೩೬೧
ಪಡೆದುಕೊಳ್ಳಲು ಆಸಕ್ತಿಯನ್ನು ಹೊಂದುತ್ತದೆ. ಇಂತಹ ಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ಪರಾವಲಂಬಿಯಾಗಿರಬೇಕು. ವಯಸ್ಕರಾಗುವ ವೇಳೆಗೆ ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳತೊಡಗಿದಾಗ ಸಂಪೂರ್ಣವಾಗಿ Ego ಸ್ವಾವಲಂಬಿಯಾಗಿರುತ್ತದೆ. ಈ ವಯಸ್ಸಿನಲ್ಲಿ Ego 'ತಾನು' ಎಂದುಕೊಳ್ಳುವ ಕೋಟೆಯನ್ನು ಭದ್ರಮಾಡಿಕೊಳ್ಳತ್ತದೆ. ಮುಪ್ಪಿನಲ್ಲಿ Ego ಕಲ್ಪನೆಯು ಸ್ವಲ್ಪ ಮಟ್ಟಿಗೆ ಸಡಿಲವಾಗತೊಡಗುತ್ತದೆ. ಈ ಕಲ್ಪನೆಯಿಂದಲೇ ಬಾಳಿನಲ್ಲಿ ಕಷ್ಟನಷ್ಟಗಳನ್ನು ಅನುಭವಿಸಿದೆನೇನೋ ಎನ್ನುವ ಯೋಚನೆಯು ಕಾಡಹತ್ತುತ್ತದೆ.
ಮನಸ್ಸಿನಲ್ಲಿ Super-Ego ಎಂಬ ಕಲ್ಪನೆಯು ಬಾಲ್ಯದಿಂದಲೂ ರೂಢಿಸಲ್ಪಡತ್ತದೆ. ಇದು ಸುದೃಢವಾಗಿದ್ದರೆ, ಸಮಾಜದೊಂದಿಗೆ ಸಹಕರಿಸಿ ಸಾಕಷ್ಟು ಲಕ್ಷಣವಾದ ಬಾಳನ್ನು ನಡೆಸುತ್ತಾನೆ. ಸುದೃಢವಾಗದೆ ಇದ್ದರೆ, ಸಮಾಜ ವಿಚ್ಛಿದ್ರಕ ಕಾವ್ಯಗಳನ್ನು ಮಾಡಿಯಾದರೂ ತನ್ನ ಸ್ಟೇಚ್ಛೆಗಳನ್ನು ಪೂರೈಸಿಕೊಳ್ಳುತ್ತಾನೆ.
Id ಮತ್ತು Super-Egoಗಳು ಪರಸ್ಪರ ವಿರೋಧ ಭಾವವನ್ನು ಹೊಂದಿರುತ್ತವೆ. ID ದೇಹದ ಕಾವ್ಯಗಳತ್ತ Ego ವನ್ನು ಬರಸೆಳೆದು, ನಿನ್ನ ಸುಖವನ್ನು ನೀನು ಸಾಧಿಸಿಕೋ, ಸಮಾಜಕ್ಕೆ ಗೊತ್ತಾಗದಂತೆ ಸಾಧಿಸಿಕೊಂಡರೂ ಆಯಿತು. ಸಮಾಜವನ್ನು ಬಡಿದು ನಿನ್ನ ಸುಖವನ್ನು ಭದ್ರ ಮಾಡಿದರೂ ಆಯಿತು ಎಂದು ಪ್ರಬಲವಾಗಿ ಕಾಡುತ್ತದೆ.
Super-Ego ಅದರ ವಿರುದ್ಧ ನಿನ್ನ ಸುಖವನ್ನು ಒತ್ತಟ್ಟಿಗಿಡು : ಸಮಾಜದ ನೆರವಿಗೆ ಭುಜ ಕೊಟ್ಟು ಪ್ರಯತ್ನಿಸು. ಅದರಿಂದ ಹೆಚ್ಚು ಸುಖ ದೊರೆಯುತ್ತದೆ ಎಂದು ಪ್ರಬಲವಾಗಿ ಪ್ರಚೋದಿಸುತ್ತದೆ.
ಪ್ರಬಲವಾದ ಈ ಎರಡೂ ಶಕ್ತಿಗಳು Ego ವನ್ನು ಅತ್ತಿತ್ತ ಸೆಳೆಯುತ್ತವೆ. ಎರಡರಲ್ಲಿ ಯಾವ ಶಕ್ತಿಗೆ ಮಣಿದರೂ, ಆ ಶಕ್ತಿಗೆ ತೃಪ್ತಿಯಾಗುತ್ತದೆ. ಮತ್ತೊಂದು ಕುಕ್ಕತೊಡಗುತ್ತದೆ. ಇವೆರಡೂ ಶಕ್ತಿಗಳನ್ನು ಇತಿ-ಮಿತಿಯಲ್ಲಿ Ego ಸಮತೋಲನ ಮಾಡಿದರೆ, ಆಗ ತಕ್ಕಮಟ್ಟಿಗೆ ಸಮಾಧಾನವಿರುತ್ತದೆ. Ego ಗೆ ನೆಮ್ಮದಿ ಇರುತ್ತದೆ.
ಮನಸ್ಸನ್ನು ನಡಸುವ ಈ ಮೂರು ಶಕ್ತಿಗಳನ್ನು, Id-Ego, Super-Ego ಗಳನ್ನು ನಮ್ಮ ಪೂರ್ವಿಕರು ತಮೋಗುಣ, ರಜೋಗುಣ, ಸತ್ವಗುಣ ಎಂದು ವರ್ಣಿಸುತ್ತಿದ್ದರು. ಸತ್ವಗುಣವು ಒಳ್ಳೆಯದು, ಉತ್ತಮವಾದುದು. ಅದೊಂದೇ ಇದ್ದರೆ, ಮಿಕ್ಕೆರಡೂ ನಾಶವಾದರೆ ಚೆನ್ನು ಎಂದೆನಿಸಬಹುದು. ಆದರೆ ಉಳಿದ ಎರಡೂ ಗುಣಗಳು ಇರದಿದ್ದರೆ, ಸತ್ವಗುಣದ ಪ್ರಭಾವವು ಯಾತರ ಮೇಲೆ ಬೀರಬೇಕು? ಸತ್ವಗುಣವಿರುವುದಾದರೂ ತಿಳಿಯುವುದು ಹೇಗೆ ? ಆದುದರಿಂದ