ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬೦

ಮನಮಂಥನ

ಎರಡೂ ಚಟುವಟಿಕೆಗಳು ಸಮನ್ವಯಗೊಳ್ಳಬೇಕು. ಇಲ್ಲದೆ ಇದ್ದರೆ, ವಿಜ್ಞಾನದಲ್ಲಿಯೇ ಮುಳುಗಿದವರು ಮನಸ್ವಾಸ್ಥ್ಯವನ್ನು ಕಳೆದುಕೊಳ್ಳಬಹುದು. ಆದುದರಿಂದಲೋ ಏನೋ Absent-minded professor ಎನ್ನುವುದು.

ಮನಸ್ಸಿನ ಕಾರ್ಯಕ್ರಮಗಳು ; ಚಟುವಟಿಕೆಗಳು ; ಅವನ್ನು ಪ್ರೇರೇಪಿಸುವ ಕಾರಕಗಳು ; ಇವುಗಳನ್ನು ಸ್ಕೂಲವಾಗಿ ಅರಿತೆವು. ಮನೋವೈಜ್ಞಾನಿಕರ ಭಾಷೆಯನ್ನು, ನಮ್ಮ ಋಷಿಗಳು ನುಡಿದ ಭಾಷೆಯೊಂದಿಗೆ ಸಮನ್ವಯಿಸಲಾಯಿತು. ಸಂಪೂರ್ಣವಾಗಿ ಸ್ವಾರ್ಥಿಯಾದ, ಮತ್ತು ತುಸುಮಟ್ಟಿಗೆ ಮಾತ್ರ ಸ್ವಾರ್ಥಿಯಾದ, ಆದರೆ ಬಹಳಷ್ಟು ಮಟ್ಟಿಗೆ ನಿಸ್ವಾರ್ಥಿಯಾದ ಮನಸ್ಸಿನ ಚಟುವಟಿಕೆಗಳನ್ನು ತಿಳಿದೆವು. ಬಹಳಷ್ಟು ನಿಸ್ವಾರ್ಥಿಯಾದ ಚಟುವಟಿಕೆಗಳಿಗೆ ; ಕುತೂಹಲ ಮತ್ತು ಅನುಕಂಪಗಳು ಪ್ರೇರಕಗಳು : ಕುತೂಹಲದ ಕೆರಳುವಿಕೆಯಿಂದ ವಿಜ್ಞಾನ ; ಅನುಕಂಪದಿಂದ ಕಲಾ ರೂಪಗಳು, ಹೊರಸೂಸುತ್ತವೆ ಎಂಬುದನ್ನು ಅರಿತೆವು.

ಮನೋವೈಜ್ಞಾನಿಕ ಭಾಷೆಯಲ್ಲಿ ; ಮುಖ್ಯವಾದ ಮೂರು ಅಂಶಗಳಿರುತ್ತವೆ. ಸನಾತನವಾದ, ಹಾಗೂ ಪುರಾತನವಾದ Id ಎಂಬ ಅಂಶವು ಎಲ್ಲ ಜೀವಂತ ಪ್ರಾಣಿಗಳಲ್ಲಿಯೂ ಇರುತ್ತದೆ. ಅತ್ಯಂತ ಪ್ರಬಲವಾದ ಈ ಶಕ್ತಿಯು, ಮನಸ್ಸು ಗೂಡು ಮಾಡಿಕೊಂಡಿರುವ ದೇಹದ ಅಸ್ತಿತ್ವನ್ನು ಸ್ಥಿರವನ್ನಾಗಿ ಮಾಡಲು, ಶಾಶ್ವತವನ್ನಾಗಿ ಮಾಡಲು, ಸದಾ ಪ್ರಯತ್ನಿಸುತ್ತಿರುತ್ತದೆ. ಇಂತಹ ದೇಹ ರಕ್ಷಕವಾದ ಮನಸ್ಸಿನ ಅಂಶವು ಇಂತಹ ಪ್ರಯತ್ನಗಳಿಂದ ಸಂತೋಷವನ್ನು ಸುಖವನ್ನು ಪಡೆಯುತ್ತದೆ. ದೇಹವು ಸಂತೋಷವನ್ನು ಅನುಭವಿಸುವುದು, ಅದನ್ನು ನಡೆಸುವ ಮನಸ್ಸಿನ ಅಂಶದಿಂದ ತಾನೇ? ಆದುದರಿಂದಲೇ ದೇಹ ಮತ್ತು ಅದಕ್ಕೆ ಅನ್ವಯವಾಗುವ ಮನಸ್ಸಿನ ಅಂಶವನ್ನೂ ಕೂಡಿಸಿ, ದೇಹ ಮನಸ್ಸಿನಾಂಶದ ಒಕ್ಕೂಟ ಎನ್ನುವುದು.

ವೈಜ್ಞಾನಿಕ ಭಾಷೆಯಲ್ಲಿ Ego-ನಾನು ಎಂಬುದು ಮನಸ್ಸಿನಲ್ಲಿ ಅಂಕುರಿಸಿ, ಬೇರೂರಿ ದೃಢಮರವಾಗುತ್ತದೆ. ಇದೇ ಲೌಕಿಕ ಬಾಳಿನಲ್ಲಿ ತಲೆಯೆತ್ತಿ ನಿಂತು ನಡೆಯಲು ಉಪಯುಕ್ತ ಸಾಧನವಾಗುತ್ತದೆ. ಸ್ವತಂತ್ರವಾಗಲು, ಸ್ವಾವಲಂಬಿಯಾಗಲು, ನೆರವಾಗುತ್ತದೆ. ಜೀವನದುದ್ದಕ್ಕೂ ಇದರ ಬೆಳವಣಿಗೆಯನ್ನು ಪ್ರತ್ಯಕ್ಷವಾಗಿ ಕಾಣಬಹುದು. ಬಾಲ್ಯದಲ್ಲಿ ಪರಾವಲಂಬಿ, ತಾಯ್ತಂದೆಯರು ಅಥವಾ ಅವರ ಪ್ರತಿರೂಪಗಳು ಬೆಂಬಲವಾಗಿದ್ದರೆ, ಬಾಳಿ ಜೀವನವನ್ನು ಮುಂದುವರಿಸಲು ಸಾಧ್ಯ. ಹಾಗಾಗದಿದ್ದರೆ ಅನಾಥಾಲಯ. ಯೌವನದಲ್ಲಿ ಸ್ವಾವಲಂಬಿಯಾಗಲು Ego ಪ್ರಯತ್ನವನ್ನು ಪಡುತ್ತದೆ. ಲೋಕಾನುಭವವನ್ನೂ ಲೋಕದ ಜ್ಞಾನವನ್ನೂ