೩೫೩
ಬಲಿಯಾಗುವುದು ಹೆಚ್ಚು.
ಶೈಶವದಿಂದಲೇ Super-Ego ಬೆಳೆಯಲು ಪ್ರಾರಂಭವಾಗುವುದರಿಂದ, ಮಕ್ಕಳ 'ಇಸ್ಕೂಲು ಮನೆಯಲ್ಲಿಯೇ' ಪ್ರಾರಂಭವಾಗಬೇಕು. ನಂತರ ಶಾಲೆಯಲ್ಲಿ ಅಭಿವೃದ್ಧಿಯಾಗಬೇಕು. ಹಾಗೂ ಸಮಾಜದಿಂದ ಪ್ರವೃದ್ಧಮಾನವಾಗಬೇಕು. ವಿದ್ಯಾಭ್ಯಾಸದ ಹಿರಿಯ ಗುರಿಗಳಲ್ಲಿ, Super-Ego ಅಥವಾ ಸತ್-ಚೈತನ್ಯಾಂಶವನ್ನು ಸದೃಢವಾಗಿಸುವುದು, ಮುಖ್ಯವಾದುದು, ಮಾನಸಿಕ ಬೇನೆಗಳನ್ನು ಮುದುಕರಲ್ಲಿ ತಡಗಟ್ಟಬೇಕಾದರೆ, ಇದನ್ನು ಮೊದಲಿನಿಂದಲೂ ಸಾಧಿಸಲು ಸಮಾಜವು ಯತ್ನಿಸಬೇಕು.
ಮತ-ಧರ್ಮಗಳು ; ಸತ್-ಚೈತನ್ಯಾಂಶದ ಬೆಳವಣಿಗೆಯು; ಮಾನಸಿಕ ನೆಮ್ಮದಿಯೂ, ಒಂದಕ್ಕೊಂದು ಹೇಗೆ ನಿಕಟ ಸಂಬಂಧವನ್ನು ಹೊಂದಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಮಾನಸಿಕ ನೆಮ್ಮದಿಯು ಇರದಿದ್ದರೆ, ಮಾನಸಿಕ ತಳಮಳ ಮತ್ತು ಬೇನೆಗಳು ಉಂಟಾಗುವುವು. ಮಾನಸಿಕ ಬೇನೆಗಳಿಗೆ ಔಷಧಿಗಳ ಮತ್ತು ಶಸ್ತ್ರ ಚಿಕಿತ್ಸೆಯು, ಅಗತ್ಯ. ಆದರೆ ಅಂತಹ ಬೇನೆಗಳು ಸಮಾಜದಲ್ಲಿ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಜಾಣತನ, ಸಮಾಜವೇ ಇದನ್ನು ಅರಿತು ಸಾಧಿಸಬೇಕು. ಅಂತಹ ಅತ್ಯಗತ್ಯವಾದ ಮುಂಜಾಗ್ರತಾ ಕ್ರಮವು Super-Ego ಅಥವಾ ಸತ್-ಚೈತನ್ಯಾಂಶವನ್ನು ಶೈಶವದಿಂದಲೂ ಬೆಳೆಸಿ ಅಭಿವೃದ್ಧಿಸುವುದು, ಸಮಾಜದ ಅರಿತ ಹಿರಿಯರು ಮಾಡಲೇಬೇಕಾದ ಕರ್ತವ್ಯ.
ವಿದ್ಯಾಭ್ಯಾಸದ ತಳಹದಿಯೇ ಇದು, ಇದಿಲ್ಲದ ವಿದ್ಯಾಭ್ಯಾಸವು, ವಿದ್ಯೆಯ ಆಭಾಸವಾಗುತ್ತದೆ.