ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೦

ಮನಮಂಥನ

ತರುಣಿಯರಿಗೆಲ್ಲಾ ಇದ್ದೇ ಇರುತ್ತದೆ. ಆದರೆ ಉಮಾಕುಮಾರಿಗೆ, ಆತಂಕವು ಉಲ್ಬಣಗೊಂಡು, ಶ್ವಾಸಕೋಶಗಳ ಮೇಲೆ ಏಕೆ ವಕ್ರಿಸಿತು ? ವಿರಳವಾಗಿ ಹೀಗೆ ಆಗುತ್ತದೆ, ದಿಟ. ಆದರೆ ಆಗುವುದಾದರೂ ಏಕೆ?

ಆದರದಿಂದ ಮಗಳನ್ನು ತಂದೆಯು ಬೆಳೆಸಿದ್ದ. ಆದರೆ ಅವನದು ಮೆದು ಸ್ವಭಾವ. ಮನೆಯಲ್ಲಿ ಜಬರ್ದಸ್ತಿ ಮಾಡುವ ಜಾಯಮಾನವಲ್ಲ. ತಾಯಿಯು ಹಳ್ಳಿ ಕಡೆಯ ಪೆದ್ದು ಪೆದ್ದಾದುದರಿಂದಲೇ ಮೊಂಡು ಹಿಡಿಯುವ ಹಠ ಸಾಧಿಸುವ ಚಂಡಿ ಸ್ವಭಾವ, ಆಕೆಯದೇ ಮನೆಯಲ್ಲಿ ಮೇಲುಗೈ. ಮಗಳು ಎನ್ನುವ ಹುಟ್ಟು ಆದರವು ಇದ್ದರೂ, ನಡವಳಿಕೆಯಲ್ಲಿ ತಾತ್ಸಾರದ ಭಾವನೆಯಿತ್ತು.

'ನಿಮ್ಮಪ್ಪನ ಹಾಗೆಯೇ ಕಪ್ಪು ಕಪ್ಪಾಗಿದ್ದೆ. ನನ್ನನ್ನಾದರೂ ಹೋತುಕೋ ಬಾರದಾಗಿತ್ತೆ ?ಆಗ ಒಳ್ಳೆಯ ಗಂಡ ಸುಲಭವಾಗಿ ಸಿಗುತ್ತಿದ್ದ' ಎಂದು ಆಗಿಂದಾಗ್ಗೆ ಮೂದಲಿಸುತ್ತಲೇ ಇದ್ದಳು. ಬಾಲ್ಯದಲ್ಲಿ ಎಣ್ಣೆ ನೀರು ಹಾಕಿಸಿಕೊಂಡಾಗಲೂ ಉಮಾಕುಮಾರಿಯು ಈ ಮಾತುಗಳನ್ನು ಕೇಳುತ್ತಿದ್ದಳು. ಬೆಳೆದ ಮೇಲೆ ಅಪ್ಪ ನೊಡನೆ ಕಾಲೇಜು ಪಾಠಗಳ ವಿಷಯದಲ್ಲಿ ಸರಸ ಸಂಭಾಷಣೆ ಮಾಡಿದರನಕ ತಾಯಿಯು ಅನ್ನುವುದೂ ಹೆಚ್ಚಾಗುತ್ತಿತ್ತು. 'ನೀನ್ಯಾಕೆ ಮತ್ತೆ ಅಪ್ಪನ್ನ ಮದುವೆ ಯಾದೆ ? ನೀನೇನೂ ನನ್ನ ಗಂಡನ್ನ ಹುಡುಕಬೇಡ, ನಾನು ಮದುವೆಯೇ ಆಗುಲ್ಲ. ನನ್ನ ಜೀವನ ನಾನು ಸಂಪಾದಿಸಿಕೊಂಡು ನನ್ನ ಪಾಡಿಗೆ ನಾನಿರ್ತಿನಿ. ನೀನೇನೂ ನನ್ನ ಸಂರಕ್ಷಣೆ ಮಾಡಬೇಕಾಗಿಲ್ಲ' ಎಂದೊಮ್ಮೆ ಅಮ್ಮನ ಮೇಲೆ ಉಮಾಕುಮಾರಿಯು ರೇಗಿ ಬಿದ್ದಿದ್ದಳು. ಮನೆಯ ಮಗ, ಇವಳ ತಮ್ಮ ತಾಯಿಯಂತೆ ಬೆಳ್ಳಗಿದ್ದುದು ಬಾಲ್ಯದಿಂದಲೂ ಉಮಾಕುಮಾರಿಯ ಹೊಟ್ಟೆಯನ್ನು ಉರಿಸುತ್ತಿತ್ತು. ಹುಟ್ಟಿ ಬೆಳೆದ ಮನೆಯ ವಾತಾವರಣ ಈ ತೆರನಾದುದು.

ಶಾಲೆಯಲ್ಲಿ ಕಲಿಯುವಾಗ ಜತೆಗಾರ್ತಿಯರು ಕಲೆಯುತ್ತಾರೆ. ಮೂರುನಾಲ್ಕು ಹುಡುಗಿಯರು ಗುಂಪು ಕಟ್ಟಿಕೊಳ್ಳುವುದೂ ಸ್ವಾಭಾವಿಕ. ಗೆಳೆತನವು ಈ ಗುಂಪಿನಲ್ಲಿ ಅತಿಯಾಗಿರುತ್ತದೆ. ವಯನ್ನೂ ಅಂತದೇ, ಉಮಾಕುಮಾರಿಯ ಗುಂಪಿನಲ್ಲಿದ್ದ ಇಬ್ಬರು ಹುಡುಗಿಯರು ಗಂಡುಬೀರಿಯರು, Facts of life ಕುರಿತು ಲಕ್ಷಣವಾಗಿ ಮಾತನಾಡಬಲ್ಲರು. ಆಡಿದುದನ್ನು ಮಾಡಿತೋರಿಸುವ ಬಿಚ್ಚೆದೆಯರು. ಮನೆಯಲ್ಲಿ ಅಮ್ಮನಿಂದ ತಿರಸ್ಕೃತವಾದುದರಿಂದಲೋ ಏನೋ ಉಮಾಕುಮಾರಿಗೆ ಗುಂಪಿನಲ್ಲಿ ಹೆಚ್ಚು ಒಲವು ಮೂಡಿತು. ಆದರೆ ಹುಟ್ಟುಗುಣ, ಮನೆಯ ಶಿಸ್ತು, ಉಮಾಕುಮಾರಿಯನ್ನು ಬಿಗಿಯಾದ ಹತೋಟಿಯಲ್ಲಿಟ್ಟಿತು. ಇಬ್ಬರು ಗೆಳತಿಯರು ಹದಿನೈದು ಹದಿನಾರರ ವೇಳೆಗೆ ಮೋಜು ಬಾಳನ್ನು