ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬಾಲ್ಯ, ಆಗಿನ ಮನಸ್ಸು

೩೪೯

ಸ್ವಾರ್ಥವಾಗಿರುವ, ಸ್ವಚ್ಛಾ ಪ್ರವೃತ್ತಿಯು, ಸಾಕಷ್ಟು ಕಡಿಮೆಯಾಗಿರುತ್ತದೆ. ಇದರ ಪರಿಣಾಮವಾಗಿ Super-Ego ಪ್ರಭಾವವು ಹೆಚ್ಚಾಗುತ್ತದೆ. Ego ಎಂಬ ಮಮಕಾರದ ಆವರಣವು, ಅಥವಾ ಕೋಟೆಯು ಶಿಥಿಲವಾಗುವುದರಿಂದ Super- Ego ಕಾರ್ಯವು ಹೆಚ್ಚು ಸುಗಮವಾಗುತ್ತದೆ. ಸುಲಭವಾಗುತ್ತದೆ.

ಈ ಬಾಳಿನಲ್ಲಿ, ಈ ಜನ್ಮದಲ್ಲಿ, ಈಡೇರಿಸಲಾಗದ ಇಷ್ಟಾರ್ಥಗಳನ್ನು, ಮಕ್ಕಳ ಅಥವಾ ಶಿಷ್ಯರ ಬಾಳಿನಲ್ಲಿ ಪೂರೈಸಲು ಹಂಬಲಿಸುವ ಮುದುಕರ ನಡವಳಿಕೆಯನ್ನು ಕಂಡಿದ್ದೇವೆ. ಪುಣ್ಯಗಳನ್ನು ನಾವೇನಾದರೂ ಗಳಿಸಿದರೆ, ಅದರ ಪ್ರತಿಫಲವು ನಮಗೆ ಬೇಡ. ಅಂತಹ ಪ್ರತಿಫಲವು ದೊರಕುವುದಾದರೆ, ಅದು ನಮ್ಮ ಚಿರಂಜೀವಿಗಳ ಬಾಳ ರಕ್ಷೆಯಾಗಲಿ, ಎಂದು ಆಶೀರ್ವದಿಸುವ ಮುಪ್ಪಿನ ಮುದುಕರು ಸ್ವಾರ್ಥಿಗಳೇ? ಚಿರಂಜೀವಿಗಳ ಬಾಳಿನಲ್ಲಿ ಅವರು ಅಲೌಕಿಕವಾಗಿ, ಅವ್ಯಕ್ತವಾಗಿ ಪಾಲು ವಹಿಸುವುದೇ ಮುದುಕರ ಆರ್ಶಿವಾದದ ಅಂತರಂತರಾರ್ಥ.

ಆದರೆ ಲೌಕಿಕ ದೃಷ್ಟಿಯಿಂದ, ಕಾಲಮಾನದ ಪ್ರಕಾರ, ಅವರುಗಳು, ಪ್ರತ್ಯಕ್ಷವಾಗಿ ಇರುವುದೇ ಇಲ್ಲ. ಅಪ್ರತ್ಯಕ್ಷವಾಗಿ ಇರುತ್ತಾರೋ ಇಲ್ಲವೋ ಯಾರಿಗೆ ಗೊತ್ತು? ಅವರ, ಸ್ವಾರ್ಥಿ ಹಾಗೂ ನಿಸ್ವಾರ್ಥಿಯಾದ ಆಶೀರ್ವಾದವು ಚಿರಂಜೀವಿಗಳ ಅಂದರೆ ಯುವಕರ ಬಾಳಿಗೆ ರಕ್ಷಾಕವಚವಾಗುತ್ತದೆಯೇ?

ಆಗುತ್ತದೆ ಎಂದು ಚಿರಂಜೀವಿಗಳು ದೃಢವಾಗಿ ನಂಬಿದ್ದರೆ, ಅವರುಗಳ ಮನಸ್ಸಿನ ಸತ್-ಚೈತನ್ಯಾಂಶವು ಅಥವಾ Super-Ego ವು ಭದ್ರವಾದ ಅಡಿಗಲ್ಲನ್ನು ಹೊಂದಿದ್ದರೆ ಹಿರಿಯರ ಆಶೀರ್ವಾದವು ರಕ್ಷೆಯಾಗುತ್ತದೆ.

ಆಗುತ್ತದೆಯೋ ಇಲ್ಲವೋ, ಮುದುಕರು ಅರಳು-ಮರಳಿನಲ್ಲಿ ಆಡಿದ ಮಾತುಗಳಿಗೆ, ನಿಜವಾದ, ಸತ್ಯವಾದ ಮೌಲ್ಯವು ಇದೆಯೋ ಇಲ್ಲವೋ, ಎಂದು ಸಂದೇಹ ಪಡುವ ಯುವಕರಿಗೆ=ಚಿರಂಜೀವಿಗಳಿಗೆ=ಮಿಶ್ರ ಫಲವನ್ನು ನೀಡುತ್ತದೆ. ಏಕೆಂದರೆ ಅವರುಗಳ Super-Ego ಇನ್ನೂ ದೃಢವಾಗಿರುವುದಿಲ್ಲ. ಸಂಶಯದ ಸಾಗರದಲ್ಲಿ ಅವರ ಮನಸ್ಸು ತೇಲಾಡುತ್ತಿರುತ್ತದೆ, ತೊಳಲಾಡುತ್ತಿರುತ್ತದೆ.

ಮುದುಕರ ಆಶೀರ್ವಾದವು, ಸಾಂಪ್ರದಾಯಕವಾಗಿ, ಸಮಾಜದಲ್ಲಿ ರೂಢಿಸಿ ಕೊಂಡು ಬಂದ, ಒಂದು ನಿರ್ವಿಯ್ರ ಚಟ. ಇದನ್ನು ನಂಬಿದರೆ, ಬಾಳು ಹಾಳು, ಎಂದೆನ್ನುವ ಚಿರಂಜೀವಿಗಳಲ್ಲಿ, ಯುವಕರಲ್ಲಿ, ಸಂದೇಹವೂ ಇಲ್ಲ, ನಂಬಿಕೆಯೂ ಇರುವುದಿಲ್ಲ. ಅಂತಹವರು ಕ್ರಾಂತಿಕಾರರು, ಸಂಪೂರ್ಣವಾಗಿ ಸ್ವಾವಲಂಬಿಗಳು. ರಜೋಗುಣ ಪ್ರಧಾನರು. ಆದರೂ Id ಇನ ತಮೋಗುಣಕ್ಕೆ ಬಲಿಯಾಗದವರು. ಇಂತಹ ವಿರಳರನ್ನು ಸತ್-ಚೈತನ್ಯಾಂಶವೇ ನಡೆಸುವುದು.