ಮನಮಂಥನ
ಅಗೋಚರವಾಗಿ, ಅವ್ಯಕ್ತವಾಗಿ ಹೀಗಾಗುತ್ತಿದೆ ಎನ್ನುವುದನ್ನು ಅವರು ಅರಿಯರು. ಕಾರಣ ಕ್ರಾಂತಿಕಾರಕ ಕಾರ್ಯಗಳಿಂದ, ಸಮಾಜ ವಿಚ್ಛಿದ್ರಕ ಚಟುವಟಿಕೆಗಳಿಂದ, ಸ್ವರ್ಗವನ್ನು ಸೃಷ್ಟಿಸುತ್ತೇವೆ ಎಂದು ದೃಢವಾಗಿ ನಂಬಿರುವವರು, ಅವರುಗಳಿಗೆ ಮನಸ್ಸಿನಲ್ಲಿ ಎಂದೂ ನೆಮ್ಮದಿಯೇ ಇಲ್ಲ. ಉತ್ಸಾಹವು ಮಾತ್ರ ಅಪರಿಮಿತ. ಉತ್-ಸಾಹಸವೇ ಅವರುಗಳ ಬೆಂಗಾವಲು. ತ್ರಿಶಂಕು ನರಕವನ್ನು ಸೃಷ್ಟಿಸುತ್ತದೆಯೋ, ತ್ರಿಶಂಕು ಸ್ವರ್ಗವನ್ನೇ ಸಾಧಿಸುತ್ತದೆಯೋ, ಕಾಲ-ಭೈರವನೇ ನಿರ್ಣಯಿಸಬೇಕು !
ಚಿರಂಜೀವಿಗಳ ಮೇಲೆ ಮುದುಕರ ಆಶೀರ್ವಾದವು ಹೇಗೆಯೇ ಪ್ರಭಾವವನ್ನು ಬೀರಲಿ ; ಮುದುಕರಿಗನಕ ನೆಮ್ಮದಿಯನ್ನು ನೀಡುತ್ತದೆ. ಸತ್ ಚೈತನ್ಯಾಂಶದತ್ತ ನಡೆಸುತ್ತದೆ.
Super-Ego ಅಥವಾ ಮನಸ್ಸಿನಲ್ಲಿ ಹುದುಗಿರುವ ಸತ್-ಚೈತನ್ಯಾಂಶವು, ಮುಪ್ಪಿನಲ್ಲಿ ಹೆಚ್ಚು ಪ್ರಭಾವವನ್ನು ಬೀರಲು, ಸುಲಭವಾಗಿರುತ್ತದೆ. ಏಕೆಂದರೆ, ದೇಹವು ಶಿಫಲವಾಗತೊಡಗಿ Id ಇನ, ಕಾವ್ಯಗಳ ತಮೋಪ್ರಧಾನವಾದ ಸೆಳೆತವು, ಬಲುಮಟ್ಟಿಗೆ ಕಡಿಮೆಯಾಗಿರುತ್ತದೆ. Ego ಕೂಡ Id ಇನ ಇಳಿದ ಸೆಳೆತಕ್ಕೆ ಬಗ್ಗಬೇಕಾಗುವುದಿಲ್ಲ. ಆದುದರಿಂದ ಕ್ಷಯಿಸುತ್ತಿರುವ Ego, ಸಲೀಸಾಗಿ Super- Ego ವಿನ ಎಳೆತಕ್ಕೆ ಸಿಕ್ಕಿಬೀಳುತ್ತದೆ. ಹಾಗಾಗುವಾಗ ಹಿತವನ್ನೂ ಅನುಭವಿಸುತ್ತದೆ.
ಅಲ್ಲದೆ ಮುಪ್ಪಿನಲ್ಲಿ ಲೌಕಿಕವಾದ ವಿಷಯಗಳಲ್ಲಿ ಸ್ವಲ್ಪ ಮಟ್ಟಿನ ಉದಾಸೀನತೆಯೂ, ಮತ್ತು ಬೇಸರವೂ ಉಂಟಾಗುತ್ತದೆ. ಯೌವನದಲ್ಲಿ ಮತ್ತು ವಯಸ್ಕರಾದಾಗ ಅನುಭವಿಸಿದ ಕಷ್ಟನಷ್ಟಗಳು ಲೋಕದ ರೀತಿಯೇ ಇಷ್ಟು ಎಂಬ ಅರಿವನ್ನು ಮೂಡಿಸಿರುತ್ತದೆ. ಅಲೌಕಿಕವಾದ ವಿಷಯಗಳಲ್ಲಿ ಆಸಕ್ತಿಯು ಮೂಡುತ್ತದೆ. ದೇಹ ಮತ್ತು ಅದನ್ನು ನಡೆಸುವ ಮನಸ್ಸಿನ ಅಂಶಗಳು, ದುರ್ಬಲವಾಗತೊಡಗಿದಾಗ, ಸತ್-ಚೈತನ್ಯಾಂಶದ ಪ್ರಭಾವವು ಹೆಚ್ಚಾಗುತ್ತದೆ. ಸಮಾಜದ ಭದ್ರತೆಯನ್ನು ಬಲಪಡಿಸುವ ದೇಹ ಅಥವಾ ಮನಸ್ಸಿನ ಸಾಮರ್ಥ್ಯವು ಕಡಿಮೆಯಾಗಿರುತ್ತದೆ. ಆದಕಾರಣ ಸಾರ್ವಜನಿಕ ಕಾರ್ಯಗಳಲ್ಲಿ ಪ್ರಭಾವೀ ಪಾತ್ರವನ್ನು ವಹಿಸಲು ಕಷ್ಟ ಕೇವಲ ಮಾರ್ಗದರ್ಶಕರಾಗಿ, ಬುದ್ಧಿವಾದವನ್ನು ಹೇಳುವಷ್ಟು ಮಾತ್ರ ಸಾಧ್ಯವಾಗಿರುತ್ತದೆ. ಬುದ್ಧಿವಾದವನ್ನು ಕಾರ್ಯರೂಪಕ್ಕೆ ತರುವುದು ವಯಸ್ಕರ ಹೊಣೆಯಾಗಿರುತ್ತದೆ. ಸಮಾಜವನ್ನು ಸುರಕ್ಷಿತವಾಗಿಡುವ, ಸತ್-ಚೈತನ್ಯಾಂಶದ ಒಂದು ಕೆಲಸವು ಈ ರೀತಿ ಮಾರ್ಪಡಿಸಿದರೆ, ಇನ್ನೊಂದು ಕೆಲಸವು ತನಗೆ ಏಕೆ ಕಷ್ಟ ಸಂಕಟಗಳು ಬಂದವು? ಎಲ್ಲರಿಗೂ ಒಳ್ಳೆಯದನ್ನೇ