ಆಸೆಯು ನಿರಾಸೆಯಾದಾಗ ಮನಸ್ಸಿನ ತುಂಬಾ ಜುಗುಪ್ಪೆಯು ತುಂಬಿಕೊಳ್ಳುತ್ತದೆ. ಆಗ ಜ್ಯೋತಿಷ್ಯನ ನುಡಿಯು ಸ್ವಲ್ಪ ಮಟ್ಟಿಗಾದರೂ ಸಮಾಧಾನವನ್ನು ನೀಡುತ್ತದೆ. ಏಕೆ? 'ನಾನು ನನ್ನ ಪ್ರಯತ್ನಗಳು' ಎಂದು ತುಸು ಹೆಮ್ಮೆ ಪಡುತ್ತಿದ್ದವನ Ego ಮೆರೆಯುತ್ತಿತ್ತು. 'ಗ್ರಹಗಳ ಕಾಟದ ಮುಂದೆ ನೀನು ಯಾವ ಲೆಕ್ಕಕ್ಕೆ' ಎಂಬ ಅರಿವನ್ನು ಜ್ಯೋತಿಷ್ಯನ ನುಡಿಯು ಮೂಡಿಸಿತ್ತು. ಆಗ ನಾನು, ನನ್ನ ಪ್ರಯತ್ನ ಎಂದು ಮೆರೆದಿದ್ದ Ego ಕರಗತೊಡಗಿತ್ತು, ಕೊರಗಿನಿಂದ; ನಿಸ್ಸಹಾಯಕತೆಯಿಂದ, Ego ಅಳಿಯಲಾರಂಭಿಸಿದರೆ, ಲೌಕಿಕವಾದ ಆಸೆಗಳು, Id ಇನ ಕಾಮನೆಗಳು, ಎಲ್ಲವೂ ಯಾವುದನ್ನು ಜಗ್ಗಾಡಿಸಬೇಕು? Ego ದೃಢವಾಗಿದ್ದಾಗ Id ಜಗ್ಗಾಡಿಸುತ್ತದೆ. Ego ಸಡಿಲಗೊಂಡಾಗ Id ಕೂಡ ತೆಪ್ಪಗಾಗುತ್ತದೆ, ತಾತ್ಕಾಲಿಕವಾಗಿಯಾದರೂ
ಆಸೆಯು ನಿರಾಸೆಯಾದಾಗ, ಮನಸ್ಸಿನಲ್ಲಿ ಮುತ್ತಿಕೊಳ್ಳುವ ಬೇಸರವು ಖಿನ್ನತೆಯನ್ನು ಉಂಟು ಮಾಡುತ್ತದೆ. ದುಃಖವನ್ನುಂಟುಮಾಡುತ್ತದೆ. ನಮ್ಮ ನಾಡಿನ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಬೇರೂರಿ ಬಂದಿರುವ ಜಾತಕಗಳಲ್ಲಿ ನಂಬಿಕೆ ಗ್ರಹಗತಿಗಳಲ್ಲಿ ವಿಶ್ವಾಸ ; ಜನ್ಮಜನ್ಮಾಂತರದ ಕರ್ಮದ ಕಲ್ಪನೆ, ಇವೆಲ್ಲವೂ ನಿರಾಸೆಯಿಂದಾಗುವ ಖಿನ್ನತೆಯನ್ನು ಸ್ವಲ್ಪಮಟ್ಟಿಗೆ ಶಮನ ಮಾಡುತ್ತವೆ. ಆದ ಕಾರಣ ವೈಯಕ್ತಿಕವಾಗಿ ; ಲೌಕಿಕ ಬಾಳಿನಲ್ಲಿ ಉಪಯುಕ್ತವಾಗಿವೆ. ಮಾನಸಿಕ ತಳಮಳವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡುತ್ತದೆ.
ಭವಿಷ್ಯ ನುಡಿಯುವವರಿಂದ, ಈ ರೀತಿಯಲ್ಲಿ ಒಳ್ಳೆಯ ಫಲಿತಾಂಶವು ದೊರೆತರೆ ; ಮತ್ತೆ ಕೆಲವು ವೇಳೆ ಕೆಟ್ಟ ಪರಿಣಾಮವೂ ಆಗುವುದುಂಟು. 'ಇನ್ನು ಮೂರು ವರ್ಷಗಳ ನಂತರ ಗಂಡಾಂತರವಿದೆ. ಆದಕಾರಣ ಶಾಂತಿ ಮಾಡಿಸಿ' ಎಂದು ಭವಿಷ್ಯವನ್ನು ಹೇಳಿದರು ಅನ್ನಿ. ಇಂತಹ ಭವಿಷ್ಯದ ನುಡಿಗಳು ಹಲವಾರು ಅರ್ಥಗಳನ್ನು ನೀಡಬಲ್ಲವು. ಆದರೆ ಕೇಳಿದವನು ವಿಪರೀತಾರ್ಥವನ್ನು ಮಾಡಿಕೊಳ್ಳುತ್ತಾನೆ. ಇಂತಹ ಪ್ರೇರಕಗಳಿಂದ ಕೆಲವರಿಗೆ ಆತಂಕವು ಅತ್ಯಧಿಕವಾಗಿ, ಮಾನಸಿಕ ಸ್ವಾಸ್ಥ್ಯವು ಕೆಡುತ್ತದೆ. ಈ ಕಾರಣಗಳಿಂದಾಗಿ, ಆತಂಕಪಡುತ್ತಿರುವ ರೋಗಿಗಳನ್ನು ವೈದ್ಯರು ಪರೀಕ್ಷಿಸುವ ಮುನ್ನ ಯಾರಿಗಾದರೂ ಜಾತಕವನ್ನು ತೋರಿಸಿದ್ದೀರಾ? ಅಂಗೈ ತೋರಿಸಿ ಭವಿಷ್ಯವನ್ನು ಕೇಳಿದ್ದೀರಾ' ; ಎಂದು ಕೇಳುತ್ತಾರೆ. ರೋಗಿಯನ್ನು ಪರಿಹಾಸ್ಯ ಮಡುವುದಕ್ಕೆಂದು ಇಂತಹ ಪ್ರಶ್ನೆಗಳನ್ನು ವೈದ್ಯರುಗಳು ಕೇಳುವುದಿಲ್ಲ. ಯಥಾರ್ಥವನ್ನು ತಿಳಿದುಕೊಳ್ಳುವುದಕ್ಕಾಗಿ ಕೇಳುತ್ತಾರೆ.
ನಿರಾಸೆಯು ಅತ್ಯಧಿಕವಾದಾಗ, ಮುಂದೆಂದೂ ಈ ಪರಿಸ್ಥಿತಿಯು