ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆಸೆ-ಮೂಲ ಪ್ರೇರಕ
೩೬೭

ಆದರೆ ಕಾಲವು ತೀವ್ರವಾಗಿ ಬದಲಾಯಿಸಿರುತ್ತದೆ. ಅದರೊಂದಿಗೆ ಜೀವನದ ಮೌಲ್ಯಗಳೂ ಬದಲಾಯಿಸುತ್ತವೆ. ಹಿರಿಯರು ಅತ್ಯಮೂಲ್ಯ ಎಂದುಕೊಂಡಿದ್ದುವು, ಕಿರಿಯರ ಸಮಾಜದಲ್ಲಿ ನಿಕೃಷ್ಟವಾಗಿ ಕಾಣಿಸಬಹುದು. ಆದಕಾರಣ ಹಿರಿಯರು ಹೇಳಿದುದನ್ನು ಕಿರಿಯರು ಸೌಜನ್ಯದಿಂದ ಕಿವಿಗೆ ಹಾಕಿಕೊಳ್ಳುತ್ತಾರೆಯೇ ವಿನಹಾ ಒಪ್ಪುವುದೂ ಇಲ್ಲ. ಕಾರ್ಯರೂಪಕ್ಕೆ ತರುವುದೂ ಇಲ್ಲ. ಇದರಿಂದಾಗಿ ಹಿರಿಯರ ಮನಸ್ಸಿಗೆ ನಿರಾಶೆಯಾಗುತ್ತದೆ. ಸಲ್ಲದ ಮಾತುಗಳನ್ನು ಕಿರಿಯರಿಗೆ ಅನ್ನುತ್ತಾರೆ. ಎದುರು ಮಾತನ್ನು ಆಡಿ ನೇರವಾಗಿ ವಿರೋಧಿಸದೆ ಇದ್ದರೂ, ಹಿರಿಯರಾಡಿದ ಮಾತುಗಳು ಕಿರಿಯರ ಮನಸ್ಸಿನಲ್ಲಿ ಅಸಮಾಧಾನವನ್ನು ಮೂಡಿಸುತ್ತದೆ. ಅಸಮಾಧಾನವು ಆತಂಕವಾಗುವುದು ಬಲು ಸುಲಭ:- ಹಿರಿಯರಿಂದ ಆಸ್ತಿಯನ್ನು ಪಡೆಯುವಂತಿದ್ದರೆ – ಹಿರಿಯರ ಮನಸ್ಸಿನಲ್ಲಿಯೂ ನಿರಾಸೆಯಿಂದ, ಬೇಸರವು ಮೂಡುತ್ತದೆ.

ಮುದುಕರಲ್ಲಿ ಮಾನಸಿಕ ತಳಮಳವು, ಈ ಕಾರಣದಿಂದಲೂ ಉಂಟಾಗುತ್ತದೆ ಏರುಪೇರು ವ್ಯವಹಾರಗಳನ್ನು ಮುದುಕರು ಕೆಲವರು ಮಾಡುವುದು, ಇಂತಹ ನಿರಾಸೆಯಿಂದ ಮಾನಸಿಕ ಏರುಪೇರು, ಹೇಳಿದಂತೆ ಕೇಳದಿದ್ದ ಕಿರಿಯರ ಮೇಲೆ ಅವ್ಯಕ್ತವಾಗಿ ಸೇಡು ತೀರಿಸಿಕೊಳ್ಳುವ ಮಾರ್ಗ

ಕಿರಿಯರು ಕೂಡ ಆತಂಕದಿಂದ ನರಳುತ್ತಾರೆ. ಹಿರಿಯರನ್ನು ಮೆಚ್ಚಿಸಬೇಕು ಎನ್ನುವ ಆಸೆ. ಆದರೆ ಬಾಳಿನಲ್ಲಿ ಹಾಗೆ ಮಾಡಿದರೆ ಕಷ್ಟನಷ್ಟ ಪರಿಹರಿಸಲು ದುಸ್ಸಾಧ್ಯವಾದ ಈ ಸಮಸ್ಯೆಯಿಂದ ಕಿರಿಯರು ಮಾನಸಿಕ ಬೇನೆಗಳಿಗೆ ತುತ್ತಾಗುತ್ತಾರೆ.

ಇದೇ ರೀತಿಯಲ್ಲಿ ಈಡೇರಿಸಲಾಗದ ಸುಪ್ತ ಆಸೆಗಳು, ಸಂಸಾರದಲ್ಲಿನ ಒಬ್ಬರಲ್ಲ, ಇನ್ನೊಬ್ಬರಲ್ಲಿ ಮಾನಸಿಕ ಬೇನೆಗಳನ್ನು ಉಂಟು ಮಾಡುತ್ತದೆ.

ಮೂಡಿ ಬಂದ ಆಸೆಗಳನ್ನೆಲ್ಲಾ ಯಥಾರ್ಥವಾಗಿ ಪೂರೈಸಲು ಯಾರಿಗೂ ಸಾಧ್ಯವಿಲ್ಲ. ಅಂದರೆ ಇತರ ವಿಧಾನಗಳಲ್ಲಿ ಆಸೆಗಳನ್ನು ಪೂರೈಸಲು ಸಾಧ್ಯವೇ? ಸಾಧ್ಯವಾದರೆ ಅವುಗಳಾವುವು ಎಂಬುದನ್ನು ಸ್ಕೂಲವಾಗಿ ತಿಳಿಯೋಣ.

ಆಸೆಗಳ ಪೂರೈಕೆ ಸುಂದರ ಸ್ತ್ರೀಯನ್ನು, ಚಿತ್ರದಲ್ಲಿ ನೋಡಿ ಮೆಚ್ಚಿಗೊಂಡು, ಆಕೆಯನ್ನು ಮದುವೆಯಾಗಬೇಕು ಎಂದು ಆಸೆಪಡುತ್ತಾನೆ. ತೀವ್ರವಾದ ಆಸೆ ಎಂದಿಟ್ಟುಕೊಳ್ಳೋಣ. ಆಗ ಅವ ಏನು ಮಾಡುತ್ತಾನೆ ? ೧. ಚಿತ್ರದ ಮೂಲ ವ್ಯಕ್ತಿಯಾರು ಎಂಬುದನ್ನು ಪತ್ತೆ ಹಚ್ಚಿ ; ನಂತರ