ಮನಮಂಥನ
೫. ಮನಸ್ಸಿನ ಚಟುವಟಿಕೆಗಳು
ಮನಸ್ಸಿನ ಚಟುವಟಿಕೆಗಳು ಯಾವ ರೀತಿಯಲ್ಲಿ ನಡೆಯುತ್ತವೆ ಎಂಬುದನ್ನು ಒಂದು ನಿದರ್ಶನದೊಂದಿಗೆ ತಿಳಿಯೋಣ. ಸ್ವಂತ ಅನುಭವದ ನಿದರ್ಶನವಾದರೆ ಓದುಗರಿಗೆ ನೇರವಾಗಿ ತಟ್ಟಬಹುದು.
ಆ ಅಧ್ಯಾಯವನ್ನು ಬರೆದು ಸಂಜೆಯ ಹೊತ್ತಿಗೆ ಪೂರೈಸಬೇಕು ಎಂದು ಬೆಳಿಗ್ಗೆ ಎದ್ದಾಗ ನಿರ್ಧರಿಸಿದೆ. ಡಿಟೆಕ್ಟಿವ್ ನಾವೆಲ್ಲನ್ನು ಹಿಂದಿನ ರಾತ್ರಿ ಓದಿ ಮುಗಿಸಿದ್ದೆ. ಹೊಸದು ಇನ್ನೂ ಸಿಕ್ಕಿರಲಿಲ್ಲ. ಹಾಗೂ ಈ ದಿನ ಪೂರ್ತಿ ರಜಾ, ಅಂದ ಮೇಲೆ ಬರೆದು ಮುಗಿಸಬೇಕು ಎನ್ನುವ ನಿರ್ಧಾರವನ್ನು ಮಾಡಿತು, ನನ್ನ ಮನಸ್ಸು.
ಬೆಳಗ್ಗೆ ಎದ್ದ ಮೇಲೆ, ಪ್ರಾತರ್ವಿಧಿಗಳನ್ನು ಮುಗಿಸಿದ ನಂತರ ತಿಂಡಿಯನ್ನು ಬೇಕಾದಷ್ಟು ತಿಂದು, ಕಾಫಿಯನ್ನು ಕುಡಿಯುವ ಅಭ್ಯಾಸ. ಬೇಕಾದ ತಿಂಡಿಯು ಸಿಗದೆ ಇರುವವರು, ಸಿಕ್ಕ ತಿಂಡಿಯನ್ನು ಬೇಕಾದಷ್ಟು ಮುಕ್ಕುತ್ತಾರೆ. ಆ ಗುಂಪಿನವ ನಾನು. ಆದರೆ ಈ ಬೆಳಗ್ಗೆ ಹೊಟ್ಟೆ ತುಂಬಾ ತಿಂದರೆ, ನಿದ್ರೆಯು ಬರುತ್ತದೆಯೇ ಹೊರತು, ಬರೆಯಲಾಗುವುದಿಲ್ಲ ಎಂದು ಅನುಭವದ ವಾಣಿ ಎಚ್ಚರಿಸಿತು. ಆದಕಾರಣ ಎರಡೇ ಪುಟ್ಟ ಇಡ್ಲಿಗಳನ್ನು ತಿಂದು ಕಾಫಿಯನ್ನು ಕುಡಿದು, ಮೇಜಿನ ಮುಂದೆ ಬರೆಯಲು ಕುಳಿತೆ.
ಈ ಅಧ್ಯಾಯದಲ್ಲಿ ಬರೆಯಬೇಕಾದ ವಿಷಯಗಳನ್ನು 'ಮನೋ- ನಂದನ'ದಲ್ಲಿ ಬರೆದಾಗಿದೆಯೇ? ಹಾಗಾಗಿದ್ದರೆ ಪುನಃ ಬರೆಯುವುದು ಪೆಚ್ಚುತನ ಎಂದೆನಿಸಿತು. 'ಮನೋನಂದನ'ದಲ್ಲಿ ಈ ವಿಷಯವನ್ನು ಕುರಿತು ಏನು ಬರೆದಿದ್ದೆನೋ, ಅದು ಭಗವಂತನಿಗೇ ಗೊತ್ತು. ನನಗನಕ ಅದರ ನೆನಪು ಇರಲಿಲ್ಲ. ಆದುದರಿಂದ ಆ ಪುಸ್ತಕವನ್ನು ಹುಡುಕಿ ತೆಗೆದು ಓದೋಣ ಎಂದುಕೊಂಡೆ. ಕುರ್ಚಿಯಿಂದ ಎದ್ದೆ, ಪುಸ್ತಕಗಳ ಕಪಾಟುಗಳ ಬಳಿಗೆ ಹೋದೆ; ಎಷ್ಟು ಹುಡುಕಿದರೂ ಆ ಹಾಳು ಪುಸ್ತಕದ ಪ್ರತಿಯು ಸಿಗಲೇ ಇಲ್ಲ. ಒಂದು ಪ್ರತಿಯನ್ನು ಹುಷಾರಾಗಿ ಮುಚ್ಚಿಟ್ಟಿದ್ದ ನೆನಪು ಸ್ಪಷ್ಟವಾಗಿತ್ತು. ಆದರೆ ಎಲ್ಲಿ ಮುಚ್ಚಿಟ್ಟಿದ್ದೆಎನ್ನುವುದು ಸ್ಮರಣೆಗೆ ಬರಲೇ ಇಲ್ಲ. ಉಳಿದ ಒಂದೇ ಪ್ರತಿಯನ್ನು ಯಾರಿಗೆ