ಮನಮಂಥನ
ಮತ್ತು ಬೇಸರವು ಹೆಚ್ಚಾಗುತ್ತದೆ. ಯಾವುದರಲ್ಲಿ ಉದಾಸೀನತೆ ? ಯಾವ ವಿಷಯದಲ್ಲಿ ಬೇಸರವು ? ಲೌಕಿಕವಾದ, ಈ ಬಾಳಿನ ವಿಷಯಗಳಲ್ಲಿ ಉದಾಸೀನತೆ, ಮತ್ತು ಬೇಸರ. ಆದರೆ Ego ವು ಕೃಶವಾಗುವಾಗ ಈ ಲೋಕದ ಹೊರಗಿರುವ, ಇರಬಹುದಾದ ವಿಷಯಗಳಲ್ಲಿ ಆಸಕ್ತಿಯು ಪ್ರಬಲವಾಗುತ್ತದೆ. ಭಜನೆ, ಹರಿಕತೆ, ತೀರ್ಥಯಾತ್ರೆ ದೇವಸ್ಥಾನ, ಪ್ರವಚನ, ಮತ ಸಂಬಂಧವಾದ ಪುಸ್ತಕಗಳು, ಇವೆಲ್ಲವೂ ಮುದುಕನ ಆಸಕ್ತಿಯನ್ನು ಸೆರೆಹಿಡಿಯುತ್ತವೆ. ಇದು ಏಕೆ ಮತ್ತು ಹೇಗೆ?
ಮುಪ್ಪಿನಲ್ಲಿ Super-Ego ಯಾವ ರೀತಿಯ ಪ್ರಭಾವನ್ನು ಬೀರುತ್ತದೆ, ಎಂಬುದನ್ನು ಅರಿಯುವ ಶೈಶವದಿಂದ ಪ್ರಾರಂಭವಾಗಿ ಬಾಲ್ಯ ಮತ್ತು ಕೌಮಾರ ವಯಸ್ಸುಗಳಲ್ಲಿ Super-Ego ಅಥವಾ ಮನಸ್ಸಿನ ಸತ್-ಚೈತನ್ಯಾಂಶವು ರೂಢಿಸಲ್ಪಡುತ್ತದೆ ದೃಢವಾಗತೊಡಗುತ್ತದೆ ಎಂಬುದನ್ನು ತಿಳಿದೆವು. ಹುಟ್ಟಿದ ಮನೆಯಲ್ಲಿ, ಕಲಿತ ಶಾಲೆಯಲ್ಲಿ ; ಜೀವಿಸುತ್ತಿರುವ ಸಮಾಜದಲ್ಲಿ ; Super- Ego ವನ್ನು ಬೆಳಸುವ ಪಾಠಗಳನ್ನು ಕಲಿಯುತ್ತಾನೆ. ಹಿರಿಯರ ಅನುಕರಣೆಯಿಂದ; ದೊಡ್ಡವರ ಮೆಚ್ಚುಗೆಯನ್ನು ಪಡೆಯಬೇಕೆಂಬ ಸಹಜ ಹಂಬಲದಿಂದ, ಹಾಗೂ ಶಿಕ್ಷೆಯನ್ನು ತಪ್ಪಿಸಿಕೊಳ್ಳಬೇಕು ಎಂಬ ಸಹಜ ಪ್ರವೃತ್ತಿಯಿಂದ, ಶಿಕ್ಷಣವನ್ನು ಪಡೆಯುತ್ತಾನೆ. ತಾನು ಬದುಕಿ ಬಾಳಬೇಕಾದ ಸಮಾಜವು ಬಿಗಿಯಾಗಿಯೂ ದೃಢವಾಗಿಯೂ ಇದ್ದರೆ, ಆಗ ಅದು ತನಗೆ ರಕ್ಷಣೆಯನ್ನು ನೀಡುತ್ತದೆ ಎಂಬುದನ್ನು ತಿಳಿಯುತ್ತಾನೆ. ಸಮಾಜವು ದೃಢವಾಗಿರಬೇಕಾದರೆ, ತನ್ನ ಪಾತ್ರವನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕು ಎಂಬುದನ್ನು ಅರಿಯುತ್ತಾನೆ. ವ್ಯಕ್ತಿಯ ಮನಸ್ಸು, ಇದನ್ನು ಅರಿತಾಗ ಅದರಂತೆ ಅವ ನಡೆದುಕೊಂಡಾಗ Super-Ego ಅಥವಾ ಮನಸ್ಸಿನ ಸತ್-ಚೈತನ್ಯಾಂಶವು ಪ್ರಬಲವಾಗಿದೆ ಎಂದನ್ನಬಹುದು.
ವ್ಯಕ್ತಿಯ Id ಮತ್ತು Ego ಅಥವಾ ತಮೋ ಮತ್ತು ರಜೋಗುಣಗಳ ಮೇಲೆ ಶಿಕ್ಷಿಸುವ ಶಕ್ತಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನೂ. Super-Ego ಸಂಪಾದಿಸಿಕೊಳ್ಳುತ್ತದೆ. ಹಾಗಾದಾಗ ಸಮಾಜ ವಿಚ್ಛಿದ್ರಕವಾದ, ಹಾಗೂ ಕೇವಲ ಸ್ವಾರ್ಥಿಯಾದ Id-Ego ಒಕ್ಕೂಟದ ಸ್ವಚ್ಛಾ ಪ್ರವೃತ್ತಿಯನ್ನು ಕಟ್ಟು ನಿಟ್ಟಿನಲ್ಲಿಡಬಹುದು. ಆದುದರಿಂದ Super-Ego ವನ್ನು ಮನಸ್ಸಿನ ಸತ್ ಚೈತನ್ಯಾಂಶ ಎಂದು ಕರೆಯುವುದು. ಸಮಾಜದ ಭದ್ರತೆಯನ್ನು ರಕ್ಷಿಸುವುದೇ ಇದರ ಧ್ಯೇಯ.
ಮುಪ್ಪಿನಲ್ಲಿ ದೇಹವು ಶಿಥಿಲವಾಗಿರುತ್ತದೆ. ಆದಕಾರಣ Id-Ego ಒಕ್ಕೂಟದ,