ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೫೨

ಮನಮಂಥನ

ಎಂದು ನಿರ್ಧರಿಸುತ್ತಾರೆ. ಭಕ್ತಿಗೆ ಪ್ರಾಧಾನ್ಯತೆಯು ಇವರಲ್ಲಿ ಹೆಚ್ಚು.

ಇನ್ನೂ ಕೆಲವರು, ಆದಿಮೂಲವು ನಮ್ಮನ್ನು ನಡೆಸುತ್ತದೆ. ಅದು ಸ್ವತಂತ್ರವಾದುದು. ಆದರೆ ಅದು ನಡೆಸಿದಂತೆ ನಡೆಯುವ ನಾವು ಅಸ್ವತಂತ್ರರು. ಇವೆರಡೂ ಎಂದೂ ಒಂದಾಗಲು ಸಾಧ್ಯವಿಲ್ಲ ಎಂದು ನುಡಿಯುತ್ತಾರೆ, ದೈತಿಗಳು. ಭಕ್ತಿಯು ಇವರುಗಳಲ್ಲಿಯೂ ಪ್ರಮುಖವಾದುದು. ಇವರೆಲ್ಲರನ್ನೂ ಆಯಾ ರೀತಿಯಲ್ಲಿ ನಡೆಸುವುದು, ಮನಸ್ಸಿನ ಸತ್ ಚೈತನ್ಯಾಂಶದ ಆದಿಚೇತನ, ಆದಿಮೂಲ. ಮನಸ್ಸು ಸತ್-ಚೈತನ್ಯಾಂಶವನ್ನು ಅರಿಯತೊಡಗಿದಾಗ, ವಿಧ ವಿಧ ಮಾರ್ಗಗಳನ್ನು ಅನುಸರಿಸುತ್ತದೆ. ಆದುದರಿಂದಲೇ ಮತ ಭೇದಗಳು ಕಾಣಿಸಿಕೊಳ್ಳುತ್ತವೆ ಎನ್ನಬಹುದು.

ರೂಢಿಸಿಕೊಂಡು ಬಂದ ಒಂದು ಮತದವರು, ಆ ನಂಬಿಕೆಯನ್ನು, ವಿಚಾರ ಸರಣಿಯನ್ನು ಬಿಟ್ಟರೆ, ಮತ್ತೊಂದನ್ನು ರೂಢಿಸಿಕೊಳ್ಳಲು ವ್ಯವಧಾನವಿರುವುದಿಲ್ಲ. ಆಯಸ್ಸು ಸಾಕಷ್ಟು ಉಳಿದಿರುವುದಿಲ್ಲ. ಆದ ಕಾರಣ, ದೃಢವಾಗಿ ನಡೆಸುವ ನಡೆ ಗೋಲನ್ನು ಎಸೆದು, ತಾನೇ ನಡೆಯಲೆತ್ನಿಸುವ ಕುಂಟನಂತೆ, ಅಂತಹ ಮುದುಕರ ಮನಸ್ಸು ಪಲ್ಲಟವಾಗುತ್ತದೆ. ಕಾಕ ನಡಿಗೆಯನ್ನು ಮರೆತುಬಿಟ್ಟ ; ಹಂಸ ನಡಿಗೆಯನ್ನು ಕಲಿಯಲಿಲ್ಲ ಎಂದಂತಾಗುತ್ತದೆ. ಹಿರಿಯ ಅನುಭಾವೀ ಮನನಿಗರು ಅದುದರಿಂದಲೇ 'ಸ್ವಧರ್ಮವನ್ನು ಬಿಡಬಾರದು ; ಮನಸ್ಸಿಗೆ ನೆಮ್ಮದಿಯು ಆದರಿಂದಲೇ' ಎಂದು ನುಡಿದುದು.

Super-Ego ಈ ರೀತಿಯಲ್ಲಿ ಆಧ್ಯಾತ್ಮಿಕನಾದ, ಅಲೌಕಿಕವಾದ ವಿಷಯಗಳತ್ತ ಮುದುಕರನ್ನು ನಡೆಸುತ್ತದೆ. ಸಾವಿರ ಮುದುಕರಿದ್ದರೆ, ಒಂಭೈನೂರ ತೊಂಬತ್ತು ಜನರು ವಿಚಾರವನ್ನು ಸ್ವಂತವಾಗಿ ಮಾಡಲಾರರು. ಸ್ವಧರ್ಮದಲ್ಲಿ ನಂಬಿಕೆ ಮತ್ತು ಭಕ್ತಿ, ಇವುಗಳೇ ಅವರ ಮನಸ್ಸಿನಲ್ಲಿ ನೆಮ್ಮದಿಯನ್ನು ಮೂಡಿಸುವುದು, ಸ್ವಧರ್ಮವು, ಮಾರಿ, ಕರಾಳಿ, ಕಾಳಿಯನ್ನು ಆರಾಧಿಸಬಹುದು. ಬ್ರಹ್ಮ ವಿಷ್ಣು ಶಿವನನ್ನು ಆರಾಧಿಸಬಹುದು. ಯಾವುದಾದರೂ ಆಯಿತು, ಅದರಲ್ಲಿ ಪೂರ್ಣ ನಂಬಿಕೆ ಮತ್ತು ಭಕ್ತಿ ಇದ್ದರೆ ಸಾಕು. ಮುಪ್ಪಿನಲ್ಲಿಯೂ ಮನಸ್ಸಿಗೆ ಸಮಾಧಾನವನ್ನು ನೀಡುತ್ತದೆ.

ಬಾಲ್ಯದಿಂದಲೂ Super-Ego ದೃಢವಾಗಿ ರೂಢಿತವಾಗದಿದ್ದರೆ, ಮುಪ್ಪಿನಲ್ಲಿ ಸಂಶಯವು ಉಳಿದುಕೊಳ್ಳುತ್ತದೆ. Ego ಕೃಶವಾಗುತ್ತಿರುತ್ತದೆ. ದೇಹದೊಡನೆ Id ಕೂಡ ನಿರ್ಬಲವಾಗಿರುತ್ತದೆ. ಸಂಶಯಾತ್ಮಾ ವಿನಶ್ಯತಿ ಎಂದನ್ನುವುದು, ಇಂತಹವರನ್ನು ಕುರಿತು. ಇಂತಹ ಮುದುಕರು ಮಾನಸಿಕ ಬೇನೆಗಳಿಗೆ