೩೫೯
ಅವರುಗಳು ನಿರತರಾಗಿದ್ದರು. ಅವರುಗಳು ಯೋಗ ಸೂತ್ರಗಳಲ್ಲಿ : ಪುರಾಣಗಳಲ್ಲಿ; ಮತ್ತು ಉಪನಿಷತ್ತುಗಳಲ್ಲಿ ನುಡಿದ ವಿಶ್ಲೇಷಣೆಯು, ಮನೋವೈಜ್ಞಾನಿಕರು ಇಂದು ಸಾಧಿಸಿರುವ ಮಟ್ಟಕ್ಕಿಂತಲೂ ಏರಿದೆಯೇನೋ ಎನ್ನುವ ಯೋಚನೆಯು ಮೂಡಿತು. ಪಕ್ಕ ಪಕ್ಕದಲ್ಲಿವನ್ನು ಇಟ್ಟುಕೊಂಡು ವ್ಯಾಸಂಗವನ್ನು ಮಾಡಿದರೆ, ಅರಿವಿಗೆ ಅನುಕೂಲವಾಗಬಹುದು ಎಂದೆನಿಸಿತು. ಇವೆಲ್ಲವೂ ಕುತೂಹಲವನ್ನು ನನ್ನ ಮನಸ್ಸಿನಲ್ಲಿ ಕೆರಳಿಸಿದುವು.
ನನ್ನ ಜೀವನಕ್ಕೆ ಅತ್ಯಗತ್ಯವಾಗದೆ ಇರುವ ಜ್ಞಾನಾರ್ಜನೆಯು ಮತ್ತು ಕಲಿತ ಜ್ಞಾನವನ್ನು ಪ್ರಸಾರ ಮಾಡುವುದು ; ಇವೆರಡೂ ಒಂದು ರೀತಿಯಲ್ಲಿ ನಿಸ್ವಾರ್ಥಿ ಚಟುವಟಿಕೆಗಳು, ಜ್ಞಾನಾರ್ಜನೆಯನ್ನು ಕುತೂಹಲವು ನನ್ನ ಮನಸ್ಸಿನಲ್ಲಿ ಪ್ರಚೋದಿಸಿತು. ಅನುಕಂಪವು ಜ್ಞಾನಪ್ರಸಾರವನ್ನು ಮಾಡುವಂತೆ ನನ್ನ ಮನಸ್ಸನ್ನು ಪ್ರೇರೇಪಿಸಿತು.
ಅಂದರೆ ಪುಸ್ತಕವನ್ನು ಬರೆಯಬೇಕೆಂಬ ತೆವಲು ಹಿಡಿದುದಕ್ಕೆ ನಿಸ್ಪ್ಯಾರ್ಥಿಯಾದ ಮನಸ್ಸಿನ ಎರಡು ಪ್ರೇರಕಗಳೂ ಕಾರಣವಾದುವು. ಕುತೂಹಲದಿಂದ ಪ್ರಚೋದಿತವಾದ ಮನಸ್ಸು, ಜ್ಞಾನಾರ್ಜನೆಯನ್ನು ಪ್ರಪಂಚದ ಎಲ್ಲೆಡೆಗಳಿಂದಲೂ ದೊರೆತ ಪುಸ್ತಕ ಮತ್ತು ಲೇಖನಗಳಿಂದ ಸಾಧಿಸಿಕೊಂಡಿತು. ಅನುಕಂಪದಿಂದ ಪ್ರೇರಿತವಾದ ಮನಸ್ಸು ಕಲಿತುದುದನ್ನು, ನಮ್ಮ ಸುತ್ತುಮುತ್ತಲಿನ ಕನ್ನಡವನ್ನಾಡುವ ಸಾಮಾನ್ಯ ಮಂದಿಗೆ ಸುಲಭವಾಗಿ ತಿಳಿಯುವಂತೆ, ಸರಳವಾಗಿ ಬರೆಯಲು ಪ್ರೇರೇಪಿಸಿತು.
ಕುತೂಹಲದಿಂದ ಮಾನವನ ಮನಸ್ಸು ಪ್ರಚೋದಿತವಾದರೆ, ವಿಜ್ಞಾನದ ಸಹಸ್ರಾರು ಶಾಖೆಗಳಲ್ಲಿ ಪ್ರಗತಿಯುಂಟಾಗುತ್ತದೆ. ಹಾಗೂ Inter-disciplinary Contacts ಇಂದ ಹಿರಿದಾಗುತ್ತದೆ.
ಅನುಕಂಪವು ಮಾನವನ ಮನಸ್ಸನ್ನು ಪ್ರೇರೇಪಿಸಿದರೆ, ಕಲಾ ಪ್ರಕಾರಗಳು ಉಂಟಾಗುತ್ತವೆ. ಸಾಹಿತ್ಯ, ಚಿತ್ರಕಲೆ, ಶಿಲ್ಪ, ಸಂಗೀತ ಮುಂತಾದವುಗಳು ಸೃಷ್ಟಿಯಾಗುತ್ತವೆ.
ವಿಜ್ಞಾನವು ಹೆಚ್ಚಿದಂತೆಲ್ಲಾ ಸಮಸ್ಯೆಗಳೂ ವಿಪರಿಮಿತವಾಗುತ್ತವೆ. ಅವನ್ನು ಬಿಡಿಸುವ ಕುತೂಹಲವು ಮತ್ತೂ ಹೆಚ್ಚಾಗುತ್ತದೆ. ಇದರಿಂದ ಅತ್ಯಂತ ಖುಷಿಯಾಗಬಹುದು. ಆದರೆ ನೆಮ್ಮದಿಯು ಅಸಾಧ್ಯ.
ಕಲೆಗಳು ಎಲ್ಲ ಕಾಲದಲ್ಲೂ ಯಾವ ಹಂತದಲ್ಲೂ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ. ಮಾನವನ ಮನಸ್ಸು ನೆಮ್ಮದಿಯಿಂದಿರಬೇಕಾದರೆ, ನಿಸ್ವಾರ್ಥಿಯಾದ