ಪ್ರಬಲವಾಗಿದ್ದರೂ, Ego ಕೊರಗಿನಿಂದ ಕರಗಿದರೆ, ಆಗ ನಿರ್ಬಲವಾಗುತ್ತದೆ. ಕಾಡು ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸಗಳಲ್ಲಿ ಇದೊಂದು ಮುಖ್ಯವಾದುದು.
ಆಸೆಯು ನಿರಾಸೆಯಾದರೆ, ಮನಸ್ಸಿನ ಮೇಲೆ ಮತ್ತೊಂದು ರೀತಿಯ ಪರಿಣಾಮವಾಗಬಹುದು. ವಕ್ರಗತಿಯಲ್ಲಿ ಮನಸ್ಸು ನಡೆಯತೊಡಗಿ, ಸಮಾಜ ವಿಚ್ಛಿದ್ರಕ ಅಪರಾಧಗಳನ್ನು ಮಾಡಿಸುತ್ತದೆ.
ಚುನಾವಣೆಯಲ್ಲಿ ಶ್ರೀಮಂತನೊಬ್ಬನು ಅಭ್ಯರ್ಥಿಯಾಗಿ ನಿಲ್ಲುತ್ತಾನೆ. ಅಪಾರ ಹಣವನ್ನು ಖರ್ಚುಮಾಡುತ್ತಾನೆ. ಖಂಡಿತವಾಗಿಯೂ ಅಸೆಂಬ್ಲಿ ಮೆಂಬರಾಗುತ್ತೇನೆ ಎನ್ನುವ ಹಿರಿಯಾಸೆಯು ಮೂಡಿರುತ್ತದೆ. ಹಲವಾರು ಕಾರಣಗಳಿಂದ ಅವ ಠೇವಣಿ ಹಣವನ್ನು ಕಳೆದುಕೊಳ್ಳುತ್ತಾನೆ. ನಿರಾಸೆಯು ಇಂತಹವನಲ್ಲಿ ತೀವ್ರವಾಗಿರುತ್ತದೆ. ಕಾನೂನುಗಳ ಪ್ರಕಾರ ಏನನ್ನೂ ಮಾಡಬರುವಂತಿಲ್ಲ. ಆಗ ಅವನ ಮನಸ್ಸು ವಕ್ರಗತಿಯಲ್ಲಿ ನಡೆಯುತ್ತದೆ. ಜಯ ಗಳಿಸಿದ ಅಭ್ಯರ್ಥಿಯ ವಿರುದ್ಧ ಅಪಪ್ರಚಾರವನ್ನು ಮಾಡತೊಡಗುತ್ತಾನೆ. ತಲೆಗೆ ಮುಸುಕು ಹಾಕಿಕೊಂಡು ಇಂತಹ ಗಲ್ಲಿಯ ಅಂತಹ ಮನೆಗೆ ರಾತ್ರಿ ಹೋಗುತ್ತಾನೆ, ಎಂದು ಸುದ್ದಿಯನ್ನು ಹೊರಡಿಸುತ್ತಾನೆ. ತನ್ನ ಕಾರಿನಲ್ಲಿ ಧೈರ್ಯವಾಗಿ ಹೋಗುವುದಿಲ್ಲ. ಆಟೋರಿಕ್ಷಾದಲ್ಲಿ ತಲೆ ಮರೆಸಿಕೊಂಡು ಹೋಗುತ್ತಾನೆ. ಎಂದು ಮೊದಲ ಸುದ್ದಿಗೆ ಒಗ್ಗರಣೆಯನ್ನು ಹಾಕುತ್ತಾನೆ. ದಿನ ಪತ್ರಿಕೆಗಳಲ್ಲಿ ಅನಾಮಧೇಯವಾದ ಪತ್ರಗಳನ್ನು ಇತರರ ಮೂಲಕ ಪ್ರಕಟಿಸುತ್ತಾನೆ. Character-Assasination ಎಂಬುದು ನಿರಾಸೆಯು ನಡಸುವ ವಕ್ರವಾದ ಕಾರ್ಯಕ್ರಮ.
ನಿರಾಸೆಯ ಕೊರಗು ಸೋತ ಅಭ್ಯರ್ಥಿಯ ಮನಸ್ಸಿಗೆ ಸ್ವಲ್ಪ ಸಮಾಧಾನವನ್ನು ನೀಡುತ್ತದೆ.
ಈ ರೀತಿಯ ವಕ್ರಮಾರ್ಗದಲ್ಲಿ ಮನಸ್ಸು ನಡೆಯುವಾಗ, ಅದರ ಮೂರು ಪ್ರಮುಖ ಅಂಶಗಳು ಹೇಗೆ ಕಾರ್ಯಗತವಾಗುತ್ತವೆ ?
Id ಇನ ಪ್ರಭಾವವು ಪ್ರಬಲವಾಗಿರುತ್ತದೆ. ಆಹಾರದ ಸೆಳೆತಕ್ಕಿಂತಲೂ, ಕಾಮದ ಬರಸೆಳೆತಕ್ಕಿಂತಲೂ, ಸಮಾಜದಲ್ಲಿ ಗಣ್ಯನೆನಸಿಕೊಳ್ಳಬೇಕು, ಮನ್ನಣೆಯನ್ನು ಗಳಿಸಬೇಕು ಎನ್ನುವ ಆತುರವು ಹೊರವಾಗಿರುತ್ತದೆ, ಹಿರಿದಾಗಿರುತ್ತದೆ. ಕಾಡುಮೃಗಗಳಲ್ಲಿ Id ಇನ ಪ್ರಭಾವವು ವಿರೋಧಿಗಳನ್ನು ತಿವಿದು ಬಡಿದು ಹೇಳ ಹೆಸರಿಲ್ಲದಂತೆ ಮಾಡಿಸುತ್ತದೆ. ಆದರೆ ನಾಡ ಮಾನವನಲ್ಲಿ, ತಿವಿಯುವುದು, ಬಡಿಯುವುದು, ಹೆಸರನ್ನು ಅಪಮಾನಗೊಳಿಸುವುದು ; ಇವನ್ನೆಲ್ಲಾ ಮನಸ್ಸಿನ