೋ, ಗುರುವಿಗೋ, ಹೇಳಿದರೆ ಮುದುಕರು ಬಹಿರಂಗವಾಗಿ, ಯಾವ ಅಡೆ ತಡೆಯೂ ಇಲ್ಲದೆ ಕಣ್ಣೀರು ಹಾಕುತ್ತಾರೆ. ಬಾಲಕರು ಗೋವಿನ ಕತೆಯನ್ನು ಕೇಳಿದಾಗ ಸಹಜವಾದ ಅನುಕಂಪದಿಂದ ಅಳುವಂತೆ, ಮುದುಕರೂ ವಿಶ್ವಾಸದ ಮಾತುಗಳನ್ನು ಕೇಳಿದರೆ ಆನಂದಬಾಷ್ಪವನ್ನು ಸುಲಭವಾಗಿ ಸುರಿಸುತ್ತಾರೆ. ದುಃಖವಾದ ಸುದ್ದಿಯನ್ನು ಕೇಳಿದರೆ ಅತ್ತುಬಿಡುತ್ತಾರೆ, ಮುಪ್ಪಿಗೂ ಮಗುತನಕ್ಕೂ ಬಹಳಷ್ಟು ಹೋಲಿಕೆಗಳಿರುತ್ತವೆ. ಆದುದರಿಂದ ಮುಪ್ಪನ್ನು ಎರಡನೆಯ ಬಾಲ್ಯ ಅಥವಾ ಮಗುತನ ಎನ್ನುವುದು. ತಂದೆ ತಾಯಿಯರಿಗಿಂತ, ಅಜ್ಜ ಅಜ್ಜಿಯರನ್ನು, ಮೊಮ್ಮಕ್ಕಳು ಸದರದಿಂದ ತಬ್ಬಿಕೊಳ್ಳುತ್ತವೆ. ಕಾರಣ, ಸಮಾನವಾದ ಮನೋಧರ್ಮ ಬೆಳೆಯುತ್ತಿರುವ ಬಾಲಕರ ಮನಸ್ಸು ; ಇಳಿಯುತ್ತಿರುವ ಮುದುಕರ ಮನಸ್ಸು ಒಂದು ಹಂತದಲ್ಲಿ ಸಮಾನವಾಗಿರುತ್ತದೆ ಎನ್ನಬಹುದು.
ಮುದುಕರಲ್ಲಿ Egoವು ಹುಡಿಯಾಗತೊಡಗುವುದರಿಂದ, ಉದಾಸೀನತೆಯು,