ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆಸೆಯು ನಿರಾಸೆಯಾದರೆ
೩೭೩

ಕೊರಗನ್ನು ಅದುಮಿಟ್ಟು, ಸಮಾಜದಲ್ಲಿ ಎಂದಿನಂತೆ ನಡೆದುಕೊಳ್ಳುವವರು ಇದ್ದಾರೆ. ಇಂತಹವರಲ್ಲಿ ಕೆಲವರು ಮುಂದೆ ಮಾನಸಿಕ ಸ್ವಾಸ್ಥ್ಯವನ್ನು ಕಳೆದು ಕೊಂಡು, ನಡವಳಿಕೆಯಲ್ಲಿ ವೈಪರೀತ್ಯವನ್ನು ತೋರಿಸುತ್ತಾರೆ. ಇತರರನ್ನು ವಿನಾಕಾರಣ ಕೊರಗಿಸಿ, ಆ ಮೂಲಕ ಸ್ವಲ್ಪ ಸಮಾಧಾನವನ್ನು ಪಡೆಯುತ್ತಾರೆ.

ಕೊರಗು ಅತ್ಯುಗ್ರವಾದಾಗ, ಸತ್ತ ಮಗುವನ್ನು ಬದುಕಿಸಿಕೊಡು ; 'ನೀನು ಭಗವಂತನಂತೆ, ಬುದ್ಧನಂತೆ' ಎಂದು ಕೇಳಿದ ಕಿಸಾಗೌತಮಿಯ ತರಹ ; ಮನಸ್ಸಿನ ಸತ್-ಚೈತನ್ಯಾಂಶವು ಅರಳಿ, Ego ವುಕರಗಿ; ನೆಮ್ಮದಿಯು ದೊರಕಬಹುದು. ಬಹುಕಾಲ ತಪಸ್ಸು ಮಾಡಿ ಋಷಿಗಳು ಯಾವ ನೆಮ್ಮದಿಯನ್ನು ಅನುಭವಿಸುತ್ತಾರೋ, ಅಂತಹ ಅವಿನಾಶಿಯಾದ ನೆಮ್ಮದಿಯು ಅತ್ಯುಗ್ರವಾದ ಕೊರಗಿನಿಂದ, ವಿರಳವಾಗಿಯಾದರೂ ಯೋಗ್ಯತೆಯಿದ್ದ ಕೆಲವರಲ್ಲಿ ಉಂಟಾಗಬಹುದು.

ಅತಿ ತೀವ್ರವಾದ ಕೊರಗಿಗೆ, ಮಿತಿ ಇರುವುದಿಲ್ಲ. ಎಲ್ಲೆಗಳಿರುವುದಿಲ್ಲ. ಬ್ರಹ್ಮಾಂಡದ ಮೂಲ ವಸ್ತುವನ್ನೂ ಮಿತಿ ಇಲ್ಲದುದು, ಎಲ್ಲೆ ಇಲ್ಲದುದು, ಎಂದು ತಿಳಿದ ಅನುಭಾವಿಗಳು ವರ್ಣಿಸುತ್ತಾರೆ. ಸಮಾನ ಗುಣಗಳಿರುವುದರಿಂದ, ತೀವ್ರವಾದ ಕೊರಗು, ಮಾತು ಮತ್ತು ಮನಸ್ಸಿಗೆ ಸಿಗದ, ನೆಮ್ಮದಿಯನ್ನು ನೀಡಬಹುದು. ಎಂದು ನಿಸ್ಸಂಶಯವಾಗಿ ನಂಬಬಹುದು.

ಅತ್ಯಂತ ನಿರಾಸೆಯಾಗಿ, ಕೊರಗು ಅತಿಯಾದಾಗ, Egoವು ಅಳಿಯತೊಡಗುತ್ತದೆ. ಅಂದಮೇಲೆ Id ಇನ ಕಾಮನೆಗಳು ತಾವಾಗಿಯೇ ಅಳಿಸಿ ಹೋಗುತ್ತವೆ. ಪಶುಗಳಲ್ಲಿ Id ಇನ ಪ್ರಾಬಲ್ಯವು ಅತ್ಯಧಿಕ. ತಾನು ಎನ್ನುವ Ego ಇರುತ್ತದೆ. ತನ್ನದು, ತನ್ನ ಸಂಸಾರ ಎಂಬ ಕಲ್ಪನೆಗಳು ಕಾಮೋದ್ರೇಕವಾದಾಗ, ತಾತ್ಕಾಲಿಕವಾಗಿರುತ್ತದೆ. Super-Ego ಅಂಶವು ಹಿಂಡು ಜೀವನವನ್ನು ನಡೆಸುವ ಕಾಡು ಪ್ರಾಣಿಗಳಲ್ಲಿರುತ್ತದೆ. ಪ್ರಾಣಿಗಳಲ್ಲಿ ಅಳುವು ಅಥವಾ ನಗುವು ಕಾಣಬರುವುದಿಲ್ಲ. ಮುವೂ ಇರುವುದಿಲ್ಲ. ಏಕೆಂದರೆ, ಮುಪ್ಪು ಮೂಡುವ ಮುನ್ನ ಬಲವು ಕುಗ್ಗಿದಾಗ, ಹಿಂಡಿನ ಹೋರಿಗಳು ಅವುಗಳೊಂದಿಗೆ ಹೋರಾಡಿ, ಮುಗಿಸಿ ಬಿಡುತ್ತದೆ. ಅತ್ಯುಗ್ರ ಕೊರಗು ಎನ್ನುವುದು ಪ್ರಾಣಿಗಳಲ್ಲಿ ಉಂಟಾಗುವುದಿಲ್ಲ. ಮನಸ್ಸು ಎಂಬುದು ಮನುಷ್ಯರಲ್ಲಿ ಹೊರವಾಗಿ ಬೆಳೆದಿರುವುದರಿಂದ Id ಶಕ್ತಿಯ ವಿರುದ್ಧ, Super-Ego ಬೆಳೆದು ಬಂದಿದೆ. Ego ಕಲ್ಪನೆಯು, ತಾನು, ತನ್ನ ಸಂಸಾರ, ತನ್ನ ಊರು, ತನ್ನ ದೇಶ ಇತ್ಯಾದಿ ಅತಿ ವಿಶಾಲವಾಗುತ್ತಿದೆ. ಹೀಗಾಗಿರುವುದರಿಂದ, Id ಇನ ಪ್ರಭಾವವು